For Quick Alerts
ALLOW NOTIFICATIONS  
For Daily Alerts

ಮೇ ಈಚೆಗೆ 50 ಸಾವಿರಕ್ಕೂ ಹೆಚ್ಚು ಭಾರತೀಯರು ಒಮನ್ ನಿಂದ ವಾಪಸ್

|

ತೈಲದಿಂದ ಸಂಪದ್ಭರಿತವಾದ ಗಲ್ಫ್ ರಾಷ್ಟ್ರ ಒಮನ್ ನಲ್ಲಿ ವಾಸವಿರುವ 50 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರು ಕಳೆದ ಮೂರು ತಿಂಗಳಲ್ಲಿ ಖಾಸಗಿ ವಿಮಾನಗಳಲ್ಲಿ ಹಾಗೂ ಇತರ ವಿಮಾನಗಳಲ್ಲಿ ತಾಯ್ನಾಡಿಗೆ ವಾಪಸಾಗಿದ್ದಾರೆ ಎಂದು ಮಾಧ್ಯಮಗಳ ವರದಿ ಸೋಮವಾರ ಹೇಳಿದೆ.

ಮೇ ತಿಂಗಳಲ್ಲಿ ಕೊರೊನಾ ಒಮನ್ ನಲ್ಲಿ ಕೊರೊನಾ ಪ್ರಕರಣ ಹೆಚ್ಚಾದಂತೆ 198 ಚಾರ್ಟರ್ಡ್ ವಿಮಾನಗಳನ್ನು ಕಂಪೆನಿಗಳು ಹಾಗೂ ಸಾಮಾಜಿಕ ಸಂಸ್ಥೆಗಳು ವ್ಯವಸ್ಥೆ ಮಾಡಿವೆ. 35 ಸಾವಿರ ಭಾರತೀಯರನ್ನು ಒಮನ್ ನಿಂದ ವಾಪಸ್ ಕರೆತರಲಾಗಿದೆ ಎಂದು ಮಸ್ಕತ್ ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯ ಹೇಳಿಕೆಯನ್ನು ಉದಾಹರಿಸಿ ವರದಿ ಮಾಡಲಾಗಿದೆ.

105 ವಿಮಾನಗಳು ವಂದೇಭಾರತ್ ಅಭಿಯಾನದಲ್ಲಿ
 

105 ವಿಮಾನಗಳು ವಂದೇಭಾರತ್ ಅಭಿಯಾನದಲ್ಲಿ

ಇನ್ನು ಭಾರತೀಯ ಸರ್ಕಾರದ ವಂದೇ ಭಾರತ್ ಅಭಿಯಾನದಲ್ಲಿ ಹೆಚ್ಚುವರಿಯಾಗಿ 17 ಸಾವಿರ ಭಾರತೀಯರನ್ನು 97 ವಿಮಾನಗಳಲ್ಲಿ ಕರೆತರಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಮನ್ ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಅನುಜ್ ಸ್ವರೂಪ್ ವಂದೇಭಾರತ್ ಅಭಿಯಾನದ ಬಗ್ಗೆ ಮಾತನಾಡಿ, ಮೇ 9ನೇ ತಾರೀಕಿನಂದು ಒಮನ್ ನಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಈವರೆಗೆ 105 ವಿಮಾನಗಳು ಭಾಗವಹಿಸಿವೆ. ಸಾವಿರಾರು ಮಂದಿ ಭಾರತೀಯರು ಇದರಿಂದ ಭಾರತಕ್ಕೆ ವಾಪಸಾಗಿದ್ದಾರೆ ಎಂದು ತಿಳಿಸಿದ್ದಾರೆ ಎಂಬುದಾಗಿ ಯುಎಇ ಮೂಲದ ಗಲ್ಫ್ ನ್ಯೂಸ್ ವರದಿ ಮಾಡಿದೆ.

ಒಮನ್ ನಲ್ಲಿ 79,159 ಕೊರೊನಾ ಸೋಂಕಿತರು

ಒಮನ್ ನಲ್ಲಿ 79,159 ಕೊರೊನಾ ಸೋಂಕಿತರು

ಇನ್ನು ಮುಂಬರುವ ದಿನಗಳಲ್ಲಿ 5ನೇ ಹಂತದ ವಂದೇ ಭಾರತ್ ಅಭಿಯಾನವನ್ನು ಆಗಸ್ಟ್ ಮೊದಲಾರ್ಧದಲ್ಲಿ 19 ವಿಮಾನದ ವೇಳಾಪಟ್ಟಿಯನ್ನು ಭಾರತ ಸರ್ಕಾರ ಮಾಡಿಕೊಂಡಿದೆ ಎಂದು ಸ್ವರೂಪ್ ತಿಳಿಸಿದ್ದಾರೆ. ಒಮನ್ ನಲ್ಲಿ ಈ ತನಕ 79,159 ಕೊರೊನಾ ಸೋಂಕಿತ ಪ್ರಕರಣಗಳಿದ್ದು, 422 ಸಾವು ವರದಿ ಆಗಿದೆ. ಇದರ ಜತೆಗೆ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಇದರಿಂದ ಉದ್ಯೋಗ ನಷ್ಟ ಕೂಡ ಆಗಿದೆ. ತೊಂಬತ್ತು ಲಕ್ಷಕ್ಕೂ ಹೆಚ್ಚು ಭಾರತೀಯರು ಉದ್ಯೋಗಕ್ಕಾಗಿ ಮತ್ತು ಇತರ ಕಾರಣಕ್ಕಾಗಿ ಗಲ್ಫ್ ನಲ್ಲಿ ವಾಸವಿದ್ದಾರೆ. ಒಮನ್ ನಲ್ಲಿ ಭಾರತೀಯ ವಲಸಿಗರ ಸಂಖ್ಯೆ ಅತಿ ಹೆಚ್ಚಿದೆ.

6,55,000 ಮಂದಿ ಉದ್ಯೋಗಿಗಳು ಮತ್ತು ವೃತ್ತಿಪರರು

6,55,000 ಮಂದಿ ಉದ್ಯೋಗಿಗಳು ಮತ್ತು ವೃತ್ತಿಪರರು

7,70,000 ಭಾರತೀಯರು ಒಮನ್ ನಲ್ಲಿ ಇದ್ದಾರೆ. ಅದರಲ್ಲಿ 6,55,000 ಮಂದಿ ಉದ್ಯೋಗಿಗಳು ಮತ್ತು ವೃತ್ತಿಪರರು. ಸಾವಿರಾರು ಮಂದಿ ಭಾರತೀಯರು ವೈದ್ಯರು, ಎಂಜಿನಿಯರ್ ಗಳು, ಚಾರ್ಟರ್ಡ್ ಅಕೌಂಟೆಂಟ್ ಗಳು, ಶಿಕ್ಷಕರು, ಉಪನ್ಯಾಸಕರು, ನರ್ಸ್ ಗಳು ಮತ್ತು ಇತರ ವೃತ್ತಿಗಳಲ್ಲಿ ಇದ್ದಾರೆ ಎಂದು ಒಮನ್ ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ ಮೂಲಗಳು ತಿಳಿಸಿವೆ.

English summary

More Than 50000 Indians Repatriated From Oman Since May Due To Corona

Over 50,000 Indians living in Oman have been flown home on repatriation and chartered flights in the last three months, report on Monday.
Company Search
COVID-19