ಬಿಎಂಟಿಸಿ ಪ್ರಯಾಣಿಕರಿಗೆ ದೊಡ್ಡ ಸಿಹಿಸುದ್ದಿ ಇದೆ. ಇನ್ಮುಂದೆ ಟಿಕೆಟ್ ತೆಗೆದುಕೊಳ್ಳುವ ಟೆನ್ಷನ್ ಇರಲ್ಲ! ಆ ಕಾರ್ಡ್, ಈ ಕಾರ್ಡ್ ಅಂತ ಬ್ಯಾಗ್ ತಡಕುವ ಪ್ರಮೇಯವೇ ಇಲ್ಲ.. ಜಸ್ಟ್ 'ನಮ್ಮ ಮೆಟ್ರೋ' ಕಾರ್ಡ್ (Namma Metro Card) ತೋರಿಸಿ ಪ್ರಯಾಣ ಮಾಡಬಹುದು! ಹೌದು, ಮುಂದಿನ ದಿನಗಳಲ್ಲಿ ನೀವು ಡೆಬಿಟ್ ಕಾರ್ಡ್ (Debit Card) ಮತ್ತು ಕ್ರೆಡಿಟ್ ಕಾರ್ಡ್‌ಗಳು (Credit Card) ಮಾತ್ರವಲ್ಲ, ಮೊಟ್ರೋ ಕಾರ್ಡ್ ಸಹ ಕಂಡಕ್ಟರ್‌ಗೆ (ನಿರ್ವಾಹಕ) ತೋರಿಸಿ ಬಿಎಂಟಿಸಿ (BMTC) ಬಸ್ನಲ್ಲಿ ಹೋಗಬಹುದು! ಅದು ಹೇಗೆ ಅಂತ ತಿಳಿಯುವ ಕುತೂಹಲ ಇದ್ಯಾ? ಹಾಗಿದ್ರೆ, ಮುಂದೆ ಓದಿ.
ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗದು ರಹಿತ ಟಿಕೆಟ್ ವ್ಯವಸ್ಥೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ಸುಮಾರು 10 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು (ETM Electronic Ticketing Machine) ಅಳವಡಿಸಲು ಮುಂದಾಗಿದೆ. ಈ ಸಂಬಂಧ ಟೆಂಡರ್ ಆಹ್ವಾನಿಸಿದ್ದು, ಮಂಗಳವಾರ (ಮೇ 13) ಟೆಂಡರ್ ಸಲ್ಲಿಕೆಗಾಗಿ ಕೊನೆಯ ದಿನವಾಗಿದೆ.

ಇಟಿಎಂ ಯಂತ್ರಗಳು ಹೊಸ ತಂತ್ರಜ್ಞಾನವನ್ನು ಹೊಂದಿದ್ದು, ನಗದು ರಹಿತ ಪಾವತಿಗೆ ಅನುಕೂಲವಾಗುತ್ತವೆ. ಇದರಿಂದ ಪ್ರಯಾಣಿಕರು ಡಿಜಿಟಲ್ ಪಾವತಿಗಳನ್ನು (UPI, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮುಂತಾದವು) ಬಳಸುವ ಸಾಧ್ಯತೆ ಇದೆ. ಇದರೊಂದಿಗೆ ಟಿಕೆಟ್ ನೀಡುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ.
ಇನ್ನೂ ಈ ಟೆಂಡರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಆಯ್ಕೆಯಾದ ಕಂಪನಿಯು ಇಟಿಎಂ ಯಂತ್ರಗಳ ತಯಾರಿಕೆ ಮತ್ತು ಪೂರೈಕೆ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆ ಇದೆ. ಈ ಕ್ರಮವು ಬಿಎಂಟಿಸಿ ಸೇವೆಗಳಲ್ಲಿ ಡಿಜಿಟಲೀಕರಣ ಹೆಚ್ಚಿಸಿ, ಪ್ರಯಾಣಿಕರಿಗೆ ಸುಲಭ ಟಿಕೆಟ್ ವ್ಯವಸ್ಥೆಯನ್ನು ಜಾರಿ ಮಾಡಲಿದೆ.
ಬರುವ ಅಕ್ಟೋಬರ್-ನವೆಂಬರ್ ವೇಳೆಗೆ ಈ ಯಂತ್ರಗಳು ಬಸ್ ನಿರ್ವಾಹಕರ ಕೈಸೇರಲಿವೆ. ಈಗಾಗಲೇ ಈ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಜಾರಿಗೊಳಿಸಿದೆ.
ಈಗಾಗಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಟಾಟಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಟಿಕೆಟ್ ಪಾವತಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಮೊತ್ತ ಪಾವತಿಸಬಹುದು. ಆದರೆ ಇದುವರೆಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಟಿಕೆಟ್ ಪಡೆಯುವ ಅವಕಾಶ ಇರಲಿಲ್ಲ. ಆದರೆ ಇದೇ ಮೊದಲ ಬಾರಿ ಬಿಎಂಟಿಸಿ ಆ್ಯಂಡ್ರಾಯ್ಡ್ ಆಧಾರಿತ ವಿದ್ಯುನ್ಮಾನ ಟಿಕೆಟ್ ಯಂತ್ರಗಳನ್ನು (ETM) ಪರಿಚಯಿಸುತ್ತಿದೆ.
