ಈ ಹಿಂದೆ ಕಾಲುವೆಯಲ್ಲಿ ಸಿಲುಕುವ ಮೂಲಕ ಭಾರೀ ಸುದ್ದಿಯಾಗಿದ್ದ ತೈವಾನ್ ಮೂಲದ ಹಡಗು ಸಂಸ್ಥೆ ಎವರ್‌ಗ್ರೀನ್ ಈಗ ತನ್ನ ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್ ನೀಡುವ ಮೂಲಕ ಸುದ್ದಿಯಾಗಿದೆ. ಹೌದು ಎವರ್‌ಗ್ರೀನ್ ತಮ್ಮ ಉದ್ಯೋಗಿಗಳಿಗೆ ಬರೋಬ್ಬರಿ 4 ವರ್ಷದ ಅಂದರೆ 52 ವಾರಗಳ ವೇತನವನ್ನು ಬೋನಸ್ ಆಗಿ ನೀಡುತ್ತಿದೆ. ಕೆಲವು ಉದ್ಯೋಗಿಗಳಿಗೆ ಮಾತ್ರ ಸಂಸ್ಥೆಯು ಈ ವರ್ಷಾಂತ್ಯದ ಬೋನಸ್ ಅನ್ನು ನೀಡುತ್ತಿದೆ.
ಉದ್ಯೋಗಿಗಳ ಕಾರ್ಯವೈಖರಿಯನ್ನು ನೋಡಿಕೊಂಡು ಉತ್ತಮ ಕಾರ್ಯ ನಿರ್ವಹಣೆ ಮಾಡಿದ ಉದ್ಯೋಗಿಗಳನ್ನು ಗುರುತಿಸಿ ಸಂಸ್ಥೆಯು ಈ ಬೋನಸ್ ಅನ್ನು ನೀಡಿದೆ. ಹಾಗೆಯೇ ಇದು ತೈವಾನ್ ಆಧಾರಿತ ಉದ್ಯೋಗ ಒಪ್ಪಂದವನ್ನು ಹೊಂದಿರುವವರಿಗೆ ಮಾತ್ರ ಈ ಬೋನಸ್ ಅನ್ನು ನೀಡಲಾಗಿದೆ. ಆದರೆ ಕಾರ್ಯವೈಖರಿಯನ್ನು ನೋಡಿಕೊಂಡು ಬೋನಸ್ ಅನ್ನು ನಮ್ಮ ಸಂಸ್ಥೆಯಲ್ಲಿ ನೀಡಲಾಗುತ್ತದೆ ಎಂದು ಎವರ್‌ಗ್ರೀನ್ ಮರೈನ್ ಹೇಳಿದೆ.
ಇನ್ನು ಶಾಂಘೈ ಮೂಲದ ಉದ್ಯೋಗಿಗಳಿಗೆ ಸಂಸ್ಥೆಯು ಮಾಸಿಕ ವೇತನದ ಸುಮಾರು 5ರಿಂದ 8 ಪಟ್ಟನ್ನು ಬೋನಸ್ ಅನ್ನು ನೀಡಿದೆ. ಈ ತಾರತಮ್ಯವನ್ನು ಗಮನಿಸಿ ಈ ಸಿಬ್ಬಂದಿಗಳು ದೂರು ನೀಡಿದ್ದಾರೆ ಎಂದು ಸ್ಥಳೀಯ ಸಂಸ್ಥೆ ಕೈಕ್ಸಿನ್ ವರದಿ ಮಾಡಿದೆ. ಆದರೆ ಸಂಸ್ಥೆ ಮಾತ್ರ ನಾವು ಕಾರ್ಯಕ್ಷಮತೆ ಆಧಾರದಲ್ಲಿ ಬೋನಸ್ ನೀಡಿದ್ದೇವೆ ಎಂದು ತಿಳಿಸಿದೆ.

ಕಾಲುವೆಯಲ್ಲಿ ಸಿಲುಕಿದ್ದ ಎವರ್‌ಗ್ರೀನ್ ಸಂಸ್ಥೆಯ ಹಡಗು
2021ರ ಆರಂಭದಲ್ಲಿ ಎವರ್‌ಗ್ರೀನ್ ಸಂಸ್ಥೆಯ ಮಾಲೀಕತ್ವದಲ್ಲಿರುವ ಹಡಗೊಂದು ಕಾಲುವೆಯಲ್ಲಿ ಸಿಲುಕಿತ್ತು. ಇದು ಜಾಗತಿಕವಾಗಿ ಭಾರೀ ದೊಡ್ಡ ಸುದ್ದಿಯಾಗಿತ್ತು. ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಹಡಗು ಹಲವಾರು ದಿನಗಳ ಕಾಲ ಅಲ್ಲೇ ಬಾಕಿಯಾಗಿತ್ತು. ಇದರಿಂದಾಗಿ ಜಾಗತಿಕವಾಗಿ ಸರಬರಾಜು ವ್ಯವಸ್ಥೆಗೆ ಪೆಟ್ಟು ಬಿದ್ದಿತ್ತು.
ಇದಕ್ಕಾಗಿ ಸುಮಾರು 91.6 ಕೋಟಿ ಡಾಲರ್ ಅಥವಾ 6,813.07 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಸೂಯೆಜ್ ಕಾಲುವೆ ಪ್ರಾಧಿಕಾರ ಆಗ್ರಹಿಸಿತ್ತು. ಬಳಿಕ ಮಾತುಕತೆ ನಡೆಸಿ ಈ ಮೊತ್ತವನ್ನು 55.5 ಕೋಟಿ ಡಾಲರ್ 4,127.89 ಕೋಟಿ ರೂಪಾಯಿಗೆ ಇಳಿಸಲಾಗಿತ್ತು.
ಸಂಸ್ಥೆಯ ಆದಾಯ ಹೇಗಿದೆ ನೋಡಿ
ಎವರ್‌ಗ್ರೀನ್ ಸಂಸ್ಥೆಯು 2021ರಲ್ಲಿ ಸುಮಾರು ಶೇಕಡ 250ರಷ್ಟು ಲಾಭವನ್ನು ಗಳಿಸಿದೆ. ಷೇರು ಮಾರುಕಟ್ಟೆಯಲ್ಲಿಯೂ ಸಂಸ್ಥೆ ಎವರ್‌ಗ್ರೀನ್ ಆಗಿ ಉಳಿದಿದ್ದು, ಷೇರು ಮೌಲ್ಯ ಸುಮಾರು ಶೇಕಡ 54ರಷ್ಟು ಹೆಚ್ಚಾಗಿದೆ. ಈ ನಡುವೆ 2022ರಲ್ಲಿ ಎವರ್‌ಗ್ರೀನ್ ಸಂಸ್ಥೆಯ ಆದಾಯ 20.7 ಶತಕೋಟಿಗೆ ಹೆಚ್ಚಾಗುವ ಸಾಧ್ಯತೆಯಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications