ಭಾರತದ ಪ್ರಮುಖ ಟಯರ್ ಉತ್ಪಾದನಾ ಸಂಸ್ಥೆ ಎಂಆರ್‌ಎಫ್ ಷೇರು ಮಾರುಕಟ್ಟೆಯಲ್ಲಿ ಭಾರೀ ಬೆಳವಣಿಗೆಯನ್ನು ಕಂಡಿದೆ. ಭಾರತದಲ್ಲಿ ಮೊದಲ ಬಾರಿಗೆ 1 ಲಕ್ಷ ರೂಪಾಯಿಗೂ ಅಧಿಕ ಹೆಚ್ಚಳವಾದ ಸ್ಟಾಕ್ ಎಂಬ ಹೆಗ್ಗಳಿಕೆಯನ್ನು ಎಂಆರ್‌ಎಫ್ ಪಡೆದುಕೊಂಡಿದೆ. ಎಂಆರ್‌ಎಫ್ ಸ್ಟಾಕ್ ಒಂದು ಲಕ್ಷ ರೂಪಾಯಿಗಿಂತ ಅಧಿಕ ಹೆಚ್ಚಳ ಕಾಣುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.
ಇತಿಹಾಸವನ್ನು ಸೃಷ್ಟಿಸಿದ ಸ್ಟಾಕ್‌ನ ಆರಂಭದಿಂದ ಈವರೆಗಿನ ಇತಿಹಾಸವನ್ನು ನಾವು ತಿಳಿಯದಿದ್ದರೆ ಹೇಗೆ?. ಎಂಆರ್ ಎಫ್ ಲಿಮಿಟೆಡ್ ಭಾರತದ ಅತೀ ದೊಡ್ಡ ಟಯರ್ ಉತ್ಪಾದಕ ಸಂಸ್ಥೆಯಾಗಿದ್ದು, 1946ರಲ್ಲಿ ಆರಂಭವಾಗಿದೆ. ಕಂಪನಿಯ ಪ್ರಯಾಣವು ಗುಣಮಟ್ಟ, ನಾವೀನ್ಯತೆ, ಗ್ರಾಹಕರ ತೃಪ್ತಿಯನ್ನು ನೀಡುವ ವಿಚಾರದಲ್ಲಿ ಸಾಕ್ಷಿಯಾಗಿದೆ. ಇದು ಎಂಆರ್‌ಎಫ್ ಆಟೋಮೋಟಿವ್ ಉದ್ಯಮದಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಈ ಸ್ಟಾಕ್‌ನ ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

1 ಲಕ್ಷ ರೂಪಾಯಿ ಷೇರು ಬೆಲೆವರೆಗಿನ ಎಂಆರ್‌ಎಫ್ ಸ್ಟಾಕ್
1946 ರಲ್ಲಿ ಮದ್ರಾಸ್‌ನ (ಈಗ ಚೆನ್ನೈ) ತಿರುವೊಟ್ಟಿಯೂರ್‌ನಲ್ಲಿ ಆಟಿಕೆ ಬಲೂನ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ಕೆ.ಎಂ.ಮಮ್ಮೆನ್ ಮಾಪಿಳ್ಳೈ ಎಮ್‌ಆರ್‌ಎಫ್‌ನ ಗಮನಾರ್ಹ ಪ್ರಯಾಣದ ಆರಂಭಕ್ಕೆ ಸಾಕ್ಷಿಯಾಗಿದ್ದಾರೆ, ಈ ಸಂಸ್ಥೆಯ ಸಂಸ್ಥಾಪಕರು ಆಗಿದ್ದಾರೆ. 1949 ರ ಹೊತ್ತಿಗೆ, ಎಂಆರ್‌ಎಫ್ ತನ್ನ ವಹಿವಾಟನ್ನು ವಿಸ್ತರಣೆ ಮಾಡಿದೆ. ಆಟಿಕೆಗಳು, ಕೈಗವಸುಗಳು ಮತ್ತು ಗರ್ಭನಿರೋಧಕಗಳನ್ನು ತಯಾರಿಸಲು ಆರಂಭಿಸಿದೆ.
ಕಂಪನಿಯು ತನ್ನ ಮೊದಲ ಕಚೇರಿಯನ್ನು ಮದ್ರಾಸ್‌ನ ತಂಬು ಚೆಟ್ಟಿ ಸ್ಟ್ರೀಟ್‌ನಲ್ಲಿ ಸ್ಥಾಪಿಸಿದೆ. ಎಂಆರ್‌ಎಫ್ 1952 ರಲ್ಲಿ ರಬ್ಬರ್ ಉತ್ಪಾದನಾ ವ್ಯವಹಾರವನ್ನು ಆರಂಭ ಮಾಡಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತೀ ಪ್ರಮುಖವಾದ ಘಟ್ಟವಾಗಿದೆ. ಇದಾದ ಬಳಿಕ ಎಂಆರ್‌ಎಫ್ ಸಂಸ್ಥೆಯು ಟಯರ್ ವಲಯದ ಅತೀ ಉನ್ನತ ಶ್ರೇಣಿಗೆ ತಲುಪಿದೆ.
ಕೇವಲ ನಾಲ್ಕು ವರ್ಷಗಳಲ್ಲಿ, 1956 ರ ಹೊತ್ತಿಗೆ, ಎಂಆರ್‌ಎಫ್ ಭಾರತದಲ್ಲಿ ರಬ್ಬರ್ ಮಾರುಕಟ್ಟೆಯಲ್ಲಿ ನಾಯಕನಾಗಿದೆ. ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ಶೇಕಡ 50ರಷ್ಟು ಮಾರುಕಟ್ಟೆ ಮೌಲ್ಯವನ್ನು ವಶಪಡಿಸಿಕೊಂಡಿದೆ. ಎಂಆರ್‌ಎಫ್ 1961 ರಲ್ಲಿ ಹಲವಾರು ಸಾಧನೆಗಳನ್ನು ಮಾಡಿದೆ.