ಈ ಇಟಿಎಂ ಯಂತ್ರಗಳಲ್ಲಿ ಗೂಗಲ್ ಪೇ, ಫೋನ್ ಪೇ, ಭೀಮ್ ಹೋನಿಯಂತಹ ಯುಪಿಐ ಆಧಾರಿತ ಡೈನಮಿಕ್ ಕ್ಯೂಆರ್ ಕೋಡ್‌ಗಳ ಜೊತೆಗೆ, ಮೆಟ್ರೋ ಕಾರ್ಡ್, ಡೆಬಿಟ್, ಕ್ರೆಡಿಟ್, ವೀಸಾ ಕಾರ್ಡ್‌ಗಳು ಮತ್ತು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸಿ ಪಾವತಿ ಮಾಡುವ ಅವಕಾಶವನ್ನು ನೀಡಲಾಗಿದೆ.
ಈ ಯಂತ್ರದ ವಿಶೇಷ ವೆಂದರೆ ಟಿಕೆಟ್ ವೇಗವಾಗಿ ಮುದ್ರಣ ವಾಗುತ್ತದೆ.ಟಚ್ ಸ್ಟೀನ್ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಈ ಸ್ಮಾರ್ಟ್ ಇಟಿಎಂ ಹೊಂದಿರಲಿದ್ದು, ಡೈನಮಿಕ್ ಕ್ಯೂ ಆರ್ ಕೋಡ್ ಆಧಾರಿತ ಪಾವತಿ ಸುಲಭವಾಗಿ ಟಿಕೆಟ್ ನೀಡುವುದಕ್ಕೆ ಅನುಕೂಲವಾಗಲಿದೆ.
ಈ ಟೆಂಡರ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದು, ಯಾರು ಕಡಿಮೆ ದರದಲ್ಲಿ ಯಂತ್ರ ನೀಡಲು ಮುಂದಾಗುವ ಕಂಪನಿ ಬಳಿ ಸ್ಮಾರ್ಟ್ ಇಟಿಎಂ ಯಂತ್ರವನ್ನು ಪಡೆಯಲಾಗುವುದು. ಬಾಡಿಗೆ ಆಧಾರದಲ್ಲಿ ಈ ಯಂತ್ರಗಳ ಸೇವೆ ಇರಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿ ಒಬ್ಬರು ಹೇಳಿದ್ದಾರೆ
ಈ ಎಲ್ಲ ಕಾರ್ಡ್ ಬಳಸಿ ಟಿಕೆಟ್ ಪಡೆಯಬಹುದು!
ಬಿಎಂಟಿಸಿಯಲ್ಲಿ ಕೂಡ ಈಗಾ ಗಲೇ ಸ್ಟಾಟಿಕ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಾವತಿಸಿ ಪ್ರಯಾಣಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ವ್ಯವಸ್ಥೆ ಯಲ್ಲಿ ಯಾವುದೇ ಕೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿ ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ)ಗಳನ್ನು ನೀಡಲಾಗುತ್ತಿದೆ.
ಗೂಗಲ್ ಪೇ
ಫೋನ್ ಪೇ
ಭೀಮ್
ಯುಪಿಐ ಡೈನಮಿಕ್ ಕ್ಯೂ ಆರ್ ಕೋಡ್ ವ್ಯವಸ್ಥೆ
ಮೆಟ್ರೋ ಕಾರ್ಡ್
ಡೆಬಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್
ವೀಸಾ
ಕೇಂದ್ರ ಸರ್ಕಾರದ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ)
ಹೀಗೆ ಈ ಎಲ್ಲ ಬಗೆಯ ಕಾರ್ಡ್‌ಗಳಿಂದ ಟಿಕೆಟ್ ಪಡೆಯಬಹುದು. ವಿಶೇಷವೆಂದರೆ ಟಿಕೆಟ್ ವೇಗವಾಗಿ ಮುದ್ರಣ ವಾಗುತ್ತದೆ. ಟಚ್ ಸ್ಟೀನ್ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಈ ಸ್ಮಾರ್ಟ್ ಇಟಿಎಂ ಹೊಂದಿರಲಿದೆ. ಡೈನಮಿಕ್ ಕ್ಯೂ ಆರ್ ಕೋಡ್ ಆಧಾರಿತ ಪಾವತಿ ಸುಲಭವಾಗಿ ಟಿಕೆಟ್ ನೀಡುವುದಕ್ಕೆ ಅನುಕೂಲವಾಗಲಿದೆ. ಈ ಟೆಂಡರ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದು, ಯಾರು ಕಡಿಮೆ ದರದಲ್ಲಿ ಯಂತ್ರ ನೀಡಲು ಮುಂದಾಗುವ ಕಂಪನಿ ಬಳಿ ಸ್ಮಾರ್ಟ್ ಇಟಿಎಂ ಯಂತ್ರವನ್ನು ಪಡೆಯಲಾಗುವುದು. ಬಾಡಿಗೆ ಆಧಾರದಲ್ಲಿ ಈ ಯಂತ್ರಗಳ ಸೇವೆ ಇರಲಿದೆ.


Click it and Unblock the Notifications