ಬೆಂಗಳೂರು ಮೂಲದ ಎಐ ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್‌ರನ್ನು ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಮಗುವಿನ ದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಕ್ಯಾಬ್‌ನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.
ಪೋಲೀಸರ ಪ್ರಕಾರ, ತನ್ನ ಪತಿಯೊಂದಿಗೆ ದೂರವಾಗಿದ್ದು, ಈ ಕಾರಣದಿಂದಾಗಿ ಮಗನನ್ನು ಹತ್ಯೆ ಮಾಡಿದ್ದಾಳೆ ಎಂದು ಆರೋಪ ಮಾಡಲಾಗಿದೆ. ಸುಚನಾ ಸೇಠ್ ಶನಿವಾರ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದು, ಸೋಮವಾರ ಬೆಳಿಗ್ಗೆ ಚೆಕ್‌ಔಟ್ ಆಗಿದ್ದರು.

ಸುಚನಾ ಸೇಠ್ ಯಾರು?
* ಸುಚನಾ ಸೇಠ್ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಂಸ್ಥಾಪಕರು ಆಗಿದ್ದಾರೆ. ಅವರು ನಾಲ್ಕು ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ, ಇದು ಕೃತಕ ಬುದ್ಧಿಮತ್ತೆಯಲ್ಲಿ ಪ್ರಗತಿಯ ಮೇಲೆ ಹೆಚ್ಚು ಕೇಂದ್ರಿಕರಿಸುವ ಸಂಸ್ಥೆ ಇದಾಗಿದೆ.
* ಸುಚನಾ ಸೇಠ್ ಎರಡು ವರ್ಷಗಳ ಕಾಲ ಬರ್ಕ್‌ಮನ್ ಕ್ಲೈನ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಮ್ಯಾಸಚೂಸೆಟ್ಸ್‌ನ ಬೋಸ್ಟನ್‌ನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಜವಾಬ್ದಾರಿಯುತ ಯಂತ್ರ ಕಲಿಕೆಗೆ ಕೊಡುಗೆ ನೀಡಿದ್ದಾರೆ.
* ದಿ ಮೈಂಡ್‌ಫುಲ್ ಎಐ ಲ್ಯಾಬ್ ಅನ್ನು ಸ್ಥಾಪಿಸುವ ಮೊದಲು, ಸುಚನಾ ಸೇಠ್ ಬೆಂಗಳೂರಿನ ಬೂಮರಾಂಗ್ ಕಾಮರ್ಸ್‌ನಲ್ಲಿ ಹಿರಿಯ ಡೇಟಾ ವಿಜ್ಞಾನಿಯಾಗಿದ್ದರು. ಪ್ರೈಸ್ ಆಪ್ಟಿಮೈಸೇಶನ್ ಮತ್ತು ಇಂಟಲಿಜೆನ್ಸ್‌ಗಾಗಿ ಡೇಟಾ-ಚಾಲಿತ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತಿದ್ದರು. ಈ ಅವಧಿಯಲ್ಲಿ ಅವರು ಎರಡು ಪೇಟೆಂಟ್‌ಗಳನ್ನು ಸಲ್ಲಿಸಿದರು. ಇನ್ನೋವೇಶನ್ ಲ್ಯಾಬ್ಸ್‌ನೊಂದಿಗೆ ಸಹ ಸಂಬಂಧ ಹೊಂದಿದ್ದರು. ಸೇಠ್ ಕಂಪನಿಯ ಡೇಟಾ ಸೈನ್ಸಸ್ ಗ್ರೂಪ್‌ನಲ್ಲಿ ಹಿರಿಯ ವಿಶ್ಲೇಷಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.
* ಸುಚನಾ ಸೇಠ್ ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಖಗೋಳ ಭೌತಶಾಸ್ತ್ರದೊಂದಿಗೆ ಪ್ಲಾಸ್ಮಾ ಭೌತಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಭೌತಶಾಸ್ತ್ರ (Plasma Physics with Astrophysics) ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಅಲ್ಲಿ 2008 ರಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಗೌರವವನ್ನು ಕೂಡಾ ಗಳಿಸಿದ್ದಾರೆ.
* ರಾಮಕೃಷ್ಣ ಮಿಷನ್ ಇನ್‌ಸ್ಟಿಟ್ಯೂಟ್ ಆಫ್ ಕಲ್ಚರ್‌ನಿಂದ ಪ್ರಥಮ ಶ್ರೇಣಿಯೊಂದಿಗೆ ಸಂಸ್ಕೃತದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಿದ್ದಾರೆ. ಕೋಲ್ಕತ್ತಾದ ಭವಾನಿಪುರ ಎಜುಕೇಶನ್ ಸೊಸೈಟಿ ಕಾಲೇಜಿನಿಂದ ಪ್ರಥಮ ದರ್ಜೆಯಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ತನ್ನ ಕಾಲೇಜು ದಿನಗಳಲ್ಲಿ, ಸೇಠ್ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.


Click it and Unblock the Notifications