ಹಾಲು ತರಕಾರಿ, ಬಟ್ಟೆ, ದಿನಸಿಯಂತೆ ನೀವು ಇನ್ಮುಂದೆ ಕಾವೇರಿ ನೀರನ್ನು ಅನ್‌ಲೈನ್ ನಲ್ಲಿ ಬುಕ್ ಮಾಡಬಹುದು. ಹೌದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಇದೇ ಮೊದಲ ಬಾರಿಗೆ ನೀರಿನ ಟ್ಯಾಂಕರ್ ಮಾಫಿಯಾವನ್ನು ನಿಯಂತ್ರಿಸಲು ಮತ್ತು ಬೇಸಿಗೆಯಲ್ಲಿ ನೀರಿನ ಕೊರತೆಯ ಪರಿಣಾಮವನ್ನು ಕೊಳವೆ ನೀರು ಸರಬರಾಜು ಇಲ್ಲದ ಬೆಂಗಳೂರಿಗರ ಮೇಲಿನ ಸಮಸ್ಯೆಯನ್ನು ತಗ್ಗಿಸಲು ವೆಬ್ ಆಧಾರಿತ ಮೊಬೈಲ್ ಅಡಾಪ್ಟಿವ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಜ್ಜಾಗಿದೆ. ನೀವು ಕೂತ ಸ್ಥಳದಲ್ಲೇ ಕಾವೇರಿನ ಟ್ಯಾಂಕರ್ ನ್ನು ಬುಕ್ ಮಾಡಬಹುದು.ಇನ್ಮೇಲೆ 'ಕಾವೇರಿ'ಗೆ ಡಿಜಿಟಲ್ ರೂಪ ಸಿಗಲಿದೆ.
ಕಾವೇರಿ ನೀರಿನ ಟ್ಯಾಂಕರ್ ಮಾಫಿಯಾಕ್ಕೆ ಬ್ರೇಕ್ ಹಾಕಲು ಈ ಮೊಬೈಲ್ ಆಧಾರಿತ ಅಪ್ಲಿಕೇಶನ್ ಆಗಿ ವಿನ್ಯಾಸಗೊಳಿಸಲಾಗಿದ್ದು, ಇದರ ಲಿಂಕ್ ಶೀಘ್ರದಲ್ಲೇ BWSSB ವೆಬ್‌ಸೈಟ್‌ನಲ್ಲಿ ನಿಮ್ಮಗೆ ಸಿಗುತ್ತದೆ ಇದರ ಮೂಲಕ ನೀವು ನಿಮ್ಮ ಮೊಬೈಲ್‌ನಲ್ಲೇ ಕಾವೇರಿ ನೀರಿನ ಟ್ಯಾಂಕರ್ ಗಳನ್ನು ಬುಕಿಂಗ್ ಮಾಡಿಕೊಳ್ಳಬಹುದು.

ಬೆಂಗಳೂರಿನಲ್ಲಿ ಇದೇ ತಿಂಗಳ ಕೊನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪೈಲಟ್ ಯೋಜನೆಗೆ ಚಾಲನೆ ನೀಡಲಿದ್ದಾರೆ.ನಗರದ ನಿವಾಸಿಗಳು ಆನ್‌ಲೈನ್‌ನಲ್ಲಿ ನೀರಿನ ಟ್ಯಾಂಕರ್‌ಗಳನ್ನು ಬುಕ್ ಮಾಡಲು ಮತ್ತು ನಿಗದಿತ ಸಮಯದೊಳಗೆ ನೀರು ಪಡೆಯಲು ಪೂರ್ವನಿರ್ಧರಿತ ಶುಲ್ಕವನ್ನು ಪಾವತಿಸಲು ಅವಕಾಶವನ್ನು ಸಹ ಮಾಡಿಕೊಂಡಲಾಗಿದೆ.
ಇದರಿಂದ ಆಗುವ ದೊಡ್ಡ ಪ್ರಯೋಜನವೆಂದರೆ ಈ ಟ್ಯಾಂಕರ್‌ಗಳು ಬೋರ್‌ವೆಲ್ ನೀರನ್ನು ಪೂರೈಸುವುದಿಲ್ಲ, ಬದಲಿಗೆ ಪೈಪ್ ನೀರು ಸರಬರಾಜು ಲಭ್ಯವಿಲ್ಲದ ಪ್ರದೇಶಗಳಲ್ಲಿ ಸ್ಥಾಪಿಸಲಾದ 100 ಕ್ಕೂ ಹೆಚ್ಚು ಕಾವೇರಿ ನೀರಿನ ಸಂಪರ್ಕ ಕೇಂದ್ರಗಳಿಂದ ತೆಗೆದುಕೊಳ್ಳಲಾಗುವ ಕಾವೇರಿ ನೀರನ್ನು ಜನರಿಗೆ ಪೂರೈಕೆ ಮಾಡುತ್ತದೆ.
ಈ ಕುರಿತು BWSSB ಅಧ್ಯಕ್ಷ ವಿ ರಾಮ್ ಪ್ರಸಾತ್ ಮನೋಹರ್, BWSSB ಈಗಾಗಲೇ ಈ ಉಪಕ್ರಮಕ್ಕಾಗಿ 200 ಟ್ಯಾಂಕರ್‌ಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ದಿನಕ್ಕೆ ಟ್ಯಾಂಕರ್ ಮೂಲಕ 6,000ದಿಂದ 12,000 ಲೀಟರ್ ಸಾಮರ್ಥ್ಯದ ನೀರನ್ನು ಜನರಿಗೆ ಸರಾಸರಿ ಎಂಟು ಟ್ರಿಪ್‌ಗಳನ್ನು ಮಾಡಬಹುದು. ಇದಕ್ಕೂ ಮೊದಲು ನೀರನ್ನು ಪ್ರದೇಶಗಳಲ್ಲಿ ಕೇಂದ್ರೀಕರಿಸಲಾಗುವುದು, ವಿಶೇಷವಾಗಿ ಬೆಂಗಳೂರಿನ ಪೂರ್ವ ಭಾಗದಲ್ಲಿ ಜನರು ಇನ್ನೂ ನೀರಿನ ಟ್ಯಾಂಕರ್ ಗಳಿಗೆ ಅವಲಂಬನೆಯಾಗಿರುತ್ತದೆ.
ಲಾಭವಿಲ್ಲ, ನಷ್ಟವಿಲ್ಲಆಧಾರದ ಮೇಲೆ ಚಾಲನೆಯಲ್ಲಿರುವ ಈ ಹೊಸ ಸಾಫ್ಟ್‌ವೇರ್ ಅಂತರ್ ನಿರ್ಮಿತ ವಿಧಾನವನ್ನು ಹೊಂದಿರುತ್ತದೆ. ಅಲ್ಲಿ ನೀರು ಮತ್ತು ಟ್ಯಾಂಕರ್ ವೆಚ್ಚವನ್ನು ಮೊದಲೇ ಲೆಕ್ಕಹಾಕಲಾಗುತ್ತದೆ ಮತ್ತು ಶುಲ್ಕವನ್ನು ನಿಗದಿಪಡಿಸಲಾಗುತ್ತದೆ ಎಂದು ಮನೋಹರ್ ಹೇಳಿಕೆಯನ್ನು ನೀಡಿದ್ದಾರೆ.
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ..?
ನೀರಿನ ಹೊಸ ವ್ಯವಸ್ಥೆಯಲ್ಲಿ, ಎಲ್ಲವನ್ನೂ ಸಾಫ್ಟ್‌ವೇರ್‌ನಲ್ಲಿ ಸಂಯೋಜಿಸಲಾಗಿದ್ದು, ಅಲ್ಲಿ ಬುಕಿಂಗ್ ಮತ್ತು ಪಾವತಿಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ ಎಂದು ಮನೋಹರ್ ವಿವರಿಸುತ್ತಾರೆ.
ಇದು ಮನಬಂದಂತೆ ಹಣ ವಸೂಲಿ ಮಾಡುವ ಮಧ್ಯವರ್ತಿಗಳಿಂದ ಜನರನ್ನು ಪಾರು ಮಾಡುತ್ತದೆ. ಇನ್ನೂ ಪ್ರತಿ ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಸಲಾಗುವುದು, ಇದರಲ್ಲಿ ಗ್ರಾಹಕರು ವಿಳಾಸವನ್ನು ಟ್ರ್ಯಾಕ್ ಮಾಡಬಹುದು ಮತ್ತು ಬುಕಿಂಗ್ ಸಮಯದಲ್ಲಿ ಗ್ರಾಹಕರ ವಿತರಣಾ ವಿಳಾಸದ ಜಿಪಿಎಸ್ ನಿರ್ದೇಶಾಂಕಗಳನ್ನು ಪಡೆದುಕೊಳ್ಳಲಾಗುತ್ತದೆ.


Click it and Unblock the Notifications