ಮುಂಬೈ, ನ. 4: ಗ್ಲೋಬಲ್ ಹೆಲ್ತ್ ಸಂಸ್ಥೆ ಇಂದು ಐಪಿಒಗೆ ತೆರೆದುಕೊಳ್ಳುತ್ತಿದೆ. ಇಂದು ಆರಂಭವಾಗುವ ಐಪಿಒ ಆಫರ್ ನವೆಂಬರ್ 7, ಸೋಮವಾರದವರೆಗೂ ಇರಲಿದೆ. ಮೇದಾಂತ ಬ್ರ್ಯಾಂಡ್‌ನ ಆಸ್ಪತ್ರೆಗಳನ್ನು ಗ್ಲೋಬಲ್ ಹೆಲ್ತ್ ಸಂಸ್ಥೆ ನಿರ್ವಹಿಸುತ್ತದೆ. 2 ಸಾವಿರ ರೂಪಾಯಿಗೂ ಹೆಚ್ಚು ಬಂಡವಾಳ ಸಂಗ್ರಹಿಸುವ ಗುರಿಯೊಂದಿಗೆ ಗ್ಲೋಬಲ್ ಹೆಲ್ತ್ ಇಂದು ಐಪಿಒ ತೆರೆದಿದೆ.
ಐಪಿಒಗೆ ಪೂರ್ವಭಾವಿಯಾಗಿ ಆಂಕರ್ ಇನ್ವೆಸ್ಟರ್ಸ್, ಅಂದರೆ ಸಾಂಸ್ಥಿಕ ಹೂಡಿಕೆದಾರರಿಂದ ಗ್ಲೋಬಲ್ ಹೆಲ್ತ್ 662 ಕೋಟಿ ರೂ ಬಂಡವಾಳ ಪಡೆದಿದೆ. ಇದೀಗ ಐಪಿಒ ಮೂಲಕ 2,206 ಕೋಟಿ ರೂ ಗಳಿಸುವ ಇರಾದೆಯಲ್ಲಿದೆ. ಐದು ಕೋಟಿಗೂ ಹೆಚ್ಚು ಈಕ್ವಿಟಿ ಷೇರುಗಳನ್ನು ಸಂಸ್ಥೆ ಮಾರುತ್ತಿದೆ.
ಗ್ಲೋಬಲ್ ಹೆಲ್ತ್ ಐಪಿಒ ವಿವರ:
ಐಪಿಒ ದಿನ: 2022, ನವೆಂಬರ್ 3-7
ಫೇಸ್ ವ್ಯಾಲ್ಯೂ: ಪ್ರತೀ ಷೇರಿಗೆ 2 ರೂ
ಷೇರು ಬೆಲೆ: ಪ್ರತೀ ಷೇರಿಗೆ ರೂ 319ರಿಂದ 336
ಲಾಟ್ ಗಾತ್ರ: 44 ಷೇರುಗಳು
ಷೇರು ಸಂಖ್ಯೆ: 5,07,61,000
ಒಟ್ಟು ಮೌಲ್ಯ: 2205.57 ಕೋಟಿ ರೂಪಾಯಿ

ಗ್ಲೋಬಲ್ ಹೆಲ್ತ್ ಷೇರು ಕೊಳ್ಳಬಹುದಾ?
ಹಲವು ವಿಶ್ಲೇಷಕರು ಗ್ಲೋಬಲ್ ಹೆಲ್ತ್ ಐಪಿಒ ಆಫರ್ ಬಗ್ಗೆ ಸಕಾರಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಿವೆ. ಜಿಯೋಜಿತ್, ಆಶಿಕಾ ರೀಸರ್ಚ್ ಮೊದಲಾದ ಸಂಸ್ಥೆಗಳು ಗ್ಲೋಬಲ್ ಹೆಲ್ತ್ ಐಪಿಒದಲ್ಲಿ ಷೇರುಗಳನ್ನು ಕೊಳ್ಳಬಹುದು ಎಂದು ಶಿಫಾರಸು ಮಾಡಿವೆ.


Click it and Unblock the Notifications