For Quick Alerts
ALLOW NOTIFICATIONS  
For Daily Alerts

ಮಾನಿಕ್ ಮಂಡೇ - ಷೇರುಪೇಟೆ ಭಾರಿ ಕುಸಿತ !

By ರಂಗಸ್ವಾಮಿ ಮೂಕನಹಳ್ಳಿ
|

ಸೋಮವಾರ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಕಳೆದ ತಿಂಗಳು ಕೇವಲ 19 ದಿನದಲ್ಲಿ ಸಾವಿರ ಸೂಚ್ಯಂಕ ಗಳಿಕೆ ಕಂಡ ಮಾರುಕಟ್ಟೆ ಇಂದು ಕೆಲವೇ ಗಂಟೆಗಳಲ್ಲಿ 425 ಸೂಚ್ಯಂಕ ಕುಸಿತಕ್ಕೂ ಸಾಕ್ಷಿಯಾಯ್ತು. ಈ ಮಟ್ಟದ ಕುಸಿತಕ್ಕೆ ಬಹುಪಾಲು ದೇಣಿಗೆ ನೀಡಿದ್ದು ಮೆಟಲ್ ಸ್ಟಾಕ್ ಗಳು ಎನ್ನುವುದು ಗಮನಿಸಬೇಕಾದ ವಿಷಯ. ಟಾಟಾ ಸ್ಟೀಲ್ . ಜೆ ಎಸ್ ಪಿ ಎಲ್ ನಂತಹ ದೈತ್ಯ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಉಂಟಾದ 9 ಪ್ರತಿಶತ ಕುಸಿತ , ಒಟ್ಟಾರೆ ಮಾರುಕಟ್ಟೆ ಕುಸಿತಕ್ಕೂ ಕಾರಣವಾಯ್ತು. ಸೈಲ್ , ಜೆ ಎಸ್ ಡಬ್ಲ್ಯೂ , ಹಿಂಡಾಲ್ಕೋ ಮತ್ತು ವೇಂದಾಂತ್ ಸಂಸ್ಥೆಗಳು 5 ರಿಂದ 8 ಪ್ರತಿಶತದ ವೆರೆಗೆ ಕುಸಿತ ಕಂಡವು.

ಈ ರೀತಿಯ ಕುಸಿತಕ್ಕೆ ಚೀನಾ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿ ಉಂಟಾಗಿರುವ ಬಿಕ್ಕಟು ಪ್ರಮುಖ ಕಾರಣ. ಮನೆಗಳ ಮೇಲಿನ ಇನ್ನಿಲ್ಲದ ಬೇಡಿಕೆ ಕುಸಿತ ಮೆಟಲ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದ್ದ ಹೂಡಿಕೆದಾರರ ಮೂಡ್ ಹಾಳು ಮಾಡಿದೆ. ಮುಂಬರುವ ದಿನಗಳಲ್ಲಿ ಚೀನಾದಲ್ಲಿ ರಿಯಲ್ ಎಸ್ಟೇಟ್ ಬಿಕ್ಕಟು ಇನ್ನಷ್ಟು ಉಲ್ಬಣ ಗೊಳ್ಳುವ ಸಾಧ್ಯತೆಯನ್ನ ಕೂಡ ತಳ್ಳಿ ಹಾಕುವಂತಿಲ್ಲ. ಈ ಕಾರಣದಿಂದ ಕೂಡ ಇನ್ವೆಸ್ಟರ್ಸ್ ಈ ಮಾರುಕಟ್ಟೆಯಲ್ಲಿದ್ದ ತಮ್ಮ ಹಣವನ್ನ ಹೊರ ತೆಗೆದು ಕೊಳ್ಳಲು ಶುರು ಮಾಡಿದ್ದಾರೆ, ಹೀಗಾಗಿ ಮಾರುಕಟ್ಟೆ ಕುಸಿತ ಕಂಡಿದೆ.

ಮಾನಿಕ್ ಮಂಡೇ  - ಷೇರುಪೇಟೆ ಭಾರಿ ಕುಸಿತ !

ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಏಪ್ರಿಲ್ 2021 ರಿಂದ ಮಾರುಕಟ್ಟೆಯಲ್ಲಿ ತಾವು ಹೂಡಿದ್ದ ಹಣವನ್ನ ಹೊರತೆಗಯಲು ಶುರು ಮಾಡಿದ್ದರು , ಸರಿ ಸುಮಾರು 4600 ಕೋಟಿ ರೂಪಾಯಿ ಹಣವನ್ನ ಈಕ್ವಿಟಿ ಯಿಂದ ಹೊರ ತೆಗೆಯಲಾಗಿದೆ. ಇದರ ಐದು ಪಟ್ಟು ಹಣ ಡೆಟ್ ನಲ್ಲಿ ಹೂಡಿಕೆಯಾಗಿದೆ ಆ ಮಾತು ಬೇರೆ , ಈಕ್ವಿಟಿ ಯಲ್ಲಿ ಯಾವಾಗ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ನಂಬಿಕೆಯನ್ನ ಕಳೆದುಕೊಳ್ಳುತ್ತಾರೆ ಆಗ ಮಾರುಕಟ್ಟೆ ಕುಸಿಯುತ್ತದೆ.

ಇದಲ್ಲದೆ ಕೋವಿಡ್ ಕಾರಣ ಮುಂದಿನ ದಿನಗಳಲ್ಲಿ ಗ್ರೋಥ್ ಬಗ್ಗೆಯೂ ಒಂದಷ್ಟು ಸಂಶಯಗಳು ಉಂಟಾಗಿವೆ. ಷೇರು ಮಾರುಕಟ್ಟೆಯಲ್ಲಿ ಹೀಗೆ ಉಂಟಾಗುವ ಸಣ್ಣ ಸಂಶಯಗಳು ಕೂಡ ಹೂಡಿಕೆದಾರನ ಕಲೆಕ್ಟಿವ್ ಮನಸ್ಥಿತಿಯ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಈ ಕಾರಣ ಕೂಡ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ.

ಷೇರು ಮಾರುಕಟ್ಟೆಯಲ್ಲಿ ನಿನ್ನೆ ದಿನವನ್ನ ಮಾನಿಕ್ ಮಂಡೇ ಅಥವಾ ಹುಚ್ಚು ಸೋಮವಾರ ಎಂದು ಕರೆಯಲಾಗಿದೆ. ಏಕೆ ಕುಸಿಯುತ್ತಿದೆ ಎನ್ನುವ ಅರಿವಿಲ್ಲದೆ ಕುಸಿದ ಮಾರುಕಟ್ಟೆ ಈ ಹೆಸರನ್ನ ಪಡೆದುಕೊಂಡಿತು.

ಮೆಟಲ್ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಕೂಡ ಒಂದಷ್ಟು ಅಸ್ಥಿರತೆ ಇರಲಿದೆ. ಈ ಸಮಯದಲ್ಲಿ ಬಹಳಷ್ಟು ಜನ ಪ್ಯಾನಿಕ್ ಸೆಲ್ಲಿಂಗ್ ಗೆ ತೊಡಗುತ್ತಾರೆ. ಸ್ವಲ್ಪ ದಿನ ಕಾದು ಮರಳಿ ಇಲ್ಲಿ ಹೂಡಿಕೆ ಮಾಡುವುದು ಉತ್ತಮ. ಏರಿದ್ದು ಇಳಿಯುತ್ತದೆ. ಇಳಿದದ್ದು ಏರುತ್ತದೆ ಎನ್ನುವ ಮಾತು ಗಮನದಲ್ಲಿರಲಿ.

English summary

Monik Monday: Market Sheds 500 Plus Points

India's stock market tumbled on Monday. The market, which had gained over a thousand index in 19 days in the last 19 months, witnessed a decline of 425 in just a few hours.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X