ಎಂಆರ್‌ಎಫ್ ಷೇರು ಮಂಗಳವಾರ ದಲಾಲ್ ಸ್ಟ್ರೀಟ್‌ನಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಿದೆ. ಎಂಆರ್‌ಎಫ್ ಷೇರು ಮಂಗಳವಾರ ಆರು ಡಿಜಿಟ್‌ನ ಸ್ಟಾಕ್ ಆಗಿ ಪರಿವರ್ತನೆಯಾಗಿದೆ. ಎಂಆರ್‌ಎಫ್ ಸ್ಟಾಕ್ ಬೆಲೆ 1,00,000 ರೂಪಾಯಿಗೂ (ಸರಾಸರಿ 1,214 ಡಾಲರ್) ಅಧಿಕ ಏರಿಕೆಯಾಗಿದೆ. ಭಾರತದಲ್ಲಿ ಮೊದಲ ಬಾರಿಗೆ 1 ಲಕ್ಷ ರೂಪಾಯಿಗೂ ಅಧಿಕ ಹೆಚ್ಚಳವಾದ ಸ್ಟಾಕ್ ಇದಾಗಿದೆ.
ಸ್ಟಾಕ್ ಸುಮಾರು ಶೇಕಡ 1ರಷ್ಟು ಹೆಚ್ಚಳವನ್ನು ಕಾಣುವ ಮೂಲಕ ದಾಖಲೆಯನ್ನು ಬರೆದಿದೆ. ಈ ಮೂಲಕ ಎಂಆರ್‌ಎಫ್ ಸ್ಟಾಕ್ ದೇಶದಲ್ಲಿ ಸೆನ್ಸೆಕ್ಸ್‌ನಲ್ಲಿ ಒಂದು ಸ್ಟಾಕ್‌ಗೆ 1 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ನಡೆಸಿದ ಮೊದಲ ಸ್ಟಾಕ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಮಂಗಳವಾರ (ಜೂನ್ 13) ವಹಿವಾಟಿನ ಆರಂಭದಲ್ಲಿ ಏರಿಕೆಯೊಂದಿಗೆ ವಹಿವಾಟಿಗಿಳಿದ ಎಂಆರ್‌ಎಫ್ ಸ್ಟಾಕ್ ಬಳಿಕ ಶೇಕಡ 1.48ರಷ್ಟು ಜಿಗಿತ ಕಂಡಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆಯು 52 ವಾರಗಳ ಗರಿಷ್ಠ ಮಟ್ಟ 1,00,439.95 ರೂಪಾಯಿಗೆ ತಲುಪಿದೆ. ಇನ್ನು ಬಿಎಸ್‌ಇಯಲ್ಲಿ ದಾಖಲೆಯನ್ನು ಬರೆದ ಎಂಆರ್‌ಎಫ್ ಸ್ಟಾಕ್ ಬೆಲೆಯು ಪ್ರತಿ ಷೇರಿಗೆ 1,00,300 ರೂಪಾಯಿಗೆ ಜಿಗಿತ ಕಂಡಿದೆ. ಸ್ಟಾಕ್ ಅನ್ನು ಖರೀದಿ ಮಾಡಬಹುದೇ ಅಥವಾ ಸ್ಟಾಕ್ ಅನ್ನು ಮಾರಾಟ ಮಾಡಬಹುದೇ, ಇಲ್ಲಿದೆ ವಿವರ ಮುಂದೆ ಓದಿ....
ತಜ್ಞರುಗಳು ಏನು ಹೇಳುತ್ತಾರೆ, ಷೇರು ಖರೀದಿ ಅಥವಾ ಮಾರಾಟ
ಇನ್‌ಕ್ರೆಡ್ ಈಕ್ವಿಟೀಸ್‌ನ ವಿಪಿ ಗೌರವ್ ಬಿಸ್ಸಾ, "ಮಾರುಕಟ್ಟೆಯ ಸ್ಥಿತಿ ಹೇಗೆ ಇದ್ದರೂ ಕೂಡಾ ಎಂಆರ್‌ಎಫ್ ಕಳೆದ ಕೆಲವು ತಿಂಗಳುಗಳಲ್ಲಿ ಪ್ರಬಲವಾದ ಏರಿಕೆಯನ್ನು ಕಂಡಿದೆ. ವಾರದ ಬೆಳವಣಿಗೆಯನ್ನು ನಾವು ನೋಡಿದಾಗ, ಎಂಆರ್‌ಎಫ್ ಜಿಗಿತವನ್ನು ಕಂಡಿದೆ. ಎಂಆರ್‌ಎಫ್ ಈ ಹಿಂದೆ 95,000 ರೂಪಾಯಿಯ ದಾಖಲೆ ಮುರಿದು ಮುಂದುವರಿದಿದೆ," ಎಂದು ತಿಳಿಸಿದ್ದಾರೆ.
