ಈ ವರ್ಷದ ಮೊದಲ ತಿಂಗಳಿಂದ ನಿರಂತರ ಬೆಲೆ ಏರಿಕೆಗೆ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ಮೆಟ್ರೋ ಆಯ್ತು, ಕೆಎಸ್ಆರ್ ಟಿಸಿ, ಬಿಎಂಟಿಸಿ ಆಯ್ತುನ ಕರೆಂಟ್ ಬಿಲ್ ,ನೀರಿನ ದರ ಏರಿಕೆ ಹೀಗೆ ಸರ್ಕಾರ ಎಲ್ಲದರ ಮೇಲೆ ಬೆಲೆ ಏರಿಕೆಯನ್ನು ಮಾಡಿ ಜನರಿಗೆ ಜೇಬಿಗೆ ಕತ್ತರಿಯನ್ನು ಹಾಕುತ್ತಲೇ ಇದೆ. ಇದೀಗ ಕುಡಿಯುವ ಹಾಲಿನ ಬೆಲೆಯ ಮೇಲೂ ಸಹ ಸರ್ಕಾರ ಬೆಲೆ ಏರಿಕೆ ಮಾಡಲು ಹೊರಟಿದ್ದು, ಬೆಲೆ ಏರಿಕೆಯ ಗಾಯದ ಮೇಲೆ ಮತ್ತೆ ಮತ್ತೆ ಬರೆ ಎಳೆಯುವಂತೆ ಮಾಡಿದೆ.
ಹೌದು, ಹಾಲಿನ ಬೆಲೆ 5 ರೂ. ಹೆಚ್ಚಳಕ್ಕೆ KMF ಸರ್ಕಾರಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಕುರಿತು ಇಂದು ಸಿಎಂ ಸಿದ್ದರಾಮಯ್ಯ ಜೊತೆ KMF ಅಧಿಕಾರಿಗಳು ಮಹತ್ವದ ಸಭೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಣೆಗೆ ಇಂದೇ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಹೆಚ್ಚು ಇದೆ.

ಬಜೆಟ್ ಮುನ್ನ ಕರ್ನಾಟಕ ಹಾಲು ಒಕ್ಕೂಟ ಮಂಡಳಿ( ಕೆಎಂಎಫ್) ಹಾಲಿನ ದರ ಏರಿಕೆ ಬಗ್ಗೆ ಹೇಳಿತ್ತು.ಈ ಕುರಿತು ರಾಜ್ಯ ಸರ್ಕಾರ ನಂದನಿ ಹಾಲಿನ ದರ ಏರಿಕೆಗೆ ಕೂಡ ತಯಾರಿ ಮಾಡತ್ತು. ಸಿಎಂ ಸಿದ್ದರಾಮಯ್ಯನವರ ಜೊತಗಿನ ಮಾತುಕತೆಯ ನಂತರ ದರ ಏರಿಕೆಯಾಗಲಿದೆ.
ಕೆಎಂಎಫ್ ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಯೇನು?
ರಾಜ್ಯದ ರೈತರು ಕಳೆದ ತಿಂಗಳು ಕೆಎಂಎಫ್ ಮುಂದೆ ಹಾಲಿನ ದರ ಏರಿಸುವಂತೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಜೊತೆಯಾಗಿ ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರ ಏರಿಸುವಂತೆ ಒತ್ತಡವನ್ನು ಕರ್ನಾಟಕ ಹಾಲು ಒಕ್ಕೂಟ ಮಂಡಳಿ( ಕೆಎಂಎಫ್)ಯ ಮೇಲೆ ಹಾಕಿದ್ದವು.ಹೀಗಾಗಿ ಕೆಎಂಎಫ್ ಆಡಳಿತ ಮಂಡಳಿ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಅನುಮತಿ ನೀಡುವಂತೆ ಸರ್ಕಾರ ಮನವಿಯನ್ನು ಮಾಡಿತ್ತು.
ರಾಜ್ಯ ಸರ್ಕಾರಕ್ಕೆ ಕೆಎಂಎಫ್ ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಕಳಿಸಿದೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರು ಇಂದು ಸಿಎಂ ಸಿದ್ದರಾಮಯ್ಯ ಅವರ ಜೊತೆ ಹಾಲಿನ ದರ ಏರಿಕೆ ವಿಚಾರವಾಗಿ ಸಭೆ ನಡೆಸಲಿದ್ದಾರೆ.
