ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಒದಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ, ಡಿಸೆಂಬರ್ 9 ರಂದು ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಹಾಗಿದ್ರೆ ಏನಿದು ಹೊಸ ಯೋಜನೆ? ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ? ಅರ್ಹತೆಗಳೇನು? ಎಂಬುವುದನ್ನು ತಿಳಿಯೋಣ ಬನ್ನಿ..
ಹೌದು, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರಿಗೆ ವಿಮೆಯಾಗಿ ಕೆಲಸ ಮಾಡುವಂತಹ ಅವಕಾಶವನ್ನು ಮಾಡಿಕೊಂಡುವಂತಹ ಗುರಿಯನ್ನು ಹೊಂದಿದೆ.ಇದರ ಗ್ರಾಮೀಣ ಮಹಿಳೆಯರಿಗಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಈ ಯೋಜನೆ ಹೋದಿದೆ. ಈ ಬಿಮಾ ಸಖಿ ಯೋಜನೆಯಲ್ಲಿ ಕೆಲಸ ಮಾಡುವವರನ್ನು ಏಜೆಂಟ್‌ಗಳು, ಬಿಮಾ ಸಖೀಸ್ ಎಂದು ಕರೆಯಲಾಗುತ್ತದೆ.

ಬಿಮಾ ಸಖಿ ಯೋಜನೆ ಬಿಡುಗಡೆ ಕಾರ್ಯಕ್ರಮವು ಇಂದು ಹರಿಯಾಣದ ಪಾಣಿಪತ್‌ನಲ್ಲಿ ನಡೆಯಲಿದ್ದು, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಹಣಕಾಸು ಸಚಿವೆ. ನಿರ್ಮಲಾ ಸೀತಾರಾಮನ್ ಮತ್ತು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಈ ಯೋಜನೆಯ ಮೂಲಕ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನದೊಂದಿಗೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಯೋಜನೆಯಿಂದ ಗ್ರಾಮೀಣ ಮಹಿಳೆಯರಿಗೆ ಆಗುವಂತಹ ಪ್ರಯೋಜನಗಳು ಈ ಕೆಳಗಿನಂತಿವೆ.
ಮಹಿಳೆಯರಿಗೆ ಉದ್ಯೋಗಾವಕಾಶಗಳು
ಬಿಮಾ ಸಖಿ ಯೋಜನೆಯು ಗ್ರಾಮೀಣ ಮಹಿಳೆಯರು ವಿಮಾ ಏಜೆಂಟ್‌ಗಳಾಗಿ ಕೆಲಸ ಮಾಡುವಾಗ ಅವರಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು ಈ ಯೋಜನೆಯನ್ನು ಅಭಿವೃದ್ದಿಪಡಿಸಾಗಿದೆ.ಈ ಯೋಜನೆಯು ಸ್ಥಿರವಾದ ಆದಾಯದ ಮೂಲವನ್ನು ಖಾತ್ರಿ ಪಡಿಸುವ, ಕಮಿಷನ್ ಆಧಾರಿತ ಪ್ರೋತ್ಸಾಹದ ಜೊತೆಗೆ ಸ್ಥಿರ ಮಾಸಿಕ ಆದಾಯವನ್ನು ಭರವಸೆ ನೀಡುತ್ತದೆ.
ಈ ಯೋಜನೆಯಿಂದ ಸಿಗುವ ಆದಾಯವೆಷ್ಟು..?
ಈ ಯೋಜನೆಯಲ್ಲಿ ಮೊದಲ ವರ್ಷದಲ್ಲಿ ಭಾಗವಹಿಸುವವರಿಗೆ ತಿಂಗಳಿಗೆ 7,000ರೂಪಾಯಿಗಳು,ಎರಡನೇ ವರ್ಷದಲ್ಲಿ ಮೊತ್ತವು ತಿಂಗಳಿಗೆ 6,000 ರೂಪಾಯಿ ಕಡಿಮೆಯಾಗುತ್ತದೆ. ಮೂರನೇ ವರ್ಷದ ವೇಳೆಗೆ,ಮಹಿಳೆಯರು ಮಾಸಿಕ 5,000 ರೂಪಾಯಿಗಳನ್ನುಗಳಿಸುತ್ತಾರೆ. ಇದರ ಜೊತೆಗೆ 2,100 ರೂಪಾಯಿಗಳ ಮೊತ್ತವನ್ನು ತಮ್ಮ ವಿಮಾ ಮಾರಾಟ ಗುರಿಗಳನ್ನು ಸಾಧಿಸುವ ಮಹಿಳೆಯರು ಕಮಿಷನ್ ಆಧಾರಿತ ಪ್ರತಿಫಲಗಳನ್ನು ಸಹ ಗಳಿಸುತ್ತಾರೆ.
ನೇಮಕಾತಿ
ಬಿಮಾ ಸಖಿ ಯೋಜನೆಯು ಆರಂಭಿಕ ಹಂತದಲ್ಲಿ ಪ್ರೋಗ್ರಾಂ 35,000 ಮಹಿಳೆಯರನ್ನು ವಿಮಾ ಏಜೆಂಟ್‌ಗಳಾಗಿ ನೇಮಿಸಿಕೊಳ್ಳುತ್ತದೆ. ನಂತರದ ಹಂತಗಳಲ್ಲಿ ಹೆಚ್ಚುವರಿ 50,000 ಮಹಿಳೆಯರಿಗೆ ಅವಕಾಶವನ್ನು ವಿಸ್ತರಿಸಲು ಯೋಜಿಸಲಾಗಿದೆ. ಆರಂಭದಲ್ಲಿ ಹರಿಯಾಣದಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ತದನಂತರ ದೇಶಾದ್ಯಂತ ವಿಸ್ತರಿಸಲಿದೆ.
ಈ ಯೋಜನೆಗೆ ಏನೆಲ್ಲಾ ಅರ್ಹತೆಗಳು ಇರಬೇಕು
ಈ ಯೋಜನೆಗೆ ವಯಸ್ಸಿನ ಮಿತಿ 18 ಮತ್ತು 50 ವರ್ಷಗಳು ಇರಬೇಕು.ಕನಿಷ್ಠ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಈ ಯೋಜನೆಯು ಗ್ರಾಮೀಣ ಮಹಿಳೆಯರಿಗೆ ವಿಮಾ ಏಜೆಂಟ್‌ಗಳಾಗಿ ವೃತ್ತಿಪರ ಪಾತ್ರಗಳನ್ನು ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications