For Quick Alerts
ALLOW NOTIFICATIONS  
For Daily Alerts

ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜು ಹೆಚ್ಚಿಸಿದ ಮೂಡೀಸ್

|

ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು 2020ನೇ ಇಸವಿಗೆ ಮೂಡೀಸ್ ರೇಟಿಂಗ್ ಏಜೆನ್ಸಿ ಪರಿಷ್ಕರಿಸಿದೆ. ಈ ಹಿಂದೆ -9.6 ಪರ್ಸೆಂಟ್ ಎಂದು ಅಂದಾಜು ಮಾಡಿದ್ದನ್ನು -8.9 ಪರ್ಸೆಂಟ್ ಎಂದು ಪರಿಷ್ಕರಿಸಿದೆ. 2021- 22ನೇ ಸಾಲಿನ ಜಾಗತಿಕ ಸ್ಥೂಲ ಬಾಹ್ಯ ನೋಟದ ವರದಿಯಲ್ಲಿ ಇದನ್ನು ತಿಳಿಸಿದೆ. ಇನ್ನು ಅದೇ ರೀತಿ 2021ನೇ ಇಸವಿಗೆ ಹಿಂದಿನ 8.1 ಪರ್ಸೆಂಟ್ ಅಂದಾಜಿನಿಂದ 8.6 ಪರ್ಸೆಂಟ್ ಗೆ ಹೆಚ್ಚಳ ಮಾಡಲಾಗಿದೆ.

ಹೊಸ ಸೋಂಕು ಪ್ರಕರಣದಲ್ಲಿ ಕಡಿಮೆ ಆಗುತ್ತಿರುವುದು ಹಾಗೂ ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆಯಿಂದ ಕೊರೊನಾ ಇಳಿಮುಖವಾಗುತ್ತಿದೆ. ಸಂಚಾರದ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ಇನ್ನು ಪರೀಕ್ಷೆ ಮಾಡುವಾಗ ಪಾಸಿಟಿವ್ ಬರುವ ಪ್ರಮಾಣ ಭಾರತದಲ್ಲಿ 5 ಪರ್ಸೆಂಟ್ ಕೆಳಗೆ ಕುಸಿದಿದೆ ಎಂದು ಹೇಳಿದೆ.

ಅಕ್ಟೋಬರ್ ಚಿಲ್ಲರೆ ಹಣದುಬ್ಬರ 7.61%; IIP 0.2 ಪರ್ಸೆಂಟ್ ಬೆಳವಣಿಗೆಅಕ್ಟೋಬರ್ ಚಿಲ್ಲರೆ ಹಣದುಬ್ಬರ 7.61%; IIP 0.2 ಪರ್ಸೆಂಟ್ ಬೆಳವಣಿಗೆ

"ನಾವು ಈ ಎಲ್ಲ ಕಾರಣಗಳಿಂದಾಗಿ ಮುಂದಿನ ತ್ರೈಮಾಸಿಕಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆಯನ್ನು ನಿರೀಕ್ಷೆ ಮಾಡುತ್ತೇವೆ. ಆದರೂ ನಿಧಾನ ಗತಿಯ ಸಾಲ ಬೆಳವಣಿಗೆ ಕಾರಣಕ್ಕೆ ಈಗಾಗಲೇ ದುರ್ಬಲ ಆಗಿರುವ ಆರ್ಥಿಕ ವಲಯವೂ ಸೇರಿಕೊಂಡು ಚೇತರಿಕೆಗೆ ಪೆಟ್ಟು ನೀಡುತ್ತಿದೆ," ಎಂದು ಮೂಡೀಸ್ ವರದಿ ಹೇಳಿದೆ.

ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜು ಹೆಚ್ಚಿಸಿದ ಮೂಡೀಸ್

ಕೊರೊನಾದಲ್ಲಿ ಇದೇ ಟ್ರೆಂಡ್ ಮುಂದುವರಿದು ಸಂಚಾರ ಹಾಗೂ ಸಾಮಾಜಿಕ ಚಲನೆ ಮುಂದುವರಿದಲ್ಲಿ, ಲಸಿಕೆ ಸಿಕ್ಕಿಬಿಟ್ಟರಂತೂ 2021 ಹಾಗೂ 2022ರಲ್ಲಿ ಸ್ಥೂಲ ಆರ್ಥಿಕ ವಿಷಯದಲಿ ಕೊರೊನಾ ಪ್ರಾಮುಖ್ಯವೇ ಕಡಿಮೆ ಆಗುತ್ತದೆ ಎಂದು ವರದಿ ಹೇಳಿದೆ.

ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ 23.9 ಪರ್ಸೆಂಟ್ ಕುಗ್ಗಿದೆ. ಆರ್ ಬಿಐ ಅಧಿಕೃತ ದತ್ತಾಂಶದ ಪ್ರಕಾರ, 2020- 21ರಲ್ಲಿ ಜಿಡಿಪಿ 9.5 ಪರ್ಸೆಂಟ್ ಕುಗ್ಗಬಹುದು

English summary

Moodys Raises India's GDP Growth Rate Projection

Moodys rating agency raises India's GDP growth rate projection for calendar year 2020.
Story first published: Thursday, November 12, 2020, 23:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X