ನಿಮ್ಮ ಅಕೌಂಟ್ ನಲ್ಲಿ ಎಷ್ಟು ದುಡ್ಡಿದೆ ಎಂದು ಹಾಗೇ ಪರೀಕ್ಷಿಸಿದಾಗ 22,500 ಕೋಟಿ ರುಪಾಯಿ ಬ್ಯಾಲೆನ್ಸ್ ತೋರಿಸಿದರೆ ಏನು ಮಾಡ್ತೀರಿ? ಇನ್ನೂ ವಿಚಿತ್ರ ಅಂದರೆ, ಅದರಲ್ಲಿ ಒಂದು ರುಪಾಯಿ ಕೂಡ ಡ್ರಾ ಮಾಡಲು ಸಹ ಸಾಧ್ಯವಾಗದಿದ್ದಲ್ಲಿ ಆಗ ಏನು ಮಾಡ್ತೀರಿ? ಇಂಥ ಘಟನೆ ಆಗಿರುವುದು ಯು.ಎಸ್.ನ ಮಸಾಚ್ಯುಸೆಟ್ಸ್ ನಲ್ಲಿ. ನಿಮಗೆ ಆ ಮೊತ್ತ ಎಷ್ಟು ಎಂಬ ಅಂದಾಜು ಸಿಗಲಿ ಎಂಬ ಕಾರಣಕ್ಕೆ ರುಪಾಯಿಯಲ್ಲಿ ಲೆಕ್ಕ ತಿಳಿಸಬೇಕಾಯಿತು.
ಬ್ಯಾಂಕ್ ಆಫ್ ಅಮೆರಿಕದಲ್ಲಿ ಮಾನಸಿಕ ಚಿಕಿತ್ಸಾ ತಜ್ಞ ಬೇಲೇಸ್ ಅಗಿರೆ ಅವರ ಖಾತೆಯಲ್ಲಿ 245 ಕೋಟಿ ಅಮೆರಿಕನ್ ಡಾಲರ್ ಬ್ಯಾಲೆನ್ಸ್ ತೋರಿಸಿದೆ. ಅದು ಕೂಡ ಖಾತೆಯಲ್ಲಿ ತೋರಿಸಿದ ತಪ್ಪಾದ ಬ್ಯಾಲೆನ್ಸ್ ಹೊರೆತು ಅಷ್ಟು ಮೊತ್ತವೇನೂ ಖಾತೆಯಲ್ಲಿ ಇರಲಿಲ್ಲ. ಅದು ತಪ್ಪಿನಿಂದ ಹಾಗೆ ಆಗಿದ್ದು ಎಂದು ಬ್ಯಾಂಕ್ ವಕ್ತಾರ ಬಿಲ್ ಹಾಲ್ದೀನ್ ತಿಳಿಸಿದ್ದಾರೆ. ಜತೆಗೆ ಅದನ್ನು ಸರಿ ಮಾಡಲಾಗುತ್ತದೆ ಅಂತಲೂ ಹೇಳಿದ್ದಾರೆ.
ಗ್ರಾಹಕರ ಬ್ಲೇಸ್ ಅಗಿರೆ ಅವರು ಬ್ಯಾಂಕ್ ನಿಂದಲೇ ತಪ್ಪು ತಿದ್ದಬಹುದು ಅಂತ ಕಾದಿದ್ದಾರೆ. ಆದರೆ ಅದು ಆಗಿಲ್ಲ. ಆ ನಂತರ ರಿಲೇಷನ್ ಷಿಪ್ ಮ್ಯಾನೇಜರ್ ಗೆ ಸುದ್ದಿ ಮುಟ್ಟಿಸಿದ್ದಾರೆ. ವೆಬ್ ನಲ್ಲಿ ಹಾಗೂ ಮೊಬೈಲ್ ಫೋನ್ ಅಪ್ಲಿಕೇಷನ್ ಎರಡರಲ್ಲೂ ಇದೇ ಬ್ಯಾಲೆನ್ಸ್ ತೋರಿಸುತ್ತಿದೆ ಎಂದು ತಿಳಿಸಿದ್ದಾರೆ. ಆ ನಂತರ ಬ್ಯಾಂಕ್ ನಿಂದ ಅಂತೂ ತಪ್ಪು ಸರಿ ಪಡಿಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ಗೊತ್ತಾಗಿದೆ.

ಇತ್ತೀಚೆಗೆ ಸಿಟಿ ಗ್ರೂಪ್ ನಿಂದಲೂ ಇಂಥದ್ದೇ ಯಡವಟ್ಟು ಆಗಿತ್ತು. 90 ಕೋಟಿ ಅಮೆರಿಕನ್ ಡಾಲರ್ ಮೊತ್ತವನ್ನು ವರ್ಗಾವಣೆ ಮಾಡಿದ್ದರು. ಆ ಮೊತ್ತವನ್ನು ವರ್ಗಾವಣೆ ಮಾಡಿದ್ದು ಸಾಲಗಾರರಿಗೆ. ಕೆಲವರು ತಾವಾಗಿಯೇ ವಾಪಸ್ ನೀಡಿದರು. ಮತ್ತೆ ಕೆಲವರು, ವಾಪಸ್ ಕೊಡಲು ಆಗಲ್ಲ ಅಂದರು. ಅಂಥವರ ಜತೆ ಈಗ ಸಿಟಿ ಗ್ರೂಪ್ ಕಾನೂನು ಸಮರದಲ್ಲಿ ತೊಡಗಿದೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications