72ನೇ ವಿಶ್ವ ಸುಂದರಿ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ. ವಿಶ್ವ ಸುಂದರಿ ಪಟ್ಟ ಭಾರತದ ನಂದಿನಿ ಗುಪ್ತಾ ಅವರಿಗೆ ಒಲಿಯುತ್ತಾ? ಬಹುನಿರೀಕ್ಷಿತ ವಿಶ್ವ ಸುಂದರಿ 2025 ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಿದ್ಧವಾಗಿದೆ. ಹೈದರಾಬಾದ್‌ನ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಫೈನಲ್ ಸಮಾರಂಭ ಜರುಗಲಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ವಿಶ್ವ ಸುಂದರಿ ಕಿರೀಟ ಯಾರ ಮುಡಿಗೇರಲಿದೆ ಅನ್ನೋದು ಬಹಿರಂಗವಾಗಲಿದೆ. ಹಾಗಿದ್ರೆ, ಈ ಸ್ಪರ್ಧೆಯಲ್ಲಿ ಗೆಲ್ಲುವ ಅದೃಷ್ಟ ಶಾಲಿಗೆ ಸಿಗುವ ಬಹುಮಾನದ ಎಷ್ಟು? ಈ ಕಿರೀಟದ ವಿಶೇಷತೆಗಳೇನು? ಎಂಬುವುದನ್ನು ನೀವು ತಿಳಿಯಲೇಬೇಕು.
ಹೌದು, ವಿಶ್ವ ಸುಂದರಿ ಪಟ್ಟಕ್ಕಾಗಿ ಸುಮಾರು ಒಂದು ತಿಂಗಳಿನಿಂದ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದು, ಕೊನೆಗೂ ಇಂದು ಕೊನೆಯ ಹಂತ ಗ್ರ್ಯಾಂಡ್ ಫಿನಾಲೆಗೆ ತಲುಪಿದೆ. ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 108 ಸ್ಪರ್ಧಿಗಳು ವಿವಿಧ ದೇಶಗಳಿಂದ ಬಂದಿದ್ದರು. ಅದರಲ್ಲಿ ಭಾರತವನ್ನು ಪ್ರತಿನಿಧಿಸುವ ಸುಂದರಿ ನಂದಿನಿ ಗುಪ್ತಾ ಕೂಡ ಒಬ್ಬರು .
ವಿಶ್ವ ಸುಂದರಿಯ ಆಯ್ಕೆಗಾಗಿ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಿಂದ ಕೆಲವರನ್ನು ಅಂತಿಮ ಹಂತಕ್ಕೆ (ಫೈನಲ್‌ಗೆ) ಆಯ್ಕೆ ಮಾಡಲಾಗಿದೆ. ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಗಳ ಪ್ರತಿ ವಿಭಾಗದಿಂದ ನಾಲ್ವರು ವಿಜೇತರಂತೆ, ಒಟ್ಟು 16 ಜನರ ಹೆಸರುಗಳನ್ನು ಫೈನಲ್ ಮಾಡಲಾಗಿದೆ ಈ 16 ಸುಂದಿರಿಯರಲ್ಲಿ ಯಾರು ವಿಶ್ವ ಸುಂದರಿಯಾಗುತ್ತಾರೆ ಎಂಬವುದು ಇನ್ನೂ ಕೆಲವೇ ಕ್ಷಣದಲ್ಲಿ ಗೊತ್ತಗುತ್ತದೆ.

ಈ ಕಾರ್ಯಕ್ರಮದಲ್ಲಿ 2016ರ ಮಿಸ್ ವರ್ಲ್ಡ್ ವಿಜೇತೆ ಸ್ಟೆಫನಿ ಡೆಲ್ ವ್ಯಾಲೆ ಹಾಗೂ ಭಾರತದ ಪ್ರಸಿದ್ಧ ನಿರೂಪಕ ಸಚಿನ್ ಕುಂಭಾರ್ ಇಂದಿನ ಗ್ರಾಂಡ್ ಫಿನಾಲೆ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್, ನಟ ಇಶಾನ್ ಖಟ್ಟರ್, ಹಾಗೂ 2017ರ ವಿಶ್ವ ಸುಂದರಿ ಮಾನುಶಿ ಚಿಲ್ಲರ್ ಹಲವಾರು ಗಣ್ಯರು ಮತ್ತು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಿಸ್ ವರ್ಲ್ಡ್ ಕಿರೀಟ: ವಿಶ್ವ ಸೌಂದರ್ಯದ ಪ್ರತಿಷ್ಠೆಯ ಪ್ರತೀಕ
ಜಗತ್ತಿನ ಅತ್ಯಂತ ಪ್ರಸಿದ್ಧ ಸೌಂದರ್ಯ ಸ್ಪರ್ಧೆಯಾದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ವಿಜೇತಿಗೆ ನೀಡಲಾಗುವ ಕಿರೀಟವು ತನ್ನ ವಿಶಿಷ್ಟ ವಿನ್ಯಾಸದೊಂದಿಗೆ ಗಮನವನ್ನು ಸಳೆಯುತ್ತಳೇ ಇರುತ್ತದೆ. ಈ ಕಿರೀಟವು ಮಿಸ್ ವರ್ಲ್ಡ್ ಸ್ಪರ್ಧೆಯ ಘನತೆಗಿದೆ. ಜನಪ್ರಿಯತೆ ಜೊತೆಗೆ, ಉತ್ತಮ ಜೀವನವನ್ನು ನಡೆಸಲು ದಾರಿಯಾಗಲಿದೆ. ಈ ಒಂದು ಪ್ರಶಸ್ತಿಯು ವಿಜೇತರ ಜೀವನವನ್ನೇ ಬದಲಾವಣೆ ಮಾಡಲಿದೆ.
ಕಿರೀಟದ ಮಧ್ಯಭಾಗದಲ್ಲಿ ಉಂಗುರದ ಆಕಾರದ ನೀಲಿ ಬಣ್ಣದ ಗ್ಲೋಬ್ ಇರುತ್ತದೆ, ಇದು ಸಂಪೂರ್ಣ ಪ್ರಪಂಚವನ್ನು ಸೂಚಿಸುತ್ತದೆ. ಅದರ ಸುತ್ತಮುತ್ತ ಆರು ಬಿಳಿ ಚಿನ್ನದ ಕೊಂಬುಗಳು ಅಳವಡಿಸಲಾಗಿದ್ದು, ಅವು ಭೂಭಾಗಗಳ ಪ್ರತೀಕಗಳಾಗಿವೆ. ಈ ಕೊಂಬುಗಳನ್ನು ಬಿಳಿ ಹಾಗೂ ನೀಲಿ ಬಣ್ಣದ ಮುತ್ತುಗಳು ಮತ್ತು ಕಿಂಕುಚಿಯಾದ ವಜ್ರಗಳಿಂದ ಅಲಂಕರಿಸಲಾಗಿದೆ. ಈ ಆಭರಣಗಳು ಶಾಂತಿ, ವಿಶ್ವ ಐಕ್ಯತೆ ಮತ್ತು ಮಹಿಳಾ ಸಬಲೀಕರಣವನ್ನು ಪ್ರತಿಬಿಂಬಿಸುತ್ತವೆ
ಕಳೆದ 70 ವರ್ಷದಲ್ಲಿ 9 ಬಾರಿ ಕಿರೀಟದ ವಿನ್ಯಾಸ ಹಾಗೂ ನಗದು ಬಹುಮಾನ ಬದಲಾವಣೆಯಾಗುತ್ತಾ ಬಂದಿದೆ. 2022ರಲ್ಲಿ ಅನ್ನೆ ಜಾಕ್ಕಪಾಂಗ್ ಸಂಸ್ಥೆಯನ್ನು ಖರೀದಿ ಮಾಡಿವ ಬಳಿಕ, ಮೌಅವದ್ ಜ್ಯುವೆಲ್ಲರಿಯ ಒಪ್ಪಂದ ಪರಿಷ್ಕರಿಸಲಾಗಿದೆ. ಹೊಸ ಕಿರೀಟದ ವಿನ್ಯಾಸ ಬದಲಾವಣೆ ಮಾಡಲಾಗಿದೆ. ಹೊಸ ಕಿರೀಟದಲ್ಲಿ 110 ಕ್ಯಾರೆಟ್‌ನ ನೀಲಿ ಹರಳುಗಳು ಇದೆ, 48 ಕ್ಯಾರೆಟ್‌ನ ಬಿಳಿ ವಜ್ರಗಳಿದೆ, 45.15 ಕ್ಯಾರೆಟ್‌ನ ರೋಯಲ್ ಬ್ಲ್ಯೂ ಹರಳುಗಳಿದೆ. ಈ ಕಿರೀಟದ ಮೌಲ್ಯ ಸರಿಸುಮಾರು 5.75 ಮಿಲಿಯನ್ ಡಾಲರ್ ಆಗಿದೆ.
ಅಂದಾಜು ಈ ಮಿಸ್ ಇಂಡಿಯಾ ಕಿರೀಟದಲ್ಲಿ 1,770 ವಜ್ರಗಳು ಅಳವಡಿಸಲ್ಪಟ್ಟಿದ್ದು, ಇದರ ಮೌಲ್ಯ ಸುಮಾರು ಒಂದು ಲಕ್ಷ ಅಮೆರಿಕನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 84 ಲಕ್ಷ. ಆದರೆ, ಈ ಕಿರೀಟ ವಿಜೇತೆಯ ವೈಯಕ್ತಿಕ ಸಂಪತ್ತಾಗುವುದಿಲ್ಲ. ಅವರು ಕೇವಲ ಒಂದು ವರ್ಷ ಮಾತ್ರ ಧರಿಸಬಹುದು. ಮುಂದಿನ ವರ್ಷ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಈ ಕಿರೀಟವನ್ನು ನೀಡಬೇಕಾಗುತ್ತದೆ. ಇದು ಮಿಸ್ ವರ್ಲ್ಡ್ ಪರಂಪರೆಯ ಒಂದು ಭಾಗವಾಗಿದೆ.
ಮಿಸ್ ವರ್ಲ್ಡ್ ವಿಜೇತಿಗೆ ಬಂಪರ್ ಬಹುಮಾನ
ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯ ವಿಜೇತಿಗೆ ದೊರೆಯುವ ಬಹುಮಾನಗಳು ಮತ್ತು ಅವಕಾಶಗಳು ವಿಶ್ವದ ಗಮನ ಸೆಳೆಯುತ್ತಿವೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಸಿಗುವ ಬಹುಮಾನ ಮೊತ್ತ ಒಂದು ಮಿಲಿಯನ್ ಅಮೆರಿಕನ್ ಡಾಲರ್ ( ಭಾರತೀಯ ಕರೆಸ್ಸಿಯಲ್ಲಿ ಸುಮಾರು 8.5 ಕೋಟಿ ರೂಪಾಯಿ) ಇವರು ಒಂದು ವರ್ಷ ಕಾಲ ಉಚಿತವಾಗಿ ವಿಶ್ವದ ಸುತ್ತಲು ಅವಕಾಶ ಪಡೆಯುತ್ತಾರೆ. ಈ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಆಯೋಜಕರು ನೀಡುತ್ತಾರೆ.
ಮಿಸ್ ಇಂಡಿಯಾ ವಿಜೇತೆ ಈ ಅವಧಿಯಲ್ಲಿ ಮಿಸ್ ವರ್ಲ್ಡ್ ಸಂಸ್ಥೆಯ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸೇವಾ ಕಾರ್ಯಕ್ರಮಗಳು, ನಿಧಿ ಸಂಗ್ರಹಣೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಮಹಿಳಾ ಸಬಲೀಕರಣಕಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಗುತ್ತದೆ. ಅಂತಿಮ ಸ್ಪರ್ಧೆಗೆ ನಾಲ್ಕು ತೀರ್ಪುಗಾರರು ನೇಮಕಗೊಂಡಿದ್ದು, ವಿಜೇತೆಯನ್ನು ಆಯ್ಕೆ ಮಾಡುತ್ತಾರೆ.
ವಿಶ್ವ ಸುಂದರಿ ಕಿರೀಟ ಭಾರತ ಗೆದ್ದರೆ ದಾಖಲೆ
ವಿಶ್ವ ಸುಂದರಿಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜಸ್ಥಾನದ ನಂದಿನಿ ಗುಪ್ತಾ. ಇವರು ಈ ಬಾರಿ ಗೆದ್ದರೆ ಭಾರತಕ್ಕೆ ಅತಿ ಹೆಚ್ಚು ವಿಶ್ವ ಸುಂದರಿಯ ಕೀರಿಟ ಸಿಕ್ಕಿದೆ ಎಂಬ ಹೆಗ್ಗೆಳಿಗೆ ಪಾತ್ರವಾಗುತ್ತದೆ. ನಂದಿನಿ ಗುಪ್ತಾ ಈಗಾಗಲೇ ವಿಶ್ವ ಸುಂದರಿಯ ಸ್ಪರ್ಧೆಯ ಟಾಪ್ 40 ಕ್ವಾರ್ಟರ್ ಫೈನಲಿಸ್ಟ್ ಪಟ್ಟಿಗೆ ಸೇರಿದ್ದಾರೆ.
1951ರಿಂದ ಪ್ರಾರಂಭವಾದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ, ಭಾರತ ಮತ್ತು ವೆನೆಜುವೇಲಾ ಎರಡೂ ದೇಶಗಳು 6-6 ಬಾರಿ ಕಿರೀಟವನ್ನು ಗೆದ್ದಿವೆ. ಈ ಬಾರಿ ಭಾರತದಿಂದ ನಂದಿನಿ ಗುಪ್ತಾ ಮಿಸ್ ವರ್ಲ್ಡ್ ಗೆದ್ದರೆ, ಭಾರತ ಅತಿ ಹೆಚ್ಚು ಬಾರಿ ಈ ಪ್ರಶಸ್ತಿ ಗೆದ್ದ ದೇಶ ಎಂದು ದಾಖಲೆಯ ಪಟ್ಟಿಗೆ ಸೇರುತ್ತದೆ.
ಈ ಬಾರಿಯೂ ಭಾರತದ ಪ್ರತಿನಿಧಿ ನಂದಿನಿ ಗುಪ್ತಾ ವಿಶ್ವಸುಂದರಿ ಎನಿಸಿಕೊಳ್ಳುತ್ತಾರಾ ಎಂಬ ಕಾತುರ ಭಾರತಿಯರಲ್ಲಿದೆ.ಯಾರಿಗೆ ಮಿಸ್ ಇಂಡಿಯಾ ಕಿರೀಟ್ ಸಿಗುತ್ತೆ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications