ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಖಾಸಗೀಕರಣ ನೀತಿ ಕುರಿತು ಇಂಡಿಯಾ ಟುಡೆ ನಡೆಸಿದ ಸಮೀಕ್ಷೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗೀಕರಣ ನೀತಿ ಕುರಿತು 44 ಪರ್ಸೆಂಟ್ ಜನರು ಬೆಂಬಲಿಸಿದರೆ, 39 ಪರ್ಸೆಂಟ್ ಜನರು ವಿರೋಧಿಸಿದ್ದಾರೆ.
'ಮೂಡ್ ಆಫ್ ದಿ ನೇಷನ್' (ಎಂಒಟಿಎನ್) ಎಂಬ ಸಮೀಕ್ಷೆಯು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಏರ್ ಇಂಡಿಯಾ ಮತ್ತು ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಿರ್ಣಯಿಸಲು ಸಮೀಕ್ಷೆ ನಡೆಸಿತ್ತು.
ಖಾಸಗೀಕರಣ ನೀತಿಗೆ 44 ಪರ್ಸೆಂಟ್ ಬೆಂಬಲ, 39 ಪರ್ಸೆಂಟ್ ವಿರೋಧ
ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ 44 ಪರ್ಸೆಂಟ್ ಜನರು ಖಾಸಗೀಕರಣವನ್ನು ಬೆಂಬಲಿಸರೆ, 39 ಪರ್ಸೆಂಟ್ ಜನರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ. ಇನ್ನು 17 ಪರ್ಸೆಂಟ್ ಜನರಿಗೆ ಖಾಸಗೀಕರಣ ನೀತಿಯ ಬಗ್ಗೆ ತಿಳಿದಿಲ್ಲ ಅಥವಾ ಖಚಿತತೆ ಇಲ್ಲ ಎಂದು ವರದಿ ಮಾಡಿದೆ.
ಪರ-ವಿರೋಧಿಸುವ ಜನರು ಏನು ಹೇಳ್ತಾರೆ?
ಸರ್ಕಾರದ ಖಾಸಗೀಕರ ನೀತಿಯನ್ನು ವಿರೋಧಿಸುವ ಜನರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಅಗತ್ಯತೆಯನ್ನು ಪ್ರಶ್ನಿಸಿದ್ದಾರೆ ಮತ್ತು ಇದು ಕೆಟ್ಟ ನಡೆ ಎಂದು ಭಾವಿಸಿದ್ದಾರೆ. ಇನ್ನು ನೀತಿಯನ್ನು ಬೆಂಬಲಿಸುವವರು ಸುಧಾರಿತ ತಂತ್ರಜ್ಞಾನ, ಹೊಸ ಜಾಗತಿಕ ಮಾರುಕಟ್ಟೆ ಸೃಷ್ಟಿ, ವೈವಿಧ್ಯಮಯ ಉತ್ಪನ್ನದ ಮೂಲಕ ಅಪಾರ ಮೌಲ್ಯ ಸೃಷ್ಟಿಗೆ ಸಾಧ್ಯ ಎಂದು ನಂಬಿದ್ದಾರೆ.
ಕಳೆದ ವರ್ಷ 5 ಬ್ಲ್ಯೂ ಚಿಪ್ ಪಿಎಸ್‌ಯುಗಳ ಷೇರುಗಳಲ್ಲಿ ಹೂಡಿಕೆಗೆ ಅನುಮೋದನೆ
ಕಳೆದ ವರ್ಷ ನವೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟವು ಬಿಪಿಸಿಎಲ್ ಸೇರಿದಂತೆ ಐದು ಬ್ಲ್ಯೂ ಚಿಪ್ ಪಿಎಸ್‌ಯುಗಳ ಷೇರುಗಳನ್ನು ಹೂಡಿಕೆ ಮಾಡಲು ತಾತ್ವಿಕವಾಗಿ ಅನುಮೋದನೆ ನೀಡಿತು. ಬಿಪಿಸಿಎಲ್ ಮಾತ್ರವಲ್ಲದೆ, ಶಿಪ್ಪಿಂಗ್ ಕಾರ್ಪ್ ಆಫ್ ಇಂಡಿಯಾ (ಎಸ್‌ಸಿಐ), ಕಂಟೈನರ್ ಕಾರ್ಪ್ ಆಫ್ ಇಂಡಿಯಾ, ಟಿಎಚ್‌ಡಿಸಿ ಇಂಡಿಯಾ ಮತ್ತು ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (ನೀಪ್ಕೊ) ದಲ್ಲಿ ಹೂಡಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.


Click it and Unblock the Notifications