"ವಹಿವಾಟಿನ ಅಂತ್ಯದಲ್ಲಿ ಎಂಆರ್‌ಎಫ್ ಸ್ಟಾಕ್ ಸುಮಾರು 1 ಲಕ್ಷ ರೂಪಾಯಿಗಿಂತ ಅಧಿಕ ಬೆಲೆಯನ್ನು ಹೊಂದಿದ್ದರೆ, ಸ್ಟಾಕ್ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ ಎಂಬುವುದು ಖಚಿತವಾಗುತ್ತದೆ. ಇದರಿಂದಾಗಿ ಈ ಸ್ಟಾಕ್ 1,15,000 ರೂಪಾಯಿ ಲೆವೆಲ್‌ನ ಸ್ಟಾಕ್ ಆಗಬಹುದು. ಸ್ಟಾಕ್ ಪಾಯಿಂಟ್ ಮತ್ತು ಫಿಗರ್ ಚಾರ್ಟ್‌ಗಳಲ್ಲಿ ಅಷ್ಟೇ ಆಸಕ್ತಿದಾಯಕ ಬೆಳವಣಿಗೆ ಕಂಡು ಬಂದಿದೆ," ಎಂದು ಕೂಡಾ ಇನ್‌ಕ್ರೆಡ್ ಈಕ್ವಿಟೀಸ್‌ನ ವಿಪಿ ಗೌರವ್ ಬಿಸ್ಸಾ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವೆಲ್ತ್‌ವರ್ತ್ ಶೇರ್ & ಸ್ಟಾಕ್ ಬ್ರೋಕಿಂಗ್‌ನ ಮುಖ್ಯ ತಜ್ಞರಾದ ಸುಜಿತ್ ದಿಯೋದರ್, "ಕೆಲವು ವರ್ಷಗಳಿಂದ ಈ ಸ್ಟಾಕ್ ಏರಿಕೆಯನ್ನು ಕಾಣುತ್ತಿದೆ. ಪ್ರಸ್ತುತ ಎಂಆರ್‌ಎಫ್ ಸ್ಟಾಕ್ ಸಾರ್ವಕಾಲಿಕವಾಗಿ ಹೆಚ್ಚಳವನ್ನು ಕಂಡಿದೆ. ಆದ್ದರಿಂದಾಗಿ ಈ ಸ್ಟಾಕ್ ಅನ್ನು ಹೊಂದಿರುವುದು ಅತೀ ಲಾಭದಾಯಕವಾಗಿದೆ," ಎಂದು ಅಭಿಪ್ರಾಯಿಸಿದ್ದಾರೆ.
"ಈ ಸ್ಟಾಕ್ ಮೌಲ್ಯವು ಅಧಿಕವಾಗಿರುವ ಕಾರಣದಿಂದಾಗಿ ಯಾರ ಬಳಿ ಈ ಸ್ಟಾಕ್ ಇದೆಯೋ ಅವರು ಆ ಸ್ಟಾಕ್ ಅನ್ನು ಮಾರಾಟ ಮಾಡುವ ಬದಲಾಗಿ ಹೋಲ್ಡ್ ಮಾಡಿಟ್ಟುಕೊಳ್ಳುವುದು ಉತ್ತಮ. ಹಾಗೆಯೇ 80-90 ಸಾವಿರದ ಮಟ್ಟಕ್ಕೆ ಸ್ಟಾಕ್ ಇಳಿದಾಗ ಕೂಡಲೇ ಸ್ಟಾಕ್ ಖರೀದಿ ಮಾಡುವುದು ಉತ್ತಮ," ಎಂದು ಕೂಡಾ ತಜ್ಞರಾದ ಸುಜಿತ್ ದಿಯೋದರ್ ಸಲಹೆ ನೀಡಿದ್ದಾರೆ. ಇನ್ನಷ್ಟು ಬೆಲೆ ಏರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಮನಿಸಿ:
ಎಂಆರ್‌ಎಫ್ ಸ್ಟಾಕ್ ಖರೀದಿ ಅಥವಾ ಮಾರಾಟದ ಸಲಹೆಯನ್ನು ತಜ್ಞರುಗಳು ನೀಡಿದ್ದು, ಅದನ್ನು ನಾವಿಲ್ಲಿ ಪ್ರಕಟ ಮಾಡಿದ್ದೇವೆ. ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜೀಸ್ ಆಗಲಿ ಅಥವಾ ಲೇಖಕರು ತಮ್ಮ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಿಲ್ಲ. ಈ ಲೇಖನದ ಆಧಾರದಲ್ಲಿ ಹೂಡಿಕೆದಾರರು ಯಾವುದೇ ನಿರ್ಧಾರವನ್ನು ಕೈಗೊಂಡರೆ ಅದರಿಂದಾಗುವ ನಷ್ಟಕ್ಕೆ ಗುಡ್‌ರಿಟರ್ನ್ಸ್ ಆಗಲಿ ಅಥವಾ ಲೇಖಕರಾಗಲಿ ಜವಾಬ್ದಾರರಲ್ಲ. ತಜ್ಞರ ಸಲಹೆಯನ್ನು ಪಡೆದು ಹೂಡಿಕೆ ಮಾಡುವುದು ಉತ್ತಮ ಆಯ್ಕೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಷೇರು ಮಾರುಕಟ್ಟೆ ರಜೆ: ನಿಮ್ಮ ಹೂಡಿಕೆ ಮೇಲೆ ಈ ಪರಿಣಾಮ!

ಷೇರು ಮಾರುಕಟ್ಟೆ ಹೂಡಿಕೆದಾರರೇ, ಈ ವಾರ ಎಚ್ಚರ ತಪ್ಪಿದರೆ ನಷ್ಟ!

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಕೊನೆಯ ದಿನದ ಅನಿರೀಕ್ಷಿತ ತಿರುವು!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಕಚ್ಚಾ ತೈಲ ಬೆಲೆ ಏರಿಕೆ: ನಿಮ್ಮ ಹೂಡಿಕೆ ