ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಮಹತ್ವದ ಯೋಜನೆ ರೂಪಿಸಲು ಬಹುದೊಡ್ಡ ಮೊತ್ತದ ಒಪ್ಪಂದವಾಗಿದೆ. ಅದೇನೆಂದರೆ ಜಿಲ್ಲೆಯಲ್ಲಿರುವ ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ, ಎರಡು ಹೊಸ ಪರಮಾಣು ರಿಯಾಕ್ಟರ್‍ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಒಪ್ಪಂದ ಮಂಜೂರಾಗಿದೆ. ಅಂದಹಾಗೆ ಈ ಒಪ್ಪಂದದ ಅನುಸಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 700 ಮೆಗಾವಾಟ್ ಎಲೆಕ್ಟ್ರಿಕ್ ಸಾಮರ್ಥ್ಯದ ಕೈಗಾ ಘಟಕ 5 ಮತ್ತು 6 ಅನ್ನು ಸ್ಥಾಪನೆ ಮಾಡಲಾಗುತ್ತಿದೆ..

₹12,800 ಕೋಟಿ ಮೌಲ್ಯದ ಒಪ್ಪಂದ:
ಇನ್ನು ಈ ಯೋಜನೆಯು ಹೈದರಾಬಾದ್‌ನ ಮೇಘಾ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಮತ್ತು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL)ನದ್ದಾಗಿದೆ. ಇದೊಂದು ₹12,800 ಕೋಟಿ ಮೌಲ್ಯದ ದೊಡ್ಡ ಯೋಜನೆಯಾಗಿದೆ. ಈ ಒಪ್ಪಂದವನ್ನು ಎಂಜಿನಿಯರಿಂಗ್-ಪ್ರೊಕ್ಯೂರ್ಮೆಂಟ್-ಕನ್ಸ್ಟ್ರಕ್ಷನ್ (EPC) ಕೈಗೆತ್ತಿಕೊಂಡಿದೆ.
ಅಂದಹಾಗೆ NPCIL ಪಾಲಿಗೆ ಇದು ಇತಿಹಾಸದಲ್ಲೇ ಇಡೀ ದೇಶದ ಮಟ್ಟಿಗೆ ನೀಡಿದ, ಅತಿದೊಡ್ಡ ಆರ್ಡರ್ ಆಗಿದೆ. ಮೇಘ ಎಂಜಿನಿಯರಿಂಗ್ ಕಂಪನಿಯು ಪರಮಾಣು ಇಂಧನ ಕ್ಷೇತ್ರದಲ್ಲಿ ತನ್ನ ಮೊದಲನೆಯ ದೊಡ್ಡ ಹೆಜ್ಜೆ ಇಡಲು ಹೊಸ ಅವಕಾಶ ಸಿಕ್ಕಂತಾಗಿದೆ. ಈ ಮೂಲಕ MEIL ಪರಮಾಣು ತಂತ್ರಜ್ಞಾನದ ದಿಕ್ಕಿನಲ್ಲಿ ತಾನು ಈಗ ಮುಂದೆ ಬರುತ್ತಿರುವ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಮೊದಲ ಪ್ರಯೋಗದಲ್ಲಿ MEILಗೆ ಜಯ:
ಇನ್ನು ಗುಣಮಟದಟ, ವೆಚ್ಚ ಆಯ್ಕೆ ವಿಧಾನದ ಮೂಲಕ, NPCIL ತನ್ನ ಇತಿಹಾಸದಲ್ಲೇ ಮೊದಲ ಬಾರಿ ತೀರ್ಮಾನಿಸಿದ ಈ ಯೋಜನೆಗೆ MEIL ಆಯ್ಕೆಯಾಗಿರುವುದು ವಿಶೇಷ ಎಂದು ಹೇಳಬಹುದು. ಈ ವಿಧಾನದಲ್ಲಿ ಕಂಪನಿಯ ತಾಂತ್ರಿಕ ಶಕ್ತಿಯೊಂದಿಗೆ ಅದರ ವೆಚ್ಚ ಪ್ರಸ್ತಾವನೆಯ ನಡುವಿನ ಸಮತೋಲನ ಪರಿಶೀಲನೆ ಮಾಡಲಾಗುತ್ತದೆ. ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಮತ್ತು ಲಾರ್ಸನ್ & ಟುಬ್ರೋ (L&T) ಸೇರಿ ಈ ಕ್ಷೇತ್ರದ ದಿಗ್ಗಜ ಕಂಪನಿಗಳ ನಡುವೆ ನಡೆದ ಸ್ಪರ್ಧೆಯಲ್ಲಿ MEIL ತನ್ನ ತಾಂತ್ರಿಕ ಪ್ರಬಲತೆಯೂ ಬೆಲೆಯ ಸ್ಪರ್ಧಾತ್ಮಕತೆಯೂ ಮೂಲಕ ಮುಂಚೂಣಿಗೆ ಬಂದಿತು.
ಮುಂಬೈಯಲ್ಲಿ ಒಪ್ಪಂದದ ಹಸ್ತಾಂತರ:
ಈ ಒಂದು ಬೃಹತ್ ಯೋಜನೆಯ ಅಧಿಕೃತ ಒಪ್ಪಂದವನ್ನು, ಮುಂಬೈನಲ್ಲಿರುವ NPCIL ಕೇಂದ್ರ ಕಚೇರಿಯಲ್ಲಿ ಹಸ್ತಾಂತರಿಸಲಾಯ್ತು. MEIL ನಿರ್ದೇಶಕರಾದ ಪಿ. ಸುಬ್ಬಯ್ಯ ಅವರ ನೇತೃತ್ವದ ತಂಡಕ್ಕೆ ಈ ಯೋಜನೆ ಹಸ್ತಾಂತರಿಸಲಾಗಿದೆ. ಗಾಗೆಯೇ ಈ ಸಂದರ್ಭದಲ್ಲಿ NPCIL ಅಧಿಕಾರಿಗಳು, ತಾಂತ್ರಿಕ ಮತ್ತು ಆಡಳಿತ ತಂಡದ ಸದಸ್ಯರು ಉಪಸ್ಥಿತರಿದ್ದರು.
ಸ್ವಾವಲಂಬಿ ಭಾರತದ ಗುರಿಗೆ ಬೆಂಬಲ ನೀಡುವ ಯೋಜನೆ:
MEIL ಈ ಯೋಜನೆಯನ್ನು ಕೇವಲ ತಾಂತ್ರಿಕ ಸವಾಲುಗಳ ಒಂದು ರೂಪವಾಗಿ ನೋಡುವುದಿಲ್ಲ. ಅದು ದೇಶದ ಶಕ್ತಿಸಾಮರ್ಥ್ಯವನ್ನು ಹೆಚ್ಚಿಸಿ, "ಆತ್ಮನಿರ್ಭರ್ ಭಾರತ್" ಅಭಿಯಾನಕ್ಕೆ ಸಹಕಾರ ನೀಡುವ ಒಂದು ಸೌಲಭ್ಯವನ್ನಾಗಿ ಪರಿಗಣಿಸುತ್ತಿದೆ. "ಈ ಯೋಜನೆ ದೇಶದ ಬೆಳವಣಿಗೆಯ ಕಥೆಯಲ್ಲಿ ನಮ್ಮ ಪಾತ್ರವನ್ನು ಇನ್ನಷ್ಟು ಬಲಪಡಿಸುತ್ತದೆ," ಎಂಬ ಹೇಳಿಕೆಯನ್ನು MEIL ನೀಡಿದೆ.
ಸಮಯ ಪಾಲನೆಯತ್ತ ದೃಢ ನಂಬಿಕೆ:
MEIL ಈ ಯೋಜನೆಯನ್ನು ಸುರಕ್ಷತೆ, ಗುಣಮಟ್ಟ ಹಾಗೂ ಸಂಪೂರ್ಣ ಜವಾಬ್ದಾರಿಯೊಂದಿಗೆ ಮುಗಿಸಲು ತಾವು ಸಿದ್ಧವಿರುವುದಾಗಿ ಹೇಳಿದೆ. "ಸಮಯಪಾಲನೆಯ ಜೊತೆಗೇ ತಾಂತ್ರಿಕ ಶ್ರೇಷ್ಠತೆಯಲ್ಲಿಯೂ ನಾವು ವಿಶ್ವಾಸಾರ್ಹರಾಗಿದ್ದೇವೆ" ಎಂದು ಕಂಪನಿಯ ನಾಯಕತ್ವ ಸ್ಪಷ್ಟಪಡಿಸಿದೆ.
ಭಾರತದ ಮೂಲಸೌಕರ್ಯ ಭವಿಷ್ಯದಲ್ಲಿ MEILನ ಪಾತ್ರ:
ಈ ಹೊಸ ಒಪ್ಪಂದವು MEIL ಗೆ ಪರಮಾಣು ಶಕ್ತಿಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ. ಈ ಕಂಪನಿಯು ಈಗಾಗಲೇ ವಿದ್ಯುತ್ ಉತ್ಪಾದನೆ, ನೀರಾವರಿ ಯೋಜನೆಗಳು, ಹೈಡ್ರೋಕಾರ್ಬನ್ ವಲಯ, ಪೈಪ್ಲೈನ್ ನಿರ್ಮಾಣ, ರಕ್ಷಣಾ ಮೂಲಸೌಕರ್ಯ, ಸಂಚಾರ ವ್ಯವಸ್ಥೆಗಳು, ಎಲ್‌ಎನ್‌ಜಿ ವಿತರಣೆ, ವಿದ್ಯುತ್ ಚಲನಶೀಲತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ತನ್ನ ಪಾದಾರ್ಪಣೆ ಮಾಡಿದ್ದು, ಪರಮಾಣು ಶಕ್ತಿಯತ್ತ ಈ ಸಾಗಣೆ ಅದರ ವಿಸ್ತರಿಸಬಹುದಾದ ತಾಂತ್ರಿಕ ಸಾಮರ್ಥ್ಯಕ್ಕೆ ಮತ್ತೊಂದು ಪಟ್ಟಿ ಸೇರಿಸುತ್ತಿದೆ.


Click it and Unblock the Notifications