Microsoft: ಸಾವಿರಾರು ಜನರಿಗೆ ಗೇಟ್ ಪಾಸ್! ಮೈಕ್ರೋಸಾಫ್ಟ್ ಸಿಇಒ ಬಹಿರಂಗ ಹೇಳಿಕೆ.. ಇದೇ ಅಸಲಿ ಕಾರಣ

ಇತ್ತೀಚಿನ ದಿನಗಳಲ್ಲಿ ಲೇಆಫ್ ಭಾರೀ ಸದ್ದು ಮಾಡ್ತಿದೆ. ಸಾವಿರಾರು ಉದ್ಯೋಗಗಳು ಕೆಲಸ ಕಳೆದುಕೊಂಡು ಮನಯತ್ತ ಹೆಜ್ಜೆ ಹಾಕ್ತಿದ್ದಾರೆ. ಮೈಕ್ರೋಸಾಫ್ಟ್ ಕೂಡ ಇದಕ್ಕೆ ಹೊರತಾಗಿಲ್ಲ ಬಿಡಿ. ಹೌದು,ಇತ್ತೀಚೆಗೆ ಮೈಕ್ರೋಸಾಫ್ಟ್ ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಿದೆ.ಇದು ಜಾಗತಿಕ ಉದ್ಯೋಗಿಗಳ ಶೇಕಡಾ 3 ರಷ್ಟನ್ನು ಪ್ರತಿನಿಧಿಸುತ್ತದೆ.ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಕಂಪನಿ ಉದ್ಯೋಗಿಗಳನ್ನು ವಜಾಗೊಳಿಸುವುದಕ್ಕೆ ಅಸಲಿ ಕಾರಣವೇನು ಎಂಬುವುದನ್ನು ಬಹಿರಂಗಪಡಿಸಿದ್ದಾರೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಹೇಳಿರುವ ಪ್ರಕಾರ, ಮೈಕ್ರೋಸಾಫ್ಟ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವಿಕೆಗೆ ಕಾರಣ ಕಾರ್ಯಕ್ಷಮತೆಯಲ್ಲ, ಬದಲಿಗೆ ಕಂಪನಿಯ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಒಗ್ಗೂಡಿ ಸಂಘಟಿಸುತ್ತಿರುವುದು ಎಂದು ಹೇಳಿದ್ದಾರೆ.

Microsoft:   ಸಾವಿರಾರು ಜನರಿಗೆ ಗೇಟ್ ಪಾಸ್!..ಇದೇ ಅಸಲಿ ಕಾರಣ

ಈ ಕುರಿತು ಕಂಪನಿಯಾದ್ಯಂತ ನಡೆದ ಟೌನ್ ಹಾಲ್ ಸಭೆಯಲ್ಲಿ ಮಾತನಾಡಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಇತ್ತೀಚಿನ ವಜಾಗೊಳಿಸುವಿಕೆಗಳು ಆಂತರಿಕ ಮರುಸಂಘಟನೆಯ ಪರಿಣಾಮವಾಗಿದೆ ಎಂದು ಸ್ವಷ್ಟಪಡಿಸಿದ್ದಾರೆ. ಮೈಕ್ರೋಸಾಫ್ಟ್‌ನ ಆದ್ಯತೆಗಳನ್ನು ಸಮತೋಲನಗೊಳಿಸುವುದು ಗುರಿಯಾಗಿದೆ, ವಿಶೇಷವಾಗಿ ಕಂಪನಿಯು ಕೃತಕ ಬುದ್ಧಿಮತ್ತೆ (AI) ಮೇಲೆ ಗಮನಹರಿಸುವುದನ್ನು ಪರಿಗಣಿಸಿ. ಆದರೆ ವಜಾಗೊಳಿಸಲು ಕಾರಣ ನೌಕರರ ಕಾರ್ಯಕ್ಷಮತೆಯಲ್ಲ ಎಂದು ಅವರು ಹೇಳಿದ್ದಾರೆ.

AI ಮೂಲಸೌಕರ್ಯಕ್ಕಾಗಿ ಸುಮಾರು $80 ಬಿಲಿಯನ್ ಖರ್ಚು

ಹಣಕಾಸು ವರ್ಷದಲ್ಲಿ ಪ್ರಸ್ತುತ ಮೈಕ್ರೋಸಾಫ್ಟ್ AI ಮೂಲಸೌಕರ್ಯಕ್ಕಾಗಿ ಸುಮಾರು $80 ಬಿಲಿಯನ್ ಖರ್ಚು ಮಾಡುವ ಯೋಜನೆಯನ್ನು ಪ್ರಕಟಿಸಿದೆ. ಕಂಪನಿಯು ವಿವಿಧ ಗ್ರಾಹಕ ವಿಭಾಗಗಳಲ್ಲಿ ಕೊಪಿಲೋಟ್ AI ಸಹಾಯಕರ ಪರಿಚಯವನ್ನು ತ್ವರಿತಗೊಳಿಸಿದೆ. ಈ ಬದಲಾವಣೆಯು ಕೆಲವು ಉದ್ಯೋಗ ಮಾರ್ಪಡಿಸಲು ಅಥವಾ ತೆಗೆದುಹಾಕಲು ಕಾರಣವಾಗಿದೆ, ವಿಶೇಷವಾಗಿ ಉತ್ಪನ್ನ ಅಭಿವೃದ್ಧಿ ಮತ್ತು ಎಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ.

AI ಮೈಕ್ರೋಸಾಫ್ಟ್‌ನ ದೃಷ್ಟಿಕೋನಕ್ಕೆ ಹೆಚ್ಚು ಸೂಕ್ತವಾಗಿದೆ.ಕೆಲಸದ ವೇಗ ಎಐ ಮೂಲಕ ವೇಗವಾಗುತ್ತದೆ. ಕೋಡರ್‌ಗಳು ಸಾಫ್ಟ್‌ವೇರ್ ಆಪರೇಟರ್‌ಗಳಾಗಬಹುದು ಎಂದು ಮೈಕ್ರೋಸಾಫ್ಟ್ ಸಿಪಿಒ ಹೇಳಿದೆ. AI ಕೋಡಿಂಗ್ ಕೌಶಲ್ಯಗಳು ಬಳಕೆಯಲ್ಲಿಲ್ಲ ಎಂದು ಮೈಕ್ರೋಸಾಫ್ಟ್ ಮುಖ್ಯ ಉತ್ಪನ್ನ ಅಧಿಕಾರಿ ಅಪರ್ಣಾ ಚೆನ್ನಪ್ರಗಡ ವಿರೋಧಿಸಿದ್ದಾರೆ.

2ನೇ ಅತೀದೊಡ್ಡ ವಜಾ ಪ್ರಕ್ರಿಯೆ

ಮೈಕ್ರೋಸಾಫ್ಟ್ 2ನೇ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳ ವಜಾ ಪ್ರಕ್ರಿಯೆ ನಡೆಸಿದೆ. 2023ರಲ್ಲಿ ಜಗತ್ತಿನಾದ್ಯತ ಸುಮಾರು 10 ಸಾವಿರ ಸಿಬ್ಬಂದಿಗಳನ್ನು ಉದ್ಯೋಗದಿಂದ ವಜಾವನ್ನು ಮಾಡಲಾಗಿತ್ತು.

ಚೆನ್ನಪ್ರಗಡ ಅವರು AI ಸಾಫ್ಟ್‌ವೇರ್ ಅಭಿವೃದ್ಧಿಯ ಕೆಲವು ಭಾಗಗಳನ್ನು ಸ್ವಯಂಚಾಲಿತಗೊಳಿಸುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವು ಆಂತರಿಕ ಯೋಜನೆಗಳಲ್ಲಿ AI ಈಗ ಶೇಕಡಾ 30 ರಷ್ಟು ಕೋಡ್ ಅನ್ನು ಬರೆಯುತ್ತದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಕೂಡ ಒಪ್ಪಿಕೊಂಡಿದೆ.

ಮುಂದಿನ ದಿನಮಾನಗಳಲ್ಲಿ ಎಂಜಿನಿಯರ್‌ಗಳನ್ನು ಕೋಡರ್‌ಗಳಾಗಿ ನೋಡುವ ಬದಲು ಸಾಫ್ಟ್‌ವೇರ್ ಆಪರೇಟರ್‌ಗಳಾಗಿ ನೋಡಬಹುದು ಎಂದು ಅವರು ಸಲಹೆ ನೀಡಿದರು. ಇತ್ತೀಚಿನ ವಜಾಗೊಳಿಸುವಿಕೆಯು ಕೋಡರ್‌ಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಬ್ಲೂಮ್‌ಬರ್ಗ್ ವಿಶ್ಲೇಷಣೆಯ ಪ್ರಕಾರ, ವಾಷಿಂಗ್ಟನ್ ರಾಜ್ಯದಲ್ಲಿ 2,000 ಪ್ರತಿಶತಕ್ಕೂ ಹೆಚ್ಚು ಉದ್ಯೋಗಗಳು ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಕಳೆದುಹೋಗಿವೆ.

ಇತ್ತೀಚೆಗೆ ಎಲ್ಲಾ ಕ್ಷೇತ್ರದಲ್ಲೂ AI ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಸಾವಿರಾರು ಉದ್ಯೋಗಿಗಳ ಕೆಲಸವನ್ನು ಎಐ ಕಿತ್ತುಕೊಳ್ಳುತ್ತಿದೆ. ಈ ತಂತ್ರಜ್ಞಾನದ ಬಳಕೆಯಿಂದಲ್ಲೇ ಹೆಚ್ಚು ಉದ್ಯೋಗಿಗಳ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಬಿದ್ದಿದೆ. ಇದರಿಂದಾಗಿ ಸಾವಿರಾರು ಕುಟುಂಬಗಳು ಸಂಕಷ್ಟವನ್ನು ಎದುರಿಸುವಂತೆ ಆಗಿದೆ.

ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಸಮಯದ ಉಳಿತಾಯವಾಗುತ್ತದೆ ಎಂವ ಉದ್ದೇಶ ಕೂಡ ಇರಬಹುದು.

ಮೈಕ್ರೋಸಾಫ್ಟ್ ಎ ಜನವರಿಯಿಂದ ಮಾರ್ಚ್ ಅವಧಿಯ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತ್ತು.ಇದರ ನಡುವೆಯೇ ಉದ್ಯೋಗಿಗಳನ್ನು ಕೆಲಸದಿಂದ ತಗೆದು ಆಗಿರುವುದು ಬೇಸರದ ಸಂಗತಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+