ತುಮಕೂರು ಜನತೆಗೆ ಕೊನೆಗೂ ಸಿಕ್ತು ಸುಹಿಸುದ್ದಿ. ಬಹು ದಿನಗಳ ಕನಸಾದ ನಮ್ಮ ಮೆಟ್ರೋ ತುಮಕೂರಿನವರೆಗೆ ಬರಲಿದೆ. ಹೌದು, ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ತುಮಕೂರಿನವರೆಗೆ ವಿಸ್ತರಣೆ ಮಾಡುವ ಕುರಿತು ಹೈದರಾಬಾದ್‌ನ ಕಂಪನಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸುತ್ತಿದೆ. ಈ ವರದಿ ಸಿದ್ದವಾದ ನಂತರ ಅನುಮತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನ್ನು ಸಲ್ಲಿಸಲಾಗುವುದು. ಈ ಬಗ್ಗೆ ಸ್ವತಃ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಹೌದು,ನಮ್ಮ ಮೆಟ್ರೋ ಜಾಲ ತುಮಕೂರುವರೆಗೂ ವಿಸ್ತರಣೆ ಸಜ್ಜಾಗಿದೆ. ಈಗಲೇ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು,ಫೆಬ್ರವರಿಯಲ್ಲಿ ಮಾರ್ಗ ನಿರ್ಮಾಣ ಕಾರ್ಯ ಸಾಧ್ಯತಾ ವರದಿಯು ಕರ್ನಾಟಕ ಸರ್ಕಾರಕ್ಕೆ ತಲುಪಿದೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ನಮ್ಮ ಮೆಟ್ರೋ ವಿಸ್ತರಣೆಯ ಬಗ್ಗೆ ಮಾಹಿತಿಯನ್ನು ತಿಳಿಸಿದರು. ನಮ್ಮ ಮೆಟ್ರೋ ಹಸಿರು ಮಾರ್ಗ ಈಗಲೇ ರೇಷ್ಮೆ ಮಂಡಳಿ ನಿಲ್ದಾಣದಿಂದ ಮಾದಾವರದವರೆಗೆ ಸಂಚಾರ ಮಾಡುತ್ತಿದೆ.ತುಮಕೂರಿನವರೆಗೆ ಮೆಟ್ರೋ ಬಂದರೆ ಹೆದ್ದಾರಿ ಮೇಲಿನ ಟಾಫ್ರಿಕ್ ಕಡಿಮೆಯಾಗುತ್ತದೆ ಎಂದು ಹೇಳಿದ್ದರು.

ಮಾದಾವಾದ ಮೆಟ್ರೋ ನಿಲ್ದಾಣದಿಂದ ತುಮಕೂರಿಗೆ 52.41 ಕಿ.ಮೀ ದೂರವಿದೆ. ಹಾಗೂ ನಮ್ಮ ಮೆಟ್ರೋವನ್ನು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೇ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲಿದೆ.
ತುಮಕೂರಿನ ಮಾರ್ಗವಾಗಿ ಯಾವೆಲ್ಲಾ ಮೆಟ್ರೋ ನಿಲ್ದಾಣಗಳು ಆಗುತ್ತವೆ?
ಮಾದಾವರ,ಮಾಕಳಿ, ದಾಸನಪುರ,ನೆಲಮಂಗಲ,ನೆಲಮಂಗಲ ಬಸ್ ನಿಲ್ದಾಣ,ನೆಲಮಂಗಲ ರಾ.ಹೆ.,ಬೂದಿಹಾಳ,ಟಿ.ಬೇಗೂರು, ಕುಲುವನಹಳ್ಳಿ,ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ,ನಲ್ಲಯ್ಯನಪಾಳ್ಯ,ಚಿಕ್ಕಹಳ್ಳಿ,ಹಿರೇಹಳ್ಳಿ,ಪಂಡಿತನಹಳ್ಳಿ,ಕ್ಯಾತ್ಸಂದ್ರ,ಬಟವಾಡಿ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು ಬಸ್ ನಿಲ್ದಾಣ ಇಷ್ಟು ಸ್ಥಳಗಳು ನಿರೀಕ್ಷಿತ ಮೆಟ್ರೋ ನಿಲ್ದಾಣಗಳಾಗುತ್ತವೆ.
ಮೆಟ್ರೊ ನಿಲ್ದಾಣ ಈ ಮಾರ್ಗದಲ್ಲಿ ಆಗುವುದರಿಂದ ಏನೆಲ್ಲಾ ಅನುಕೂಲ?
- ಬೆಂಗಳೂರು ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.
- ಮೆಟ್ರೋ ಮಾರ್ಗದ ಸುತ್ತ ಕಂಪನಿಗಳು ಹೆಚ್ಚಳವಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗಲಿದೆ.
- ತುಮಕೂರು ನಗರ ಬೆಂಗಳೂರಿಗೆ ಸಮವಾಗಿ ಅಭಿವೃದ್ಧಿಯಾಗಲಿದೆ.
- ಉತ್ತರ ಕರ್ನಾಟಕ ಅಥವಾ ಕರಾವಳಿ ಭಾಗದಿಂದ ಜನರು ಬೆಂಗಳೂರನ್ನು ಬೇಗ ತಲುಪಲು ಸಹಾಯವಾಗುತ್ತದೆ.
- ಮೆಟ್ರೊ ನಿಲ್ದಾಣ ನಿರ್ಮಾಟವಾಗುವುದರಿಂದ ಟ್ರಾಪಿಂಗ್ ಸಮಸ್ಸೆಗೆ ಪರಿಹಾರ ಸಿಗುತ್ತದೆ.
ತುಮಕೂರು ಮಾರ್ಗ ಯಾವಾಗ ಆರಂಭ?
ನಮ್ಮ ಮೆಟ್ರೋ ಈಗಾಗಲೇ ಹಳದಿ ಮಾರ್ಗ, ಗುಲಾಬಿ ಮಾರ್ಗ, ನೀಲಿ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಮೊದಲು ಈ ಎಲ್ಲಾ ಕಾಮಗಾರಿಗಳು ಮುಗಿಯಬೇಕು.ತದನಂತರ ನಮ್ಮ ಮೆಟ್ರೋದ ಕೆಂಪುಮಾರ್ಗ,ಕಿತ್ತಳೆ ಮಾರ್ಗಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದ್ದು ಆ ಯೋಜನೆ ಮಾರ್ಗ ಸಮೀಕ್ಷೆ ಅಂತಿಮ ಹಂತದಲ್ಲಿವೆ.ಇವುಗಳ ಕಾಮಗಾರಿಯೂ ನಡೆಯಬೇಕಿದೆ. ಆ ಬಳಿಕ ಮಾದಾವರ ದಿಂದ ತುಮಕೂರು ಮಾರ್ಗದ ಬಗ್ಗೆ ಕಾಮಗಾರಿ ಆರಂಭವಾಗಲಿದೆ.2035 ವೇಳೆಗೆ ವೇಳೆಗೆ ತುಮಕೂರು ಮಾರ್ಗದ ಕಾಮಗಾರಿಯನ್ನು ಆರಂಭ ಮಾಡಬಹುದು.
ಕೇಂದ್ರ ಸರ್ಕಾರದ ಅನುಮತಿ ಬಾಕಿ ಮಾತ್ರ
ನಮ್ಮ ಮೆಟ್ರೋ ಜಾಲ ವಿಸ್ತರಣೆಯ ಬಗ್ಗೆ ಕೆಲ ತಿಂಗಳ ಹಿಂದೆ ಮಾದಾವರದಿಂದ ತುಮಕೂರು ಮಾರ್ಗ ನಿರ್ಮಾಣ ಕಾರ್ಯ ಸಾಧ್ಯತಾ ವರದಿ ನೀಡಲು ಖಾಸಗಿ ಸಂಸ್ಥೆಗೆ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ಗೆ ಟೆಂಡರ್ ನೀಡಿತ್ತು. ಆ ವರದಿ ಸಿದ್ಧವಾಗುತ್ತಿದೆ. ಫೆಬ್ರವರಿ ಅಂತ್ಯದೊಳಗೆ ಸರ್ಕಾರದ ಕೈ ಸೇರಲಿದೆ. ಸರ್ಕಾರವು ಯೋಜನೆಗೆ ಅನುಮತಿ ನೀಡಿ ನಂತರ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡರೇ ತುಮಕೂರಿನ ಮೆಟ್ರೋ ಮಾರ್ಗ ನಿರ್ಮಾಣವಾಗಲು ಅಂತಿಮ ಒಪ್ಪಿಗೆ ಸಿಗುತ್ತದೆ.
ಶೀಘ್ರವೇ ತುಮಕೂರು ಜನತೆಯ ಕನಸು ನನಸು ಆಗಲಿದೆ.


Click it and Unblock the Notifications