ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಕ್ ಹಬ್ಗಳಲ್ಲಿ ಒಂದಾದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗೂಗಲ್ ಅನಂತ ( googl) ಕ್ಯಾಂಪಸ್ ಬಳಿಕ ಸಾಮಾಜಿಕ ಮಾಧ್ಯಮದ ದೈತ್ಯ ಮೆಟಾ(Meta) ಬೆಂಗಳೂರಿನಲ್ಲಿ ಹೊಸ ಕಚೇರಿಯನ್ನು ಸ್ಥಾಪಿಸಲು ಸಜ್ಜಾಗಿದೆ.
ಹೌದು, ಫೇಸ್‌ಬುಕ್, ವಾಟ್ಸ್‌ಆಪ್ ಮತ್ತು ಇನ್‌ಸ್ಟಾಗ್ರಾಮ್‌ನ ಕಂಪನಿಯು ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮತ್ತು ಪ್ರಾಡಕ್ಟ್ ರೋಲ್‌ಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಇನ್ನೂ ತನ್ನ ವಿಸ್ತರಣಾ ಯೋಜನೆಗಳ ಭಾಗವಾಗಿ, ಮೆಟಾ ತನ್ನ ಮುಂಬರುವ ಬೆಂಗಳೂರಿನ ಕಚೇರಿಗೆ ಎಂಜಿನಿಯರಿಂಗ್ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಕಂಪನಿಯ ದೀರ್ಘಕಾಲೀನ ಎಂಜಿನಿಯರಿಂಗ್ ಹೆಜ್ಜೆಗುರುತನ್ನು ಭಾರತದಲ್ಲಿ ರೂಪಿಸಲಿದ್ದು ,ಗೂಗಲ್‌ನ ಅನಂತ ಯೋಜನೆಯ ನಂತರ, ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ಬೆಂಗಳೂರಿನಲ್ಲಿ ಹೊಸ ಕಚೇರಿಯನ್ನು ಸ್ಥಾಪಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ಕಚೇರಿಯನ್ನು ಮೆಟಾದ ಎಂಟರ್‌ಪ್ರೈಸ್ ಎಂಜಿನಿಯರಿಂಗ್ ತಂಡವು ಅಭಿವೃದ್ಧಿಪಡಿಸಲಿದೆ. ಸಂಸ್ಥೆಯಾದ್ಯಂತ ಉತ್ಪಾದಕತೆಯನ್ನು ಹೆಚ್ಚಿಸುವ ಆಂತರಿಕ ಪರಿಕರಗಳನ್ನು ರಚಿಸುವ ಜವಾಬ್ದಾರಿಯನ್ನು ಸಹ ಇದು ಹೊಂದಿದೆ. ಈ ಜಾಗತಿಕ ತಂತ್ರಜ್ಞಾನ ದೈತ್ಯರು ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ತಮ್ಮ ಹೆಜ್ಜೆಗುರುತನ್ನು ವಿಸ್ತರಿಸುವ ವಿಶಾಲ ಪ್ರವೃತ್ತಿಯನ್ನು ಶುರು ಮಾಡುತ್ತಿದೆ.
ಈಗಾಗಲೇ ಬೆಂಗಳೂರಿನಲ್ಲಿ ಮೆಟಾ ಎಂಬಸಿ ಗಾಲ್ಫ್ ಲಿಂಕ್ಸ್‌ನಿಂದ ಕಾರ್ಯನಿರ್ವಹಿಸುತ್ತಿದ್ದರೂ, ಈ ಹೊಸ ಕೇಂದ್ರವು ಕೃತಕ ಬುದ್ಧಿಮತ್ತೆ-ಚಾಲಿತ ಎಂಜಿನಿಯರಿಂಗ್‌ನ ಮೇಲೆ ಅವಲಂಭಿತವಾಗಿದೆ.
ದೇಶದಲ್ಲಿ ಮೆಟಾದ ಪ್ರಾಥಮಿಕವಾಗಿ ಮಾರಾಟ, ಮಾರ್ಕೆಟಿಂಗ್, ವ್ಯವಹಾರ ಅಭಿವೃದ್ಧಿ, ಪಾಲುದಾರಿಕೆಗಳು, ಕಾರ್ಯಾಚರಣೆಗಳು, ನೀತಿ, ಕಾನೂನು ಮತ್ತು ಹಣಕಾಸಿನ ಮಾತ್ರವೇ ಇತ್ತು.ಆದರೆ ಇದೀಗ ಮತ್ತೋಂದು ಮೈಲಿಗಲ್ಲು ತಲುಪುಲು ಸಿದ್ದವಾಗಿದೆ.
