Meesho Job: ಹಬ್ಬದ ಸೀಸನ್, ಮೀಶೋನಲ್ಲಿ 5 ಲಕ್ಷ ಉದ್ಯೋಗವಕಾಶ!

ಹಬ್ಬದ ಸೀಸನ್ ಎಂದಾಗ ಎಲ್ಲೆಂದರಲ್ಲಿ ಶಾಪಿಂಗ್ ನಡೆಯುತ್ತಾ ಇರುತ್ತದೆ. ಈ ನಡುವೆ ಈ ಸೀಸನ್‌ಗಾಗಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸುವ ನಿರ್ಧಾರವನ್ನು ಹಲವಾರು ಆನ್‌ಲೈನ್ ಡೆಲಿವರಿ ಸಂಸ್ಥೆಗಳು ಮಾಡಿದೆ. ಈಗ ಹಬ್ಬದ ಸೀಸನ್‌ನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಮಾರಾಟ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನಲ್ಲಿ ಸುಮಾರು ಸುಮಾರು 5 ಲಕ್ಷ ಉದ್ಯೋಗಾವಕಾಶಗಳನ್ನು ನೀಡಲಾಗುತ್ತದೆ ಎಂದು ಸಾಫ್ಟ್‌ಬ್ಯಾಂಕ್ ಬೆಂಬಲಿತ ಇ-ಕಾಮರ್ಸ್ ಸಂಸ್ಥೆ ಮೀಶೋ ಹೇಳಿದೆ.

ಕಳೆದ ವರ್ಷ ಮೀಶೋ ಹಬ್ಬದ ಸೀಸನ್‌ನಲ್ಲಿ ಸೃಷ್ಟಿ ಮಾಡಿದ್ದ ಉದ್ಯೋಗಗಳ ಸಂಖ್ಯೆಗೆ ನಾವು ಈ ಬಾರಿಯ ಉದ್ಯೋಗವಕಾಶವನ್ನು ಹೋಲಿಕೆ ಮಾಡಿದಾಗ, ಶೇಕಡ 50 ರಷ್ಟು ಏರಿಕೆ ಕಂಡು ಬರುತ್ತದೆ. ಇಕಾಮ್ ಎಕ್ಸ್‌ಪ್ರೆಸ್, ಡಿಟಿಡಿಸಿ, ಎಲಾಸ್ಟಿಕ್ ರನ್, ಲೋಡ್‌ಶೇರ್, ಡೆಲ್ಲಿವರಿ, ಶಾಡೋಫ್ಯಾಕ್ಸ್ ಮತ್ತು ಎಕ್ಸ್‌ಪ್ರೆಸ್‌ಬೀಸ್‌ನಂತಹ ಥರ್ಡ್-ಪಾರ್ಟಿ ಲಾಜಿಸ್ಟಿಕ್ಸ್‌ಗಳಿಗಾಗಿ ಸುಮಾರು 2 ಲಕ್ಷ ಉದ್ಯೋಗಾವಕಾಶಗಳನ್ನು ಆರಂಭಿಸುವ ಗುರಿ ಮೀಶೋ ಹೊಂದಿದೆ.

 Meesho Job: ಹಬ್ಬದ ಸೀಸನ್, ಮೀಶೋನಲ್ಲಿ 5 ಲಕ್ಷ ಉದ್ಯೋಗವಕಾಶ!

ಈ ಪೈಕಿ ಸುಮಾರು ಶೇಕಡ 60 ಕ್ಕಿಂತ ಹೆಚ್ಚಿನ ಉದ್ಯೋಗವಕಾಶಗಳು ಶ್ರೇಣಿ-III ಮತ್ತು ಶ್ರೇಣಿ-IV ಕ್ಕೆ ಸೇರಿದೆ. ಈ ಶ್ರೇಣಿಯ ಉದ್ಯೋಗಿಗಳು ಮುಖ್ಯವಾಗಿ ಡೆಲಿವರಿ ಪಿಕಿಂಗ್, ವಿಂಗಡಣೆ, ಲೋಡಿಂಗ್, ಅನ್‌ಲೋಡಿಂಗ್, ರಿಟರ್ನ್ ವೆರಿಫಿಕೇಷನ್‌ನಂತಹ ಜವಾಬ್ದಾರಿಯನ್ನು ವಹಿಸಿಕೊಂಡು ಕೆಲಸ ಮಾಡುವವರಾಗಿರುತ್ತಾರೆ.

"ಹಬ್ಬದ ಸೀಸನ್‌ನಲ್ಲಿ ನಮ್ಮ ವಸ್ತುಗಳ ಬೇಡಿಕೆಯಲ್ಲಿ ಗಣನೀಯ ಏರಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ಈ ನಡುವೆ ಉದ್ಯೋಗವಕಾಶ ಸೃಷ್ಟಿಯು ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ತ್ವರಿತ ಸೇವೆ ನೀಡುವ ನಿಟ್ಟಿನಲ್ಲಾಗಿದೆ. ಹಾಗೆಯೇ ಅಸಂಖ್ಯಾತ ಸಣ್ಣ ವ್ಯಾಪಾರಗಳನ್ನು ಸಬಲೀಕರಣಗೊಳಿಸುವುದರ ಮೇಲೆ ನಾವು ಗಮನ ಹರಿಸುತ್ತೇವೆ," ಎಂದು ಅಧಿಕಾರಿ ಸೌರಭ್ ಪಾಂಡೆ ಹೇಳಿದರು.

ಇದರ ಜೊತೆಗೆ ಮೀಶೋ ಹಬ್ಬದ ಸೀಸನ್‌ಗಾಗಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಿರ್ಧಾರ ಮಾಡಿದೆ. ಈ ಸೀಸನಲ್ ವರ್ಕರ್ಸ್‌ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡಲಿದ್ದಾರೆ. ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ವಿಂಗಡಣೆ ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಲಿದ್ದಾರೆ.

ಈ ನಡುವೆ ಮೀಶೋನಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಮತ್ತು ಫ್ಯಾಶನ್, ಹಬ್ಬದ ಅಲಂಕಾರಗಳಂತಹ ಹೊಸ ಉತ್ಪನ್ನ ಪರಿಚಯಿಸುವ ಸಾಹಸವನ್ನು ಮಾಡಲು ಮುಂದಾಗಿದ್ದಾರೆ. ಹೆಚ್ಚಿದ ಬೇಡಿಕೆಗೆ ಸಿದ್ಧರಾಗಿರಲು ಶೇಖರಣೆಯನ್ನು ಹೆಚ್ಚಳ ಮಾಡಿಕೊಂಡಿದ್ದಾರೆ.

ಮುಂಬರುವ ಹಬ್ಬದ ಸೀಸನ್‌ಗೆ ಇ-ಕಾಮರ್ಸ್ ಕಂಪನಿಗಳು ಹೆಚ್ಚಿನ ಬೇಡಿಕೆಯನ್ನು ನಿಭಾಯಿಸಲು ಸಜ್ಜಾಗುತ್ತಿದ್ದಂತೆ, ಭಾರತದಲ್ಲಿ ಒಟ್ಟಾಗಿ 5 ಲಕ್ಷ ಹೊಸ ತಾತ್ಕಾಲಿಕ ಉದ್ಯೋಗವನ್ನು ಸೃಷ್ಟಿ ಮಾಡಿದೆ. ಇನ್ನು ವಿತರಣಾ ಸ್ಥಳ ಮತ್ತು ಗೋದಾಮಿನ ಕಾರ್ಯಾಚರಣೆಗಳಲ್ಲಿ ಇನ್ನೂ ಕೂಡಾ 2 ಲಕ್ಷ ಉದ್ಯೋಗಿಗಳು ಬೇಕಾಗಲಿದ್ದಾರೆ. ಇದರಿಂದಾಗಿ ಡಿಸೆಂಬರ್ ವೇಳೆಗೆ ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7 ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಬೇರೆ ಡೆಲಿವರಿ ಸಂಸ್ಥೆಗಳಲ್ಲಿ ಉದ್ಯೋಗವಕಾಶ

ಹಬ್ಬದ ಸೀಸನ್‌ಗೆ ಮುಂಚಿತವಾಗಿ, ವಾಲ್‌ಮಾರ್ಟ್ ಒಡೆತನದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಇತ್ತೀಚೆಗೆ 1,00,000 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ಹೇಳಿದೆ. ಆನ್‌ಲೈನ್ ಫ್ಯಾಷನ್ ಸಂಸ್ಥೆ ಮಿಂತ್ರಾ ಮಹಿಳೆಯರ ನೇಮಕಾತಿ ಹೆಚ್ಚಿಸಲು ಮುಂದಾಗಿದೆ. ಕಳೆದ ವರ್ಷದ ನೇಮಿಸಿದ್ದ ಮಹಿಳೆಯರಿಗಿಂತ ಈ ವರ್ಷ ಶೇಕಡ 21ರಷ್ಟು ಅಧಿಕ ಮಹಿಳೆಯರನ್ನು ನೇಮಿಸಲು ಮಿಂತ್ರಾ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+