ಬೆಲೆ ಏರಿಕೆ ಏಕೆ?
ರಾಜ್ಯಾದ್ಯಂತ ಹಾಲು ಉತ್ಪಾದಕರ ಸಂಘಗಳು ಈ ಕೆಳಗಿನ ಕಾರಣಗಳನ್ನು ಕೊಟ್ಟಿದೆ.
- ಸರ್ಕಾರವನ್ನು ಲೀಟರ್‌ಗೆ 5 ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಒತ್ತಾಯಿಸಿವೆ
- ಮೇವು ಮತ್ತು ಮೇವಿನ ವೆಚ್ಚ ಏರಿಕೆ: ಜಾನುವಾರುಗಳ ಮೇವಿನ ವೆಚ್ಚ ಏರಿಕೆಯಾಗುತ್ತಿರುವುದು ಹೈನುಗಾರರ ಮೇಲೆ ಆರ್ಥಿಕ ಹೊರೆಯನ್ನುಂಟು ಮಾಡಿದೆ.
- ಕಾರ್ಮಿಕ ವೆಚ್ಚಗಳು: ಡೈರಿ ಕಾರ್ಮಿಕರ ವೇತನವು ಏರಿಕೆಯಾಗಿದ್ದು, ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಾಗುತ್ತಿವೆ.
ಇತರ ಕಾರ್ಯಾಚರಣೆ ವೆಚ್ಚಗಳು: ಸಾರಿಗೆ, ಸಂಗ್ರಹಣೆ ಮತ್ತು ವಿತರಣಾ ವೆಚ್ಚಗಳು ಸಹ ಹೆಚ್ಚಾಗಿದೆ.
ಆರು ತಿಂಗಳ ಹಿಂದಷ್ಟೇ ಹಾಲಿನ ಬೆಲೆ ಏರಿಕೆ
ಆರು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ನಂದಿನಿ ಹಾಲಿನ ಪ್ರಮಾಣ ಮತ್ತು ದರ ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್ ಮುಂದಾಗಿದೆ.
ದರ ಏರಿಕೆಗೆ ಸ್ಪಷ್ಟನೆ ನೀಡಿದ್ದ ಭೀಮಾ ನಾಯ್ಕ್
ಈ ಹಿಂದೆ 'ದಕ್ಷಿಣ ಭಾರತದ ಇತರೆ ರಾಜ್ಯಗಳು ಮತ್ತು ಅಮುಲ್ ಹಾಲಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನದರ ಕಡಿಮೆಯೇ ಇದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕರ್ನಾಟಕ ಹಾಲು ಮಹಾಮಂಡಳ ನೀಡುತ್ತಿದೆ ಎಂದು ಆರು ತಿಂಗಳ ದರ ಏರಿಕೆ ಮಾಡಿದಾಗ ಭೀಮಾನಾಯ್ಕ ಹೇಳಿದ್ದರು.
ಸರ್ಕಾರದ ಅನುಮೋದನೆ ಅಷ್ಟೇ ಬಾಕಿ
ಕೆಎಂಎಫ್ ಬೆಲೆ ಏರಿಕೆ ಪ್ರಸ್ತಾವನೆಯನ್ನು ಸರ್ಕಾರಕಕ್ಕೆ ಸಲ್ಲಿಸಿದ್ದಾರೆ. ಈಗಾಗಲೇ ಕೆಎಂಎಫ್ ಹಾಲಿನ ದರ ಏರಿಕೆಯ ಸಾಧಕ ಭಾದಕಗಳ ಬಗ್ಗೆ ಹಾಲು ಒಕ್ಕೂಟದ ಜೊತೆ ಸಭೆ ನಡೆಸಿದೆ. ಕೆಎಂಎಫ್ ಆಡಳಿತ ಮಂಡಳಿ ಸದ್ಯ ಮುಖ್ಯಮಂತ್ರಿ ಅನುಮತಿಗಾಗಿ ಮಾತ್ರ ಕಾಯುತ್ತಿದೆ. ಸಿಎಂ ಕಡೆಯಿಂದ ಗ್ರೀನ್‌ಸಿಗ್ನಲ್ ಸಿಕ್ಕ ಬೆನ್ನಲ್ಲೇ ಹಾಲಿನ ದರ ಏರಿಕೆಯ ಘೋಷಣೆ ಮಾಡಲಾಗುತ್ತದೆ.


Click it and Unblock the Notifications