ಪ್ರಸಕ್ತ ಹಣಕಾಸು ವರ್ಷ 2020- 21ಕ್ಕೆ ಭಾರತದ ಜಿಡಿಪಿ ಅಂದಾಜನ್ನು ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಮುಂದುವರಿಸಿದ ಭಾಗವಾಗಿ, ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸಸ್ FY21ಕ್ಕೆ 10.6ಕ್ಕೆ ಕುಗ್ಗಬಹುದು ಎಂದು ಹಿಂದಿದೆ. ಈ ಹಿಂದೆ 11.5 ಪರ್ಸೆಂಟ್ ಕುಸಿತ ಕಾಣಬಹುದು ಎಂದು ಅಂದಾಜು ಮಾಡಲಾಗಿತ್ತು.
ಈಚಿನ ಉತ್ತೇಜನಾ ಕ್ರಮಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಅಂದಾಜು ಮಾಡಲಾಗಿದೆ ಎಂದು ಏಜೆನ್ಸಿ ತಿಳಿಸಿದೆ. ಉತ್ಪಾದನೆ, ಉದ್ಯೋಗ ಸೃಷ್ಟಿ ಹಾಗೂ ದೀರ್ಘಾವಧಿಯ ಬೆಳವಣಿಗೆ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ವಿವಿಧ ಕ್ರಮ ಘೋಷಿಸಿತ್ತು. ಮೂಡೀಸ್ ನಿಂದ 2021- 22ನೇ ಸಾಲಿಗೆ ಬೆಳವಣಿಗೆ ಅಂದಾಜು ಸಹ 10.6 ಪರ್ಸೆಂಟ್ ನಿಂದ 10.8 ಪರ್ಸೆಂಟ್ ಗೆ ಹೆಚ್ಚಿಸಲಾಗಿದೆ.
ಅಂದ ಹಾಗೆ ಕಳೆದ ವಾರವಷ್ಟೇ ಸರ್ಕಾರದಿಂದ 2.7 ಲಕ್ಷ ಕೋಟಿಯ ಪ್ಯಾಕೇಜ್ ಘೋಷಿಸಲಾಗಿದೆ.

ಮಧ್ಯಮಾವಧಿಯಲ್ಲಿ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಆರು ಪರ್ಸೆಂಟ್ ಗೆ ಸ್ಥಿರ ಆಗುವ ನಿರೀಕ್ಷೆ ಇದೆ ಎಂದು ಮೂಡೀಸ್ ತಿಳಿಸಿದ್ದು, ಸರ್ಕಾರದ ಸಾಲವು 2020ರ ಆರ್ಥಿಕ ವರ್ಷಕ್ಕೆ ಜಿಡಿಪಿಯ 89.3 ಪರ್ಸೆಂಟ್ ಗೆ ಹೆಚ್ಚಳ ಆಗುವ, ಇನ್ನು 2021ರ ಸಾಲಿಗೆ 87.5 ಪರ್ಸೆಂಟ್ ಗೆ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಇದೆ. ಈಗಾಗಲೇ 2019ರ ಆರ್ಥಿಕ ವರ್ಷದಲ್ಲಿದ್ದ 72.2 ಪರ್ಸೆಂಟ್ ಗಿಂತ ಹೆಚ್ಚಾಗಿದೆ.
ದಿನದಿನಕ್ಕೂ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣದಿಂದ ಭಾರತದಲ್ಲಿ ಗ್ರಾಹಕರ ವಿಶ್ವಾಸ ಕಡಿಮೆ ಆಗಿರುವ ಬಗ್ಗೆ ಗಮನ ಸೆಳೆದಿದ್ದು, ಗರಿಷ್ಠ ಮಟ್ಟದಲ್ಲಿ ಇದ್ದದ್ದು ಸೆಪ್ಟೆಂಬರ್ ನಲ್ಲಿ ಕೆಳಗೆ ಇಳಿದಿದೆ ಎನ್ನಲಾಗಿದೆ.


Click it and Unblock the Notifications