ಬೆಂಗಳೂರಿಗರಿಗೆ ಬ್ಯಾಡ್ ನ್ಯೂಸ್! ನಮ್ಮ ಮೊಟ್ರೋ ಕೆಂಪು ಮಾರ್ಗ ಇನ್ನೂ ಒಂದು ವರ್ಷ ವಿಳಂಬ. ಆರು ತಿಂಗಳಾದರೂ ಕೇಂದ್ರದಿಂದ ಸಿಗದ ಒಪ್ಪಿಗೆ. ಹೌದು, ನಮ್ಮ ಮೆಟ್ರೋ ಯೋಜನೆಗಳು ವಿಸ್ತರಣೆ ಆಗುತ್ತಲೇ ಇವೆ. ಮೆಟ್ರೋ 3ನೇ ಹಂತ 'ಎ' ಯೋಜನೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಈ ಮೆಟ್ರೋ ಕೆಂಪು ಮಾರ್ಗವು (Namma Metro Red Line) ಬೆಂಗಳೂರಿನ ಹೃದಯಭಾಗದಲ್ಲಿ ಹಾದು ಹೋಗಲಿದೆ. ಈಗಾಗಲೇ ರಾಜ್ಯ ಸರ್ಕಾರವು ತನ್ನ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಆರು ತಿಂಗಳು ಕಳೆದರೂ ಅನುಮತಿ ಸಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಏನು? ಯಾವಾ ಈ ಯೋಜನೆಯಡಿ ಮೊಟ್ರೋ ಕೆಂಪು ಮಾರ್ಗ ಆರಂಭವಾಗಲಿದೆ? ಎಂಬಿತ್ಯಾದಿ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ಮಾರ್ಗದ ಕೆಂಪು ಮಾರ್ಗಕ್ಕೆ ಈಗಾಗಲೇ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆರು ತಿಂಗಳೇ ಕಳೆದಿದೆ ಆದರೆ ಈ ಮಾರ್ಗಕ್ಕೆ ಅನುಮತಿಯನ್ನು ಕೇಂದ್ರ ಸರ್ಕಾರ ಕೊಟ್ಟಲ್ಲ. ಆದರೂ ಕೂಡ ಈ ಹಂತದ ಯೋಜನಯೆ ವೆಚ್ಚ ಮಾತ್ರ ಹೆಚ್ಚಳವಾಗುತ್ತಿದೆ. ಯಾಕೆ ಎಂಬುವುದಕ್ಕೆ ಸಂಪೂರ್ಣವಾದ ವಿವರಣೆಯನ್ನು ನೀಡಬೇಕು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL)ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಸೂಚನೆಯನ್ನು ಸಹ ಕೊಟ್ಟಿದ್ದರು.

ಈ ಕೆಂಪು ಮಾರ್ಗವು ನಗರದ ದಕ್ಷಿಣ-ಪೂರ್ವ ಭಾಗವಾದ ಸರ್ಜಾಪುರದಿಂದ ಉತ್ತರ ಭಾಗದ ಹೆಬ್ಬಾಳವರೆಗೆ ಸಂಪರ್ಕ ಕಲ್ಪಿಸುತ್ತಿದ್ದು, ಬೆಂಗಳೂರು ಮೆಟ್ರೋ ಜಾಲ ವಿಸ್ತರಣೆಯ ಪ್ರಮುಖ ಮಹತ್ವದ ಹಂತವಾಗಿದೆ. ಈ ಮಾರ್ಘ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.
ಸರ್ಜಾಪುರ- ಹೆಬ್ಬಾಳದವರೆಗೆ 36.59ಕಿ.ಮೀ ಉದ್ದವಾದ ಜಾಲವನ್ನು ಹೊಂದಿದೆ. 22.14 ಕಿ.ಮೀ. ಎತ್ತರಿಸಿದ ಮಾರ್ಗ ಹಾಗೂ 14.45 ಕಿ.ಮೀ. ಸುರಂಗ ಮಾರ್ಗವನ್ನು ಕೆಂಪು ಮಾರ್ಗ ಹೊಂದಿದೆ. ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣ, ಸುರಂಗ ಮಾರ್ಗದಲ್ಲಿ 11 ನಿಲ್ದಾಣಗಳು ಬರುತ್ತವೆ. ಇನ್ನೂ ಈ ಮಾರ್ಗವನ್ನು ಸಿದ್ದಪಡಿಸಲು 28,405 ಕೋಟಿ ಅಂದಾಜು ವೆಚ್ಚ ತಗುಲುತ್ತದೆ. ಪ್ರತಿ ಒಂದು ಕಿಲೋ ಮೀಟರ್‌ಗೆ 776.3 ಕೋಟಿ ಎಂದು ವಿಸ್ತ್ರತ ಯೋಜನಾ ವರದಿ ಮಾಹಿತಿಯನ್ನು ಕೂಡ ತಿಳಿಸಿತ್ತು.
