ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನ ಪೋಷಕ ಸಂಸ್ಥೆಯಾದ ಮೆಟಾ ಮತ್ತೆ ಹೊಸದಾಗಿ ಉದ್ಯೋಗ ಕಡಿತವನ್ನು ಮಾಡಲು ಮುಂದಾಗಿದೆ. ಈ ವಾರದಲ್ಲಿಯೇ ಮೆಟಾ ಸಂಸ್ಥೆಯಲ್ಲಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ. ವಿಶ್ವದ ಅತೀ ದೊಡ್ಡ ಸಾಮಾಜಿಕ ಜಾಲತಾಣ ಸಂಸ್ಥೆಯಾದ ಮೆಟಾ ಉದ್ಯೋಗ ಕಡಿತವನ್ನು ಮಾಡುತ್ತಿದೆ. ನವೆಂಬರ್‌ನಲ್ಲಿ ಶೇಕಡ 13ರಷ್ಟು ಉದ್ಯೋಗ ಕಡಿತ ಮಾಡಲಾಗುತ್ತದೆ.
ಬ್ಲ್ಯೂಬರ್ಗ್ ವರದಿಯ ಪ್ರಕಾರ, ಈ ವಾರದಲ್ಲಿ ನಡೆಯುವ ಹೊಸ ಲೇಆಫ್‌ಗೆ ಉದ್ಯೋಗದಿಂದ ವಜಾಗೊಳಿಸಬಹುದಾದ ಉದ್ಯೋಗಿಗಳ ಪಟ್ಟಿಯನ್ನು ನಿರ್ದೇಶಕರು ಮತ್ತು ಉಪಾಧ್ಯಕ್ಷರುಗಳ ಬಳಿ ಮೆಟಾ ಕೇಳಿದೆ. ಮುಂದಿನ ವಾರದಲ್ಲಿ ಈ ಉದ್ಯೋಗ ಕಡಿತವು ಅಂತಿಮ ನಿರ್ಧಾರವಾಗಬಹುದು. ಮೆಟಾವು ಉಳಿದ ಸಂಸ್ಥೆಗಳಿಗಿಂತ ವೇಗವಾಗಿ ಉದ್ಯೋಗ ಕಡಿತ ಪ್ರಕ್ರಿಯೆ ನಡೆಸುತ್ತಿದೆ. ನಿರೀಕ್ಷೆಗಿಂತ ಅತೀ ಶ್ರೀಘ್ರವಾಗಿಯೇ ಮೆಟಾ ಸಂಸ್ಥೆಯಲ್ಲಿ ಉದ್ಯೋಗ ಕಡಿತವಾಗುವ ಸಾಧ್ಯತೆಯಿದೆ.

ಈ ಹಿಂದೆಯೂ ನಡೆದಿದೆ ಉದ್ಯೋಗ ಕಡಿತ
ಹಣಕಾಸು ಗುರಿಯನ್ನು ಮುಂದಿಟ್ಟುಕೊಂಡು ಈ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಹಾಗೆಯೇ ಯಾರೂ ಕೂಡಾ ಸಂಸ್ಥೆಯ ಒಳ ವಿಚಾರಗಳನ್ನು ಮಾತನಾಡದಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ವಾರದಲ್ಲಿ ಈ ಉದ್ಯೋಗ ಕಡಿತದ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದಕ್ಕೂ ಮುನ್ನ ಮೆಟಾ ಸುಮಾರು 11,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅದು ಸಂಸ್ಥೆಯಲ್ಲಿನ ಮೊದಲ ಹಂತದ ಉದ್ಯೋಗ ಕಡಿತವಾಗಿದೆ.
ತಂಡದ ಸಂಖ್ಯೆಯನ್ನು ಕಡಿಮೆ ಮಾಡಿ, ವೇತನದಲ್ಲೂ ಕೊಂಚ ಇಳಿಸುವ ಉದ್ದೇಶವನ್ನು ಕೂಡಾ ಸಂಸ್ಥೆ ಹೊಂದಿದೆ. ಮೆಟಾ ಅತೀ ದೊಡ್ಡ ಟೆಕ್ ಸಂಸ್ಥೆಯಾಗಿದೆ. ಇದರ ನಿವ್ವಳ ಆದಾಯವು ನಿರಂತರವಾಗಿ ಕುಸಿಯುತ್ತಲೇ ಇದೆ. ಈ ಕಾರಣದಿಂದಾಗಿ ಮೆಟಾ 2022ರಲ್ಲಿ ಸುಮಾರು 11,000 ಉದ್ಯೋಗಿಗಳನ್ನು ಅಥವಾ ಶೇಕಡ 13 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.
ಹಾಗೆಯೇ ಸದ್ಯಕ್ಕೆ ಯಾವುದೇ ನೇಮಕಾತಿಯನ್ನು ಕೂಡಾ ನಡೆಸುವುದಿಲ್ಲ ಎಂದು ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ. ಈ ಸಂಸ್ಥೆಯಲ್ಲಿ 2023 ರಲ್ಲಿಯೂ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದರಂತೆಯೇ ಉದ್ಯೋಗ ಕಡಿತವನ್ನು ಮಾಡಲಾಗಿದೆ.


Click it and Unblock the Notifications