ಬೆಂಗಳೂರಿನಲ್ಲಿ ಗೂಗಲ್‌ನ ಅನಂತ ಉದ್ಘಾಟನೆ:
ಗೂಗಲ್‌ನ ಅನಂತ ಬೆಂಗಳೂರಿನ ಮಹದೇವಪುರದಲ್ಲಿರುವ ಅತಿದೊಡ್ಡ ಮತ್ತು ಅತ್ಯಂತ ಅತ್ಯಾಧುನಿಕ ಕಚೇರಿಯಾಗಿದೆ. ಗೂಗಲ್ ಅನಂತವನ್ನು ಕೇವಲ ಒಂದು ಕಚೇರಿಗಿಂತ ಹೆಚ್ಚಿನದಾಗಿ ನಿರ್ಮಾಣ ಮಾಡಿದೆ.
ಭಾರತ ಮತ್ತು ಜಾಗತಿಕವಾಗಿ ಸವಾಲುಗಳನ್ನು ಎದುರಿಸಲು ನಾವೀನ್ಯತೆ, ಪಾಲುದಾರಿಕೆಗಳನ್ನು ಬೆಳೆಸುವುದು ಮತ್ತು ವಿಶ್ವ ದರ್ಜೆಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಕೇಂದ್ರವಾಗಿ ಇದು ಕಾರ್ಯವನ್ನು ನಿರ್ವಹಿಸುತ್ತಿದೆ.
ಸುಸ್ಥಿರತೆಗೆ ಒತ್ತು ನೀಡುವುದು ಮತ್ತು ಅಂತರ್ಗತ ಮೂಲಸೌಕರ್ಯದೊಂದಿಗೆ, ಅನಂತ ಬೆಂಗಳೂರಿನಲ್ಲಿ ಆಧುನಿಕ ಕಾರ್ಯಸ್ಥಳಗಳನ್ನು ಹೊಂದಿದೆ.
ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಭಾರತದಲ್ಲಿ ವಿಸ್ತರಿಸಲು ಬಯಸುವ ಜಾಗತಿಕ ತಂತ್ರಜ್ಞಾನ ಕಂಪನಿಗಳಿಗೆ ಬೆಂಗಳೂರು ಪ್ರಮುಖ ಆಯ್ಕೆಯಾಗಿ ಉಳಿದಿದೆ ಎಂದು ಹೇಳಿಕೆಯನ್ನು ಸಹ ನೀಡಿದ್ದರು.
ಗೂಗಲ್ನ ವಿಶ್ವದ ಅತಿದೊಡ್ಡ ಕ್ಯಾಂಪಸ್ ಅನಂತ
ವಿಶ್ವದ ಅತೀ ದೊಡ್ಡ ಕಚೇರಿ ಗೂಗಲ್ನ ಸಂಕೀರ್ಣ 'ಅನಂತ' ಇದೇ ತಿಂಗಳು ಬೆಂಗಳೂರಿನಲ್ಲಿ ಆರಂಭವಾಗಿದೆ. ಹೊಸ ಕ್ಯಾಂಪಸ್ ಭಾರತದ ಡಿಜಿಟಲ್ ರೂಪಾಂತರಕ್ಕೆ ತನಗಿರುವ ಬದ್ಧತೆಗೆ ಸಾಕ್ಷಿಯಾಗಿದೆ.
ಅನಂತ ಕ್ಯಾಂಪಸ್‌ನಲ್ಲಿ ನೂರರಷ್ಟು ತ್ಯಾಜ್ಯನೀರಿನ ಮರುಬಳಕೆ, ಮಳೆನೀರು ಕೊಯ್ಲು ಮತ್ತು ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ದೊಡ್ಡ ಸ್ಮಾರ್ಟ್ ಗ್ಲಾಸ್ ಅಳವಡಿಕೆ ಸೇರಿದಂತೆ ಹಲವಾರು ಸುಸ್ಥಿರ ವ್ಯವಸ್ಥಿತಿಗಳನ್ನು ಒಳಗೊಂಡಿದೆ. ವಿಶಾಲ ಸ್ಥಳಾವಕಾಶವನ್ನು ಕಚೇರಿ ಹೊಂದಿದ್ದು,ಕ್ಯಾಂಪಸ್‌ನಲ್ಲಿ ವಾಕಿಂಗ್ ಮತ್ತು ಜಾಗಿಂಗ್‌ಗೆ ಪ್ರತ್ಯೇಕ ಜಾಗಗಳು ಹೊಂದಿದೆ. ಇದು ಬರೋಬ್ಬರಿ 16 ಲಕ್ಷ ಚದರ ಅಡಿ ಸ್ಥಳಾವಕಾಶವನ್ನು ಹೊಂದಿದ್ದು ಸುಮಾರು 11 ಅಂತಸ್ತುಗಳನ್ನು ಒಳಗೊಂಡಿದೆ. ಇಷ್ಟೇ ಅಲ್ಲದೇ ಚೈಲ್ಡ್ ಡೇ ಕೇರ್ ಕೇಂದ್ರ ಇಲ್ಲಿರಲಿದ್ದು , ದೈಹಿಕ ವ್ಯಾಯಾಮಕ್ಕಾಗಿ ಜಿಮ್ ವ್ಯವಸ್ಥೆ, ಆಟದ ಕೇಂದ್ರ, , ಬ್ಯಾಡ್ಮಿಂಟನ್ ಕೋರ್ಟ್ , ವಾಲಿಬಾಲ್ , ಕ್ರಿಕೆಟ್ ಆಡಲು ಸೌಲಭ್ಯಗಳಿವೆ.
ಇಲ್ಲಿರುವ ಪುಟ್ಟದಾದ ಹಚ್ಚ ಹಸಿರಿನ ಅರಣ್ಯವು ಉದ್ಯೋಗಿಗಳಿಗೆ ಶಾಂತಿಯುತವಾಗಿ ಕಾಲಕಳೆಯುವಂತೆ ಮಾಡುತ್ತದೆ. ಅನಂತ ಎಂಬ ಹೆಸರಿನಂತೆ ಅನೇಕ ವಿಶೇಷತೆಗಳನ್ನು ಈ ಕಟ್ಟಡ ಹೊಂದಿದ್ದು ದೃಷ್ಟಿಹೀನರಿಗೆ ಒಡಾಟ ನಡೆಸಲು ವಿಶೇಷ ಸ್ಪರ್ಶತೆಯುಳ್ಳ ನೆಲಹಾಸು, ಅವರಿಗೆ ಅನುಕೂಲವಾದ ಸೌಲಭ್ಯಗಳು ಮತ್ತು ಬ್ರೈಲ್ ವಿವರಗಳನ್ನು ಒಳಗೊಂಡಿವೆ. ಕಟ್ಟಡದ ಒಳಾಂಗಣಗಳು ಸ್ಥಳೀಯವಾಗಿ ಮೂಲದ ವಸ್ತುಗಳನ್ನು ಒಳಗೊಂಡಿದ್ದು, ಪರಿಸರಕ್ಕೆ ಸಕಾರಾತ್ಮಕ ಕೊಡುಗೆ ನೀಡುವುದರ ಜೊತೆಗೆ ಪ್ರಾದೇಶಿಕ ಆರ್ಥಿಕತೆಯನ್ನು ಬೆಂಬಲಿಸುವ Google ನ ಬದ್ಧತೆಗೆ ಪ್ರತಿಬಿಂಬದಂತಿದೆ. ಗೂಗಲ್‌ನ ವಿವಿಧ ವಿಭಾಗಗಳಾದ ಆಂಡ್ರಾಯ್ಡ್, ಸರ್ಚ್, ಪೇ, ಕ್ಲೌಡ್, ಮ್ಯಾಪ್ಸ್, ಪ್ಲೇ ಮತ್ತು ಗೂಗಲ್ ಡೀಪ್‌ಮೈಂಡ್ ತಂಡಗಳು ಇಲ್ಲಿಂದ ಕಾರ್ಯ ನಿರ್ವಹಿಸಲಿವೆ ಎಂದು ತಿಳಿದುಬಂದಿದೆ


Click it and Unblock the Notifications