ಈ ಹಿಂದೆ ಕೇಂದ್ರ ಸರ್ಕಾರದಿಂದ ರಾಜ್ಯಸರ್ಕಾರ 2024ರ ಡಿಸೆಂಬರ್ 6 ರಲ್ಲಿ ಸಿವಿಲ್ ಕಾಮಗಾರಿಗಳನ್ನು ಆರಂಭಿಸಲು ಅನುಮೋದನೆ ಪಡೆದುಕೊಂಡಿತ್ತು.ಇದು ಆದ ನಂತರದಲ್ಲಿ ಕೆಂಪು ಮಾರ್ಗದ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯನ್ನು ಕೂಡ ಮಾಡಿತ್ತು. ಯೋಜನೆಗಾಗಿ ಬೇಕಾದ ಕೇಂದ್ರ ಸರ್ಕಾರದ ಸಾಲ ಹಾಗೂ ದ್ವಿಪಕ್ಷೀಯ ಹಣಕಾಸು ಸಂಸ್ಥೆಗಳು (ಉದಾ: ಜಪಾನ್ ಇಂಟರ್‌ನ್ಯಾಷನಲ್ ಕೋ-ಆಪರೇಶನ್ ಏಜೆನ್ಸಿ - JICA) ಮತ್ತು ಬಹುಪಕ್ಷೀಯ ಸಂಸ್ಥೆಗಳು (ಉದಾ: ವಿಶ್ವ ಬ್ಯಾಂಕ್, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ - ADB) ಇತ್ಯಾದಿಗಳಿಂದ ಹಣಕಾಸು ಸಹಾಯ ಪಡೆಯಲು ಕೇಂದ್ರ ಸರ್ಕಾರದ ಸಹ ನೀಡಲಾಗಿತ್ತು. ಇದು ಆದ ನಂತರ ಸಿವಿಲ್ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರವು 2024ರ ಡಿಸೆಂಬರ್ 6ರಂದು ಒಪ್ಪಿಗೆ ನೀಡಿತ್ತು. ಆ ನಂತರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರದ ಎಲ್ಲದಕ್ಕೂ ಆರು ತಿಂಗಳ ಒಳಗೆ ಅನುಮೋದನೆ ಸಿಗುವ ನಿರೀಕ್ಷೆಯಂತೂ ಇತ್ತು ಆದರೆ ನಿಗದಿತ ಮಾನದಂಡಕ್ಕಿಂತ ಇದು ಅವಧಿ ಹೆಚ್ಚಳವಾಗಿದೆ. ಈ ಕುರಿತು ಪರಿಶೀಲಿಸಿ ವರದಿ ನೀಡಿ' ಎಂದು ಕೇಂದ್ರ ಸರ್ಕಾರ ಸೂಚಿಸಿರುವುದರಿಂದ ಒಪ್ಪಿಗೆ ಸಿಗುವುದು ಮತ್ತಷ್ಟು ತಡವಾಗುತ್ತದೆ ಎಂದು ವರದಿಗಳು ಆಗಿವೆ.
ನಗರದೊಳಗಿನ ಮೆಟ್ರೋ ಕಾಮಗಾರಿಯ ಪ್ರಮುಖ ಸವಾಲುಗಳು:
ಭೂಸ್ವಾಧೀನ: ಕಟ್ಟಡಗಳು, ರಸ್ತೆ ಮತ್ತು ಮೂಲಸೌಕರ್ಯಗಳ ನಡುವೆ ಭೂಮಿಯನ್ನು ಪಡೆಯುವುದು ಸಹ ಕಷ್ಟವಾಗುತ್ತದೆ, ನಾಗರಿಕರಿಗೆ ತೊಂದರೆ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ.
ಸುರಂಗ ಮಾರ್ಗ ನಿರ್ಮಾಣ: ಭೂಮಿಯ ಬಳಗೆ ಟನೆಲ್ ಬೋರಿಂಗ್ ಯಂತ್ರ (TBM) ಬಳಸಿ ಕಾಮಗಾರಿ ನಡೆಸಬೇಕು. ನೀರು ಕಾಮಗಾರಿಗೆ ಅಡ್ಡಿಯಾಗುತ್ತವೆ.