ಕಂಪನಿಯು ಅದಾದ ಬಳಿಕ ಯುನೈಟೆಡ್ ಸ್ಟೇಟ್ಸ್‌ನ ಮ್ಯಾನ್ಸ್‌ಫೀಲ್ಡ್ ಟೈರ್ ಮತ್ತು ರಬ್ಬರ್ ಕಂಪನಿಯೊಂದಿಗೆ ತಾಂತ್ರಿಕ ಪಾಲುದಾರಿಕೆಯನ್ನು ರಚಿಸಿದೆ. ಇದರ ಜೊತೆಗೆ, ತಮಿಳುನಾಡಿನ ಮುಖ್ಯಮಂತ್ರಿಗಳಾದ ಕೆ. ಕಾಮರಾಜ್ ಅವರು ತಿರುವೊಟ್ಟಿಯೂರಿನಲ್ಲಿ ಎಂಆರ್‌ಎಫ್‌ನ ಹೊಸ ಪ್ರಾಯೋಗಿಕ ಸೌಲಭ್ಯವನ್ನು ಉದ್ಘಾಟಿಸಿದರು. ಅಲ್ಲಿ ಉತ್ಪಾದಿಸಲಾದ ಮೊದಲ ಟಯರ್ ಅನ್ನು ಬಿಡುಗಡೆ ಮಾಡಿದರು.
1964 ರಲ್ಲಿ ಲೆಬನಾನ್‌ನ ಬೈರುತ್‌ನಲ್ಲಿ ಅಂತರರಾಷ್ಟ್ರೀಯ ಕಚೇರಿಯನ್ನು ತೆರೆಯುವ ಮೂಲಕ ಎಂಆರ್‌ಎಫ್ ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಿದೆ. ಟಯರ್‌ಗಳನ್ನು ರಫ್ತು ಮಾಡಲು ಆರಂಭಿಸಿದ ಭಾರತದ ಮೊದಲ ಸಂಸ್ಥೆಯು ಇದಾಗಿದೆ. 1973 ರಲ್ಲಿ, ಎಂಆರ್‌ಎಫ್ ನೈಲಾನ್ ಪ್ಯಾಸೆಂಜರ್ ಕಾರು ಟಯರ್‌ಗಳನ್ನು ವಾಣಿಜ್ಯಿಕವಾಗಿ ತಯಾರಿಸಿ ಮಾರಾಟ ಮಾಡಿದ ಮೊದಲ ಭಾರತೀಯ ಕಂಪನಿಗಳಲ್ಲಿ ಒಂದಾಗಿದೆ.
ನಂತರದ ವರ್ಷಗಳಲ್ಲಿ ಎಂಆರ್‌ಎಫ್‌ನ ವ್ಯವಹಾರವು ವಿಸ್ತಾರಗೊಳ್ಳುತ್ತಲೇ ಸಾಗಿತು. 1989 ರಲ್ಲಿ, ವಿಶ್ವದ ಅತಿದೊಡ್ಡ ಆಟಿಕೆ ಉತ್ಪಾದಕರಾದ ಹ್ಯಾಸ್ಬ್ರೋ ಇಂಟರ್‌ನ್ಯಾಷನಲ್, ಫನ್‌ಸ್ಕೂಲ್ ಇಂಡಿಯಾದೊಂದಿಗೆ ಸೇರಿ ಸಂಸ್ಥೆಯನ್ನು ಪ್ರಾರಂಭ ಮಾಡಿದೆ. ಕಂಪನಿಯು 2007 ರಲ್ಲಿ 1 ಬಿಲಿಯನ್ ಡಾಲರ್ ವಹಿವಾಟು ಸಾಧಿಸಿದೆ. 2011 ರಲ್ಲಿ 2 ಬಿಲಿಯನ್ ಡಾಲರ್‌ಗೆ ತಲುಪಿದೆ.
ಎಂಆರ್‌ಎಫ್ ಷೇರುಗಳು ಫೆಬ್ರವರಿ 2012 ರಲ್ಲಿ 10,000 ರೂಪಾಯಿಯ ಮಾರ್ಕ್ ಅನ್ನು ತಲುಪಿದೆ. ಕಂಪನಿಯ ಆರ್ಥಿಕ ಸಾಮರ್ಥ್ಯ ಮತ್ತು ಮಾರುಕಟ್ಟೆ ಸ್ಥಿತಿಯ ಪ್ರತೀಕ ಇದಾಗಿದೆ. ಅದರ ನಂತರ ಜನವರಿ 2021ರಲ್ಲಿ ಎಂಆರ್‌ಎಫ್‌ನ ಷೇರುಗಳು ಮೊದಲ ಬಾರಿಗೆ 90,000 ರೂಪಾಯಿಯನ್ನು ದಾಟಿದೆ. ಇನ್ನು ಎರಡುವರೆ ವರ್ಷಗಳ ಅವಧಿಯಲ್ಲಿಯೇ ಎಂಆರ್‌ಎಫ್ ಸ್ಟಾಕ್ 1 ಲಕ್ಷ ರೂಪಾಯಿಯನ್ನು ದಾಟಿದೆ.


Click it and Unblock the Notifications