ಬೆಂಗಳೂರು, ಆಗಸ್ಟ್ 27: ನೀವು ಸಾಮಾಜಿಕ ಜಾಲತಾಣದಲ್ಲಿ ಅಕ್ಟಿವ್ ಆಗಿದ್ರೆ ಸ್ಕೂಟರ್ ಜೊತೆ ಎಳೆನೀರು ಹೀರುತ್ತಾ ನಿಂತಿರುವ ಬ್ರಾಹ್ಮಿನ್ ಜೀನ್ಸ್ ಎಂಬ ಕ್ಯಾಪ್ಷನ್ಸ್ ಇರುವ ವೈರಲ್ ಆಗಿದ್ದ ಪೋಟೋ ನೋಡಿರುತ್ತೀರಾ. ಎರಡು ಪದಗಳ ಶೀರ್ಷಿಕೆ ಟ್ವಿಟರ್ ನಲ್ಲಿ ಬಹು ದೊಡ್ದ ಚರ್ಚೆಯ ಅಲೆ ಎಬ್ಬಿಸಿದೆ.
ಅಂದಹಾಗೆ ಈ ಯುವತಿ ದೆಹಲಿ ಮೂಲದವರಾಗಿದ್ದು ಇವರ ಹೆಸರು ಅನುರಾಧ ತಿವಾರಿ. ಬೆಂಗಳೂರಿನಲ್ಲಿರು ಕಂಟೆಂಟ್ ಮಾರ್ಕೆಟಿಂಗ್ ಕಂಪನಿಯ ಸಿಇಒ ಎಂದು ಹೇಳಿಕೊಂಡಿರುವ ಇವರು ತಮ್ಮ ಎಕ್ಸ್ ಖಾತೆಯಲ್ಲಿ ಆ.22 ರ ಗುರುವಾರ ಮಧ್ಯಾಹ್ನ ಬ್ರಾಹ್ಮಣ ವಂಶವಾಹಿ ತನ್ನದು ಎಂಬರ್ಥದಲ್ಲಿ ಶೀರ್ಷಿಕೆ ಹಾಕಿದ್ದರು. ಜಾತಿ ಸೂಚಕ ಪೋಸ್ಟ್ ಹಾಕಿದ್ದಕ್ಕೆ ಭಾರೀ ಪರ - ವಿರೋಧ ಚರ್ಚೆಗಳು ನಡೆಯುತ್ತಿದ್ದು ಐದೇ ದಿನದಲ್ಲಿ 6.8 ಮಿಲಿಯನ್ ವಿವ್ಸೂ ಕಂಡಿದ್ದು. 4 ಸಾವಿರಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ. ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲ ನೆಟ್ಟಿಗರು ಇವರ ಶಿರ್ಷಿಕೆಗೆ ವಿರೋಧ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಅನುರಾಧಾ ತಿವಾರಿ ಅವರ ಪರವಾಗಿ ನಿಂತಿದ್ದಾರೆ. ಈ ಚರ್ಚೆ ಈಗ ಮೇಲ್ಜಾತಿ ಹಾಗೂ ಕೆಳಜಾತಿ ಎಂಬ ವಾದದ ತಿರುವು ಪಡೆದುಕೊಂಡಿದೆ.

ತಮ್ಮ 'ಬ್ರಾಹ್ಮಿನ್‌ಜೀನ್ಸ್' ಪೋಸ್ಟ್ ವೈರಲ್ ಆಗಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಇನ್ನೊಂದು ಪೋಸ್ಟ್ ಮಾಡಿರುವ ಅನುರಾಧಾ, ಕೇವಲ ಒಂದು ಪೋಸ್ಟ್‌ಗೆ ಬಂದ ಟೀಕೆಗಳು ನಿಜವಾದ ಜಾತಿವಾದವನ್ನು ಹಾಗೂ ಬ್ರಾಹ್ಮಣ ದ್ವೇಷವನ್ನು ಬಯಲುಗೊಳಿಸಿದೆ ಎಂದಿದ್ದಾರೆ. ಈ ಸಂಬಂಧ ಅವರು ಸಾಲು ಸಾಲು ಟ್ವೀಟ್‌ಗಳನ್ನು ಮಾಡಿರುವ ಅವರು ಯಾವುದೇ ಮೀಸಲಾತಿ ಹಾಗೂ ಉಚಿತಗಳನ್ನು ಪಡೆಯದೆ ಕಷ್ಟಪಟ್ಟು ಮೇಲೆ ಬಂದ ನಮ್ಮ ಸಮುದಾಯದವರು ತಾವು ಬ್ರಾಹ್ಮಣರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಸಮರ್ಥಿಸಿಕೊಂಡಿದ್ದರು.
ಮತ್ತೊಂದು ಪೋಸ್ಟ್ ನಲ್ಲಿ "ನಿರೀಕ್ಷೆಯಂತೆಯೇ 'ಬ್ರಾಹ್ಮಣ' ಎಂಬ ಒಂದೇ ಪದ ಹೇಳಿದ ಕೂಡಲೇ ಅನೇಕ ಕೀಳರಿಮೆಯುಳ್ಳ ಮನಸುಗಳನ್ನು ಕೆರಳಿಸಿದೆ. ಈ ಮೂಲಕ ತಮ್ಮಲ್ಲಿರುವ ನಿಜವಾದ ಜಾತಿವಾದಿ ಮನಸ್ಥಿತಿಯನ್ನು ಹೊರಹಾಕುತ್ತಿವೆ. ಮೇಲ್ಜಾತಿ ಜನರಿಗೆ ವ್ಯವಸ್ಥೆಯಿಂದ ಏನೂ ಸಿಗುವುದಿಲ್ಲ- ಮೀಸಲಾತಿ ಇಲ್ಲ, ಉಚಿತ ಕೊಡುಗೆಗಳಿಲ್ಲ. ಎಲ್ಲವನ್ನೂ ಸ್ವಂತ ಶ್ರಮದಿಂದಲೇ ನಾವು ದುಡಿಯುತ್ತೇವೆ ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲು ನಮಗೆ ಎಲ್ಲ ಹಕ್ಕೂ ಇವೆ ಡೀಲ್ ವಿತ್ ಇಟ್" ಎಂದು ಅನುರಾಧಾ ಹೇಳಿದ್ದಾರೆ.
