ನಮ್ಮ ಮೆಟ್ರೋ ದರ( Metro Fare Hike) ಏರಿಕೆಗೆ ಬೇಸತ್ತು ಪ್ರಯಾಣಿಕರು ಸಂಚಾರ ಜೀವನಾಡಿಯಾಗಿರುವ ಬಿಎಂಟಿಸಿ(BMTC) ಕಡೆ ಮುಖ ಮಾಡುತ್ತಿದ್ದಾರೆ. ಇನ್ನೂ ಬಹುತೇಕರು ತಮ್ಮ ಟೂ ವೀಲರ್ ಬೆಸ್ಟ್ ಎಂದು ಅದರಲ್ಲಿ ಪ್ರಯಾಣ ಮಾಡುತ್ತಿದ್ದಾರೆ.ಇದರಿಂದ ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚತ್ತಲೇ ಇದೆ. ಹಾಗಿದ್ರೆ ಬಿಎಂಟಿಸಿಯಲ್ಲಿ ಪ್ರಯಾಣಿಕ ಸಂಖ್ಯೆ ಎಷ್ಟು ಏರಿಕೆಯಾಗಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಹೌದು,ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಳ ಮಾಡಿದ ಬೆನ್ನಲೇ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಪ್ರತಿ ದಿನ 1 ಲಕ್ಷ ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಭಾನುವಾರದಂದು ರಜಾದಿನ ಆಗಿರುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುತ್ತದೆ.ಆದರೆ ನಿನ್ನೇ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.ದರ ಏರಿಕೆಯಾದ ಬಳಿಕ ಫೆ.9ರಂದು 29.53 ಲಕ್ಷ, ಫೆ.16ರಂದು 29.28 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ಮಾಡಿದ್ದಾರೆ. ದಿನದಿನೇ ಬಿಎಂಟಿಸಿ ಬಸ್‌ನಲ್ಲಿ ಜನರು ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದರೆ. ಇವಾಗದರೂ ಸಾರಿಗೆ ಇಲಾಖೆಗೆ ಆದಾಯ ಬರುತ್ತದೆಯೋ ಇಲ್ಲವೋ ಎಂಬುವುನ್ನು ಇನ್ನೂ ಕೆಲ ಕಾಲ ಕಾದುನೋಡಬೇಕಿದೆ.
ಮೆಟ್ರೊ ಪ್ರಯಾಣ ದರ ಇಳಿಕೆಗೆ ಮನವಿ
ಮೆಟ್ರೊ ಪ್ರಯಾಣ ದರ ಇಳಿಸಬೇಕು ಎಂದು ಬೆಂಗಳೂರು ಮೆಟ್ರೊ ಪ್ರಯಾಣಿಕರ ಸಂಘವು (ಬಿಎಂಸಿಎ) ಬಿಎಂಆರ್‌ಸಿಎಲ್ ನಿರ್ದೇಶಕರಿಗೆ ಪತ್ರ ಬರೆದಿದೆ. ಈ ಪತ್ರಕ್ಕೆ ಸುಮಾರು 10 ಸಾವಿರ ಮೆಟ್ರೊ ಪ್ರಯಾಣಿಕರಿಂದ ಸಹಿಯನ್ನು ಸಹಿಯನ್ನು ಪಡೆದುಕೊಳ್ಳಲಾಗಿದೆ.ಇನ್ನೂ ಕೆಲವು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ದರ ಏರಿಕೆಯ ಕುರಿತು ಹಲವು ಚರ್ಚೆಗಳನ್ನು ಮಾಡಿದ್ದಾರೆ.
ಪ್ರಯಾಣ ಶೇ.100ಕ್ಕೆ ಏರಿಸಿ ಶೇ.70ಕ್ಕೆ ಇಳಿಕೆ
ಪ್ರಸುತ್ತ ಮೆಟ್ರೋ ಪ್ರಯಾಣ ದರವನ್ನು ಶೇ.100ಕ್ಕೆ ಏರಿಸಿ ಶೇ.70ಕ್ಕೆ ಇಳಿಸಲಾಗಿದೆ. ಇದು ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ, ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಭಾರೀ ಆರ್ಥಿಕ ಸಂಕಷ್ಟವನ್ನು ತಂದುಕೊಟ್ಟಿದೆ.
ಬಿಎಂಆರ್‌ಸಿಎಲ್ ಲಾಭಗಳಿಸುವ ಉದ್ದೇಶದಿಂದ ಕೆಲಸ ಮಾಡುವ ಖಾಸಗಿ ಸಂಸ್ಥೆಯಲ್ಲ. ಜನರ ಹಿತಾಸಕ್ತಿಯನ್ನು ರಕ್ಷಿಸುವ ಸಾಮಾಜಿಕ ಬಾಧ್ಯತೆ ಹೊಂದಿರುವ ನಿಗಮ ಎಂದು ಎಂದು ಹೇಳಿಕೆಯನ್ನು ನೀಡಿದ್ದಾರೆ.
ಮೆಟ್ರೊ ಪ್ರಯಾಣಿಕರ ಸಂಖ್ಯೆ 5.33 ಲಕ್ಷಕ್ಕೆ ಇಳಿಕೆ
ಮೆಟ್ರೋ ದರ ಏರಿಕೆಯಾಗಿ ಒಂದು ವಾರವಾಗಿದೆ.ಭಾನುವಾರದಂದು ಪ್ರಯಾಣಿಸಿದವರ ಸಂಖ್ಯೆ 5.33 ಲಕ್ಷಕ್ಕೆ ಇಳಿದಿದೆ. ರಜಾದಿನವಾದ ಭಾನುವಾರ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಆದರೂ ಸರಾಸರಿ 7 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಮೆಟ್ರೊ ಪ್ರಯಾಣ ದರ ಜಾರಿಯಾದ ಭಾನುವಾರವೇ (ಫೆ.9) 6.23 ಲಕ್ಷಕ್ಕೆ ಇಳಿದಿತ್ತು.
ಈ ಭಾನುವಾರ ಇನ್ನಷ್ಟು ಕುಸಿತ ಕಂಡಿದ್ದು ಕಳೆದ ಭಾನುವಾರಕ್ಕಿಂತ 90 ಸಾವಿರ ಕಡಿಮೆಯಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಇರುತ್ತಿದ್ದ ಸರಾಸರಿ ಪ್ರಯಾಣಿಕರ ಸಂಖ್ಯೆ 8.50 ಲಕ್ಷ. ದರ ಏರಿದ ಬಳಿಕ ದಿನದಿಂದ ದಿನಕ್ಕೆ ಕಡಿಮೆಯಾಗಿ ಶುಕ್ರವಾರಕ್ಕೆ 7.63 ಲಕ್ಷ ಇಳಿಕೆಯಾಗಿದೆ.
BMTC ಪ್ರಯಾಣಿಸುವವರ ಸಂಖ್ಯೆ ಸ್ವಲ್ಪ ಹೆಚ್ಚಳ: ಸಾರಿಗೆ ಸಚಿವ
ಮೆಟ್ರೊ ಪ್ರಯಾಣ ದರ ಏರಿಕೆಯಾದ ನಂತರ ಬಿಎಂಟಿಸಿಯಲ್ಲಿ ಪ್ರಯಾಣಿಸುವವರ ಸಂಖ್ಯೆ ಸ್ವಲ್ಪ ಹೆಚ್ಚಳವಾದೆ. ಆದರೆ ಅದೇ ಕಾರಣದಿಂದ ಹೆಚ್ಚಾಗಿರುವುದು ಎಂಬುದನ್ನು ಈಗಲೇ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ.
ಸ್ಟೇಜ್ ಬೈ ಸ್ಟೇಜ್ ರೇಟ್ ಮರ್ಜ್ ಏನಿದು?
ನಮ್ಮ ಮೆಟ್ರೋ ಪ್ರಯಾಣ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಾಗುವುದು. ಮೆಟ್ರೋ ದರ ಶೇ. 90 ರಿಂದ ಶೇ 100 ರ ವರೆಗೆ ಹೆಚ್ಚಳವಾಗಿರುವ ನಿಲ್ದಾಣಗಳ ಮಧ್ಯೆ ದರ ಇಳಿಕೆ ಮಾಡಲಾಗುವುದು. ಶೇ 60 ದರ ಹೆಚ್ಚಳವಾಗಿರುವಲ್ಲಿ ಸ್ಲ್ಯಾಬ್ ಮರ್ಜ್ ಮಾಡುತ್ತೇವೆ
ಮೆಟ್ರೋ ಪ್ರಯಾಣಿಕರ ಇಳಿಕೆಯ ವಿವರ
ಫೆಬ್ರವರಿ 3ರಂದು ದರ ಏರಿಕೆಗೂ ಮೊದಲು ಮೆಟ್ರೋ ಪ್ರಯಾಣಿಕರ ಸಂಖ್ಯೆ 8.7 ಲಕ್ಷವಾಗಿತ್ತು. ಆದರೆ ಫೆಬ್ರವರಿ 10ರಂದು ದರ ಏರಿಕೆ ಬಳಿಕ ಇದು 8.2 ಲಕ್ಷಕ್ಕೆ ಇಳಿಕೆಯಾಗಿದೆ. ಮಾಹಿತಿಗಳ ಪ್ರಕಾರ ಶೇ 4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.
ಪರಿಷ್ಕೃತ ದರ ಪಟ್ಟಿ ಫೆಬ್ರುವರಿ 9ರಿಂದ ಜಾರಿಗೆ ಬಂದಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಫೆಬ್ರುವರಿ 10ರಂದು (ಸೋಮವಾರ) 8,28,149 ಜನರು ಹಾಗೂ ಫೆಬ್ರುವರಿ 11ರಂದು (ಮಂಗಳವಾರ) 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ.


Click it and Unblock the Notifications