ತುಮಕೂರಿಗೆ ಮೆಟ್ರೋ(Metro)ಬಂದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ನಾನು 10 ವರ್ಷಗಳ ಹಿಂದೆಯೇ ಹೇಳಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗೃಹ ಸಚಿವರು ಆಗಿರುವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತುಮಕೂರು ಸುಮಾರು 60 ಕಿ.ಮೀ ದೂರದಲ್ಲಿದೆ. ಬೆಂಗಳೂರು ಮತ್ತು ತುಮಕೂರು ನಡುವೆ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಕೆಲವೊಮ್ಮೆ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳಿಂದಾಗಿ ಎರಡು ಗಂಟೆಗಳು ಬೇಕಾಗುತ್ತದೆ. ತುಮಕೂರಿಗೆ ಮೆಟ್ರೋ ಬಂದರೆ ಸಂಚಾರ ದಟ್ಟಣೆ ಕೂಡ ಕಡಿಮೆಯಗುತ್ತದೆ ಎಂದು ಅವರು ಹೇಳಿದ್ಧಾರೆ.

ನಾವು ತುಮಕೂರಿಗೆ ಮೆಟ್ರೋ ಬರುವುದಾಗಿ ಮುಖ್ಯಮಂತ್ರಿಯವರನ್ನು ಮನವೊಲಿಸಿದ ನಂತರ, ತುಮಕೂರಿಗೆ ಮೆಟ್ರೋ ಹೊಂದುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು ಕಳೆದ ಬಜೆಟ್‌ನಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಅವಕಾಶ ಕಲ್ಪಿಸಿದ್ದರು. ಈಗ, ಹೈದರಾಬಾದ್ ಕಂಪನಿಯೊಂದು ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿದೆ. ವರದಿಯ ಪರಿಶೀಲನೆ ಮಾಡಿ ಸರ್ಕಾರ ಅನುಮತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತುಮಕೂರಿಗೆ ಮೆಟ್ರೋ ರೈಲು ಯೋಜನೆ ಮೂರ್ಖತನ ಎಂದು ಬಣ್ಣಿಸಿದ್ದಕ್ಕಾಗಿ ಅವರು ಅರ್ಥವಿಲ್ಲದ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಟೋಕಿಯೊ, ಲಂಡನ್ ಮತ್ತು ನ್ಯೂಯಾರ್ಕ್ ನಂತಹ ದೊಡ್ಡ ನಗರಗಳು ಹತ್ತಿರದ ನಗರಗಳನ್ನು ಅಭಿವೃದ್ಧಿಪಡಿಸುತ್ತಿವೆ ಇದರಿಂದ ಒತ್ತಡ ಕಡಿಮೆಯಾಗುತ್ತದೆ. ನಾವು 20,000 ಎಕರೆಗಳಲ್ಲಿ ಕೈಗಾರಿಕಾ ಕೇಂದ್ರವನ್ನು ಅಭಿವೃದ್ಧಿಪಡಿಸಿದ್ದೇವೆ. ಆದ್ದರಿಂದ, ಜನರು ಸ್ಥಳಾಂತರಗೊಳ್ಳುತ್ತಲೇ ಇರುತ್ತಾರೆ. ಅದಕ್ಕಾಗಿಯೇ ನಮಗೆ ಮೆಟ್ರೋ ಬೇಕು ಅದು ಆಗಲೇಬೇಕು ಎಂದು ಒತ್ತಿ ಹೇಳಿದ್ಧಾರೆ.
ತುಮಕೂರು ಸಂಸದರೂ ಆಗಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಅಗತ್ಯವಿತ್ತು ಎಂದು ಮನವರಿಕೆಯಾಗಿದೆ ಅವರು ಸಹ ತುಮಕೂರಿಗೆ ಮೊಟ್ರೋ ಬರಬೇಕು ಎಂದಿದ್ದಾರೆ ಎಂದು ಹೇಳಿದ್ದರು.
ಸಚಿವ ವಿ.ಸೋಮಣ್ಣ ತುಮಕೂರು ಮೆಟ್ರೋ ಬಗ್ಗೆ ಹೇಳಿದ್ಧೇನು..?
ತುಮಕೂರಿಗೆ ಮೆಟ್ರೋ ಬಹುನಿರೀಕ್ಷಿತ ಮ್ರೆಟೋ ಯೋಜನೆ ಕೂಡ ತುಮಕೂರಿಗೆ ಬರುತ್ತದೆ.ಕಾರ್ಯರೂಪಕ್ಕೆ ತರುವ ಕೆಲಸ ಆಗುತ್ತದೆ ನಮ್ಮ ಕಾಲದಲ್ಲಿ ತುಮಕೂರಿಗೆ ಮೆಟ್ರೋ ಬರುತ್ತದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ತುಮಕೂರು ಹಸಿರು ಮಾರ್ಗ
ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ಮಾದವರದಿಂದ (ನಗರದ ಹೊರವಲಯದಲ್ಲಿರುವ) ತುಮಕೂರುವರೆಗೆ ರಸ್ತೆ ಮೂಲಕ ಸುಮಾರು 2 ಗಂಟೆಗಳ ಕಾಲ ವಿಸ್ತರಿಸಲು ಕೋರಿದೆ. ಅನುಮೋದನೆ ದೊರೆತರೆ,ಇದು ಕರ್ನಾಟಕದ ಮೊದಲ ಅಂತರ-ನಗರ ಮೆಟ್ರೋ ಯೋಜನೆಯಾಗಲಿದೆ. ಈಗಾಗಲೇ ಬಿಎಂಆರ್ ಸಿಎಲ್ ಕಾರ್ಯಸಾಧ್ಯತಾ ವರದಿಯನ್ನು ರಾಜ್ಯಸರ್ಕಾರಲ್ಲೆ ಸಲ್ಲಿಕೆ ಮಾಡಿದೆ.ಇವರು ಸಾಧಕ -ಬಾಧಕಗಳನ್ನು ಪರಿಶೀಲನೆ ಮಾಡಿ ಕೇಂದ್ರಕ್ಕೆ ಕಳುಸುತ್ತಾರೆ. ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ನಮ್ಮ ಮೆಟ್ರೋ ತುಮಕೂರಿಗೆ ಬರುತ್ತದೆ. 2032 ರ ವೇಳೆಗೆ, ಈ ಕಾರಿಡಾರ್ 2.8 ಲಕ್ಷ ದೈನಂದಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ, 2061 ರ ವೇಳೆಗೆ ಪ್ರಯಾಣಿಕರ ಸಂಖ್ಯೆ 5 ಲಕ್ಷವನ್ನು ತಲುಪುವ ನಿರೀಕ್ಷೆಯಿದೆ.
ತುಮಕೂರು ಜಿಲ್ಲೆ ಕೈಗಾರಿಕಾ ಉಪನಗರವಾಗಿ ಹೆಚ್ಚು ಹೆಚ್ಚು ಹೊರಹೊಮ್ಮುತ್ತಿರುವುದರಿಂದ, ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ತುಮಕೂರಿಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸಬೇಕೆಂದು ಉದ್ಯಮ, ರಾಜಕಾರಣಿಗಳು ಮತ್ತು ಸರ್ಕಾರದೊಳಗಿನಿಂದ ಬೇಡಿಕೆಗಳು ಬಂದಿವೆ.
ಸಿಲಿಕಾನ್ ಸಿಟಿ ಬೆಂಗಲೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ತುಮಕೂರಿನಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಆರಂಭ ಮಾಡಲು ತುಮಕೂರಿನ ಮೆಟ್ರೋ ರೈಲು ಸಂಪರ್ಕವಂತೂ ಬೇಕೇ ಬೇಕು ಎಂಬುವುದು ಗೃಹ ಸಚಿವ ಪರಮೇಶ್ವರ್ ಹೇಳಿಕೆಯಾಗಿದೆ.
ತುಮಕೂರಿಗೆ ಮೆಟ್ರೋ ಬಂದರೆ ಬೆಂಗಳೂರಿನಂತೆ ವೇಗವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications