For Quick Alerts
ALLOW NOTIFICATIONS  
For Daily Alerts

ಮೈಕ್ರೋಸಾಫ್ಟ್ ನಿಂದ ಹೀಗೊಂದು ಪ್ರಯೋಗ; ವಾರದಲ್ಲಿ ನಾಲ್ಕೇ ದಿನ ಕೆಲಸ

|

ಜಪಾನ್ ನ ಕಂಪೆನಿಗಳು ವಿಪರೀತ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕುಖ್ಯಾತಿ. ಅಂಥ ಜಪಾನ್ ನಲ್ಲಿ ಮೈಕ್ರೋಸಾಫ್ಟ್ ನಿಂದ ಕ್ರಾಂತಿಕಾರಿ ಎನಿಸುವಂಥ ಪ್ರಯೋಗ ನಡೆದಿದೆ. ಅದೇನೆಂದರೆ ಕೆಲಸವನ್ನೇ ಕಡಿಮೆ ಮಾಡಿಸುವುದು. ವಾರಕ್ಕೆ ನಾಲ್ಕೇ ದಿನ ಕೆಲಸ. ಉಳಿದ ಮೂರು ದಿನ ರಜಾ. ಇದರಿಂದ ಮಾರಾಟ ಹೆಚ್ಚಳ ಆಗಿದೆ. ವೆಚ್ಚ ಕಡಿಮೆ ಆಗಿದೆ.

ಕಳೆದ ಆಗಸ್ಟ್ ನಲ್ಲಿ ಎಲ್ಲ ಶುಕ್ರವಾರವೂ ಜಪಾನ್ ನ ತನ್ನ ಘಟಕವನ್ನು ಮೈಕ್ರೋಸಾಫ್ಟ್ ಮುಚ್ಚಿದೆ. ತನ್ನ ಎಲ್ಲ ಎರಡು ಸಾವಿರದ ಮುನ್ನೂರು ಪೂರ್ಣಾವಧಿ ಸಿಬ್ಬಂದಿಗೂ ವಿಶೇಷ ರಜಾ ನೀಡಿದೆ. ಅಷ್ಟೇ ಅಲ್ಲ, ಸಭೆಗಳನ್ನು ಮೂವತ್ತು ನಿಮಿಷಕ್ಕಿಂತ ಹೆಚ್ಚು ಮಾಡುವಂತಿಲ್ಲ ಎಂಬ ಮಿತಿ ಹೇರಿದೆ. ಆನ್ ಲೈನ್ ಚಾಟ್ ಮೂಲಕವೇ ಅಧಿಕೃತ ಸಂವಹನ ನಡೆಸುವುದನ್ನು ಪ್ರೋತ್ಸಾಹಿಸಿದೆ.

ಚರ್ಚೆ- ಸಭೆಗಳಲ್ಲಿ ಗರಿಷ್ಠ ಐದು ಮಂದಿ ಮಾತ್ರ ಪಾಲ್ಗೊಳ್ಳಬೇಕು. ಇಮೇಲ್ ಬದಲಿಗೆ ಆನ್ ಲೈನ್ ಸಂವಹನವನ್ನು ಪ್ರೋತ್ಸಾಹಿಸಲಾಗಿದೆ. ಇದರ ಫಲಿತಾಂಶವಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಆಗಸ್ಟ್ ನಲ್ಲಿ ಪ್ರತಿ ಸಿಬ್ಬಂದಿಯಿಂದ ನಲವತ್ತು ಪರ್ಸೆಂಟ್ ಮಾರಾಟ ಹೆಚ್ಚಾಗಿದೆ. ವಿದ್ಯುತ್ ಬಿಲ್ ಶೇಕಡಾ ಇಪ್ಪತ್ತೈದರಷ್ಟು, ಕಾಗದದ ಖರ್ಚು ಶೇಕಡಾ ಐವತ್ತರಷ್ಟು ಇಳಿಕೆ ಆಗಿದೆ.

ಮೈಕ್ರೋಸಾಫ್ಟ್ ನಿಂದ ಹೀಗೊಂದು ಪ್ರಯೋಗ; ವಾರದಲ್ಲಿ ನಾಲ್ಕೇ ದಿನ ಕೆಲಸ

ಈ ಪ್ರಯೋಗದಿಂದ ಏನು ಗೊತ್ತಾಯಿತು ಎಂಬುದನ್ನು ಕಂಪೆನಿ ತಿಳಿಸಿದೆ. ಉದ್ಯೋಗಿಗಳು ವಿಭಿನ್ನವಾದ ಕೆಲಸದ ವಿಧಾನ ಬಯಸುತ್ತಾರೆ. ಇದರಿಂದ ಕ್ಷಮತೆ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಇದೇ ರೀತಿಯ ಮತ್ತೊಂದು ಪ್ರಯೋಗವನ್ನು ಚಳಿಗಾಲದಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ. ಆದರೆ ವಿಶೇಷ ರಜಾ ಇರುವುದಿಲ್ಲ.

ಅದರ ಬದಲಿಗೆ ಅವರ ರಜಾಗಳನ್ನು ಬಳಸಿಕೊಳ್ಳಲು ಉತ್ತೇಜಿಸಲಾಗುತ್ತದೆ ಎನ್ನಲಾಗಿದೆ. ಉದ್ಯೋಗಿಗಳ ಮೇಲೆ ಒತ್ತಡ ಕಡಿಮೆ ಮಾಡುವಂಥ ವಿಧಾನ ಕಂಡುಕೊಳ್ಳಲು ಜಪಾನ್ ಸರ್ಕಾರ ಸಲಹೆ ಮಾದಿದೆ. ಏಕೆಂದರೆ ವಿಪರೀತ ಕೆಲಸ ಒತ್ತಡದಲ್ಲಿ ಸಾವನ್ನಪ್ಪುವವರ ಸಂಖ್ಯೆ ಜಪಾನ್ ನಲ್ಲಿ ಹೆಚ್ಚಿದೆ. ಜತೆಗೆ ದಂಪತಿಗೆ ಕೆಲಸದ ಒತ್ತಡದಲ್ಲಿ ಮಕ್ಕಳಾಗುವ ಪ್ರಮಾಣ ಕಡಿಮೆ ಆಗಿ, ದೇಶದ ಜನಸಂಖ್ಯೆ ಕಡಿಮೆ ಆಗುತ್ತಿದೆ.

Read more about: employee ಉದ್ಯೋಗ
English summary

Microsoft Tested 4 Days Work In Japan For Some Employees

IT giant Microsoft trial 4 days work in Japan for some employees. Here is the interesting result of test.
Story first published: Tuesday, November 5, 2019, 17:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X