ರಸ್ತೆ ಸಂಚಾರದ ನಿರ್ವಹಣೆ: ನಗರದ ಮಧ್ಯಭಾಗದಲ್ಲಿ ಕಾಮಗಾರಿ ಮಾಡುವುದರಿಂದ ರಸ್ತೆ ಸಂಚಾರದ ನಿರ್ವಹಣೆ ಕಷ್ಟವಾಗುತ್ತದೆ. ಇದು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ ಇದನೆಲ್ಲಾ ಗಮನದಲ್ಲಿ ಇಟ್ಟುಕೊಂಡುಕೆಲಸ ಮಾಡಬೇಕಾಗುತ್ತದೆ. ಜೊತಗೆ ಪೈಪ್‌ಲೈನ್, ಕೇಬಲ್ ಲೈನ್‌ಗಳು ಮುಂತಾದ ಮೂಲಸೌಕರ್ಯಗಳನ್ನು ಸ್ಥಳಾಂತರಿಸಬೇಕಾಗುತ್ತದೆ.
ಒಂದು ವರ್ಷ ಕೆಂಫು ಮಾರ್ಗದ ವಿಳಂಬ
ಬಿಎಂಆರ್‌ಸಿಎಲ್ (BMRCL) ಈ ಯೋಜನೆಯು 2030ರ ವೇಳೆಗೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಬೇಕೆಂಬ ಗುರಿಯನ್ನು ಹೊಂದಿದೆ.ಕೋರಮಂಗಲ, ಹೆಬ್ಬಾಳ, ಸರ್ಜಾಪುರ ಮುಂತಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಕೆಂಪು ಮಾರ್ಗವು ನಗರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಆದರೆ ಕೇಂದ್ರ ಸರ್ಕಾರದ ಒಅದುಮೋದನೆ ಸಿಗುವುದು ತಡವಾಗಿರುವುದರಿಂದ ಇನ್ನೂ ಒಂದು ವರ್ಷ ವಿಳಂಬವಾಗುತ್ತದೆ ಎಂದು ವರದಿಗಳು ಹೇಳಿವೆ.
ಈ ರೆಡ್ ಲೈನ್ ಮೆಟ್ರೋ ಮಾರ್ಗ ಸುಮಾರು 37 ಕಿಲೋಮೀಟರ್ ಉದ್ದದ್ದಾಗಿದೆ. ಇದರಲ್ಲಿ ಒಟ್ಟು 28 ನಿಲ್ದಾಣಗಳು ಸೇರುತ್ತವೆ. ಇದಕ್ಕಾಗಿ ಅಂದಾಜು 28,405 ಕೋಟಿ ವೆಚ್ಚ ತಗಲಬಹುದು ಎನ್ನಲಾಗಿದೆ. ಇನ್ನು ಈ ಮೆಟ್ರೋ ಮಾರ್ಗ 2030 ರೊಳಗೆ ಪೂರ್ಣಗೊಳ್ಳುತ್ತದೆ.
ಈ ಕೆಂಪು ಮಾರ್ಗದ ಮೆಟ್ರೋ ಯೋಜನೆ ಬೆಂಗಳೂರಿನ ಹೃದಯ ಮಾರ್ಗದಿಂಧ ಹಾದು ಹೋಗುತ್ತದೆ. ಜೊತೆಗೆ ಪ್ರಮುಖ ನ್ರಗಳನ್ನು ಸಹ ಸಂಪರ್ಕಿಸುತ್ತದೆ. ಈ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೂಡ ಸುಗಮವಾಗುತ್ತದೆ. ಹೆಬ್ಬಾಳ ಕಡೆಯಿಂದ ಪ್ರಯಾಣಿಸುವ ಜನರು ಬಸ್‌ಗಳಲ್ಲಿ ಕುಳಿತು, ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಕಾಯುವ ಫಜೀತಿ ಇರುವುದಿಲ್ಲ. ಅಷ್ಟೇ ಅಲ್ಲದೇ ಈ ಕೆಂಪು ಮಾರ್ಗದ ಮೆಟ್ರೋ ಕೋರಮಂಗಲ, ಸರ್ಜಾಪುರ ಮತ್ತು ಹೆಬ್ಬಾಳ ಸೇರಿದಂತೆ ಪ್ರಮುಖ ವಾಣಿಜ್ಯ ಮತ್ತು ವಾಸ್ತು ಶಿಲ್ಪ ಪ್ರದೇಶಗಳಿಗೆ ಈ ಮೆಟ್ರೋ ಸಂಪರ್ಕ ನೀಡಲಿದೆ, ಇದು ಸಾರ್ವಜನಿಕ ಪ್ರಯಾಣಿಕರಿಗೆ ಅನೇಕ ಪ್ರಯೋಜನಗಳು ಸಹ ಸಿಗುತ್ತದೆ.


Click it and Unblock the Notifications