For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ನೇರವಾಗಿ ಕಾರುಗಳ ಮಾರಾಟ ಮಾದರಿ ಪ್ರಕಟಿಸಿದ ಮರ್ಸಿಡಿಸ್ ಬೆಂಜ್

|

ಕಾರುಗಳ ಬೆಲೆಯಲ್ಲಿ ಹೆಚ್ಚು ಪಾರದರ್ಶಕತೆ ತರುವ ದೃಷ್ಟಿಯಿಂದಾಗಿ ಭಾರತದಲ್ಲಿನ ತನ್ನ ಗ್ರಾಹಕರಿಗೆ ನೇರವಾಗಿ ಕಾರುಗಳ ಮಾರಾಟದ ಮಾದರಿಯನ್ನು ವಿಶ್ವದ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಜ್ ಬುಧವಾರ ಪ್ರಕಟಿಸಿದೆ.

 

ಮರ್ಸಿಡಿಸ್ ಬೆಂಜ್‌ ಶೋರೂಂ ಮಾರಾಟದಲ್ಲಿ, ವ್ಯಾಪಾರಿ ಮಟ್ಟದಲ್ಲಿ ಯಾವುದೇ ರೀತಿಯ ರಿಯಾಯಿತಿಯನ್ನು ದೂರವಿಡಲು ಮರ್ಸಿಡಿಸ್ ಪ್ರಯತ್ನಿಸುತ್ತಿದೆ. ಗ್ರಾಹಕರಿಗೆ ಕಂಪನಿಯ ನೇರ ಬೆಲೆಯನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ.

ಗ್ರಾಹಕರಿಗೆ ನೇರವಾಗಿ ಕಾರುಗಳ ಮಾರಾಟಕ್ಕೆ ಮುಂದಾದ ಮರ್ಸಿಡಿಸ್ ಬೆಂಜ್

ಇದರೊಂದಿಗೆ, ದಾಸ್ತಾನು ವೆಚ್ಚವನ್ನು ನೇರವಾಗಿ ಸ್ವತಃ ಭರಿಸಲಿದೆ ಮತ್ತು ದೇಶಾದ್ಯಂತ ಪ್ರತಿ ಮಾದರಿಗೆ ಒಂದು ನಿರ್ದಿಷ್ಟ ಬೆಲೆಯನ್ನು ನೀಡುತ್ತದೆ ಎಂದು ಮರ್ಸಿಡಿಸ್ ಹೇಳಿದೆ. ಕಾರುಗಳ ಇನ್ವಾಯ್ಸಿಂಗ್ ನೇರವಾಗಿ ಕಂಪನಿಯಲ್ಲಿ ನಡೆಯುತ್ತದೆ ಹೊರತು ವಿತರಕರೊಂದಿಗೆ ಅಲ್ಲ. ಜೊತೆಗೆ ಗ್ರಾಹಕರು ನೇರವಾಗಿ ಕಂಪನಿಯೊಂದಿಗೆ ವ್ಯವಹರಿಸಬಹುದು ಮತ್ತು ದೊಡ್ಡ ಮಟ್ಟಿನ ಅವಕಾಶಗಳು ಸೃಷ್ಟಿಯಾಗಲಿವೆ.

''ಈ ದೀರ್ಘಕಾಲೀನ ಕಾರ್ಯತಂತ್ರದ ಕ್ರಮವು ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ಮೂಲಭೂತ ಅಂಶಗಳನ್ನು ಪರಿಚಯಿಸುವ ಮೂಲಕ ನಮ್ಮ ಗ್ರಾಹಕರ ಗಮನವನ್ನು ಬಲಪಡಿಸುತ್ತದೆ. ಇದು ಗ್ರಾಹಕರು ಮತ್ತು ಫ್ರ್ಯಾಂಚೈಸ್ ಪಾಲುದಾರರಿಬ್ಬರಿಗೂ ಉತ್ತಮ ಪರಿಹಾರವನ್ನು ನೀಡುತ್ತದೆ, ಇದು ಭವಿಷ್ಯದ ಬಗ್ಗೆ ನಮ್ಮ ಸ್ಪಷ್ಟ ದೃಷ್ಟಿಯನ್ನು ಒತ್ತಿಹೇಳುತ್ತದೆ" ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಹೇಳಿದ್ದಾರೆ.

ಈ ನೇರ ಮಾರಾಟದ ಮಾದರಿಯು ದಾಸ್ತಾನು ವೆಚ್ಚದ ಹೊರೆಯೊಂದಿಗೆ, ಲಾಭದಾಯಕತೆಗೂ ಪ್ರಯೋಜನಕಾರಿಯಾಗಿದೆ ಎಂದು ಕಂಪನಿ ಹೇಳಿದೆ.

ಇದು ಮರ್ಸಿಡಿಸ್ ಬೆಂಜ್‌ನ ಹೊಸ ಮಾರಾಟದ ಕಾರ್ಯತಂತ್ರವಾಗಿದ್ದರೂ, ಭಾರತದಲ್ಲಿ ಹೇಗೆ ಕಾರ್ಯವಹಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಭಾರತೀಯ ಗ್ರಾಹಕರು ಚೌಕಾಸಿಯನ್ನು ಇಷ್ಟ ಪಡುತ್ತಾರೆ. ಆದರೆ ಕಂಪನಿಯೊಂದಿಗೆ ನೇರ ಮಾರಾಟದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ.

Read more about: car india ಕಾರು ಭಾರತ
English summary

Mercedez Benz To Launch Direct To Customer Sales Model In India

India's largest luxury carmaker Mercedes Benz on Wednesday announced a unique direct-to-customer sales model which seeks to do away with any kind of discounting at the dealer level.
Story first published: Wednesday, June 2, 2021, 20:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X