ಹಾಗಾದರೆ, ಅನುರಾಧಾ ತಿವಾರಿ ಯಾರು?
1. ಅನುರಾಧಾ ತಿವಾರಿ ಅವರು ಬೆಂಗಳೂರು ಮೂಲದ ಉದ್ಯಮಿ. ಅವರು JustBurstOut ಸಂಸ್ಥಾಪಕರಾಗಿದ್ದಾರೆ . ಕಂಟೆಂಟ್ ರೈಟಿಂಗ್ ಏಜೆನ್ಸಿಯಾಗಿದೆ.
2. ಅವರು TEDx ಸ್ಪೀಕರ್(ಭಾಷಣಕಾರರು) ಆಗಿದ್ದು, ಅವರು "ನಿಮ್ಮ ಟ್ಯಾಲೆಂಟ್ ಆಂದೋಲನವನ್ನು ಮಾರಾಟ ಮಾಡಿ" ಎಂಬ ಕುರಿತು ಭಾಷಣ ಮಾಡಿದ್ದಾರೆ.
3. ಅನುರಾಧ ತಿವಾರಿ ಅವರನ್ನು "ಇಂಡಿಯಾ ಟುಡೇ' 2014 ರಲ್ಲಿ ಭಾರತದ ಎಂಟು ವಿಶಿಷ್ಟ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿದೆ.
4. ಅಪೋಲೋ ಹಾಸ್ಪಿಟಲ್ಸ್, ರೇನ್ಬೋ ಹಾಸ್ಪಿಟಲ್ಸ್, ನಾರಾಯಣ ಹೆಲ್ತ್, ಅಮಿಟಿ ಯೂನಿವರ್ಸಿಟಿ, ಕೇರ್ ಹಾಸ್ಪಿಟಲ್ಸ್, ಅಪ್‌ಗ್ರ್ಯಾಡ್, ನಾಲೆಡ್ಜ್‌ಹಟ್ ಮತ್ತು ವೇದಾಂತು
ಸೇರಿದಂತೆ 100 ಕ್ಕೂ ಹೆಚ್ಚು ಜಾಗತಿಕ ಕಂಪನಿಗಳಿಗೆ ತಮ್ಮ ಡಿಜಿಟಲ್ ಮತ್ತು ಬಳಕೆದಾರರ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಅವರು ಸಹಾಯ ಮಾಡಿದ್ದಾರೆ.
5. 2015 ರಲ್ಲಿ TEDx ಕುರಿತು ಹೆಚ್ಚು ಮಾತನಾಡುವ 10 ಸ್ಪೀಕರ್‌ಗಳಲ್ಲಿ" ಅವರು ಕೂಡ ಒಬ್ಬರು ಎಂದು ಪಟ್ಟಿಮಾಡಲಾಗಿದೆ.
6. ತಿವಾರಿ ಅವರು Quora ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು X ನಲ್ಲಿ ಸುಮಾರು 60,000 ಅನುಯಾಯಿಗಳನ್ನು ಹೊಂದಿದ್ದಾರೆ.
7. ಮೂಲತಃ ದೆಹಲಿಯವರಾದ ತಿವಾರಿ ಅವರು ಉದ್ಯಮಶೀಲತೆಗೆ ತೊಡಗುವ ಮೊದಲು ಮೆಕ್ಯಾನಿಕಲ್ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
8. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ದುಬಾರಿ ಕೋಚಿಂಗ್ ಶುಲ್ಕವನ್ನು ಪಡೆಯಲು ಸಾಧ್ಯವಾಗದ JEE ಆಕಾಂಕ್ಷಿಗಳಿಗಾಗಿ TORQUIES ಎಂಬ ಕೋಚಿಂಗ್ ಸಂಸ್ಥೆಯನ್ನು ಪ್ರಾರಂಭಿಸಿದರು. ಇಲ್ಲಿ ಸುಲಭವಾಗಿ ಕಡಿಮೆ ಶುಲ್ಕದಲ್ಲಿ ಕೋಚಿಂಗ್ ನಡೆಸುತ್ತಿದ್ದರು
9. ತಿವಾರಿ ನಂತರ ಎನ್‌ಜಿಒ ಎಂಪವರಿಂಗ್ ಇಂಡಿಯನ್ ವುಮೆನ್ (ಇಐಡಬ್ಲ್ಯು) ಅನ್ನು ಸ್ಥಾಪಿಸಿದರು, ಇದು ಮಹಿಳೆಯರಿಗೆ ಮೂಲಭೂತ ಶಿಕ್ಷಣವನ್ನು ಒದಗಿಸುತ್ತದೆ.
10. ಇವರು ವಾಟರ್ ಬರ್ನ್ಸ್‌ನ ಲೇಖಕಿಯೂ ಆಗಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications