ಮೊಟೊರೊಲಾ ಹೊಸ ಸ್ಮಾರ್ಟ್‌ಫೋನ್‌: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್

ಮೊಟೊರೊಲಾ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ತಿಂಗಳು ಮಾರ್ಚ್ 9 ರಂದು ಭಾರತೀಯ ಮಾರುಕಟ್ಟೆಯಲ್ಲಿ ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್ ಅನ್ನು ಬಿಡುಗಡೆ ಮಾಡಲಿದೆ.

ಮೊಟೊ ಜಿ 30 ಮತ್ತು ಮೋಟೋ ಜಿ 10 ಪವರ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆ ಮಾಡಲಿದ್ದು, ಪ್ರತ್ಯೇಕವಾಗಿ ಲಭ್ಯವಿರುತ್ತವೆ. ಅಲ್ಲದೆ ಮೋಟೋ ಜಿ 30 ಮತ್ತು ಮೋಟೋ ಜಿ 10 ವಿನ್ಯಾಸವನ್ನು ಬಹಿರಂಗಪಡಿಸಿದೆ.

ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್ ಸದ್ಯದಲ್ಲೇ ಬಿಡುಗಡೆ

ಮೊಟೊ ಜಿ 30 ಯ ಬೆಲೆ ಯುರೋ 179.99 (ಸರಿಸುಮಾರು ರೂ. 15,900) ಆಗಿದ್ದರೆ, ಮೋಟೋ ಜಿ 10 ಯುರೋ 149.99 ರಿಂದ ಪ್ರಾರಂಭವಾಗುತ್ತದೆ (ಸರಿಸುಮಾರು 13,300 ರೂ.). ಹೀಗಾಗಿ ಸ್ಮಾರ್ಟ್‌ಫೋನ್‌ಗಳು ಯುರೋಪ್‌ಗಿಂತ ಭಾರತದಲ್ಲಿ ಅಗ್ಗವಾಗಲಿವೆ.

ಮೊಟೊ ಜಿ 30 ಮೊಬೈಲ್ 6.5 ಇಂಚಿನ ಎಚ್‌ಡಿ + ಡಿಸ್ಪ್ಲೇಯನ್ನು 720x1,600 ಪಿಕ್ಸೆಲ್‌ಗಳೊಂದಿಗೆ 90Hz ಹೆಚ್ಚಿನ ರಿಫ್ರೆಶ್ ದರವನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 662 ಎಸ್‌ಒಸಿ ಪ್ರೊಸೆಸರ್ ಜೊತೆಗೆ 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಸಂಗ್ರಹ ಹೊಂದಿದೆ.

ಮೊಟೊ ಜಿ30 ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 64 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು ಮೆಗಾಪಿಕ್ಸೆಲ್ ಮ್ಯಾಕ್ರೋ ಶಾಟ್‌ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ, 13 ಮೆಗಾಪಿಕ್ಸೆಲ್ ಸೆಲ್ಫಿ ಸೆನ್ಸಾರ್ ಇದೆ. ಈ ಸ್ಮಾರ್ಟ್‌ಫೋನ್‌ 20W ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್ ಸದ್ಯದಲ್ಲೇ ಬಿಡುಗಡೆ

ಮೊಟೊ ಜಿ10 ಪವರ್ , ಮೋಟೋ ಜಿ30 ಗಿಂತ ಸ್ವಲ್ಪ ಅಗ್ಗವಾಗಿದೆ. ಸ್ಮಾರ್ಟ್‌ಫೋನ್ 60Hz ರಿಫ್ರೆಶ್ ದರದೊಂದಿಗೆ 6.5 ಇಂಚಿನ ಎಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಮೋಟೋ ಜಿ10 ಸ್ನಾಪ್‌ಡ್ರಾಗನ್ 460 ಎಸ್‌ಒಸಿ ಜೊತೆಗೆ 4 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿದೆ.

ಇನ್ನು ಮೊಟೊ 48 ಮೆಗಾಪಿಕ್ಸೆಲ್ ಕ್ಯಾಮೆರಾ ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದ್ದು, 10W ಚಾರ್ಜಿಂಗ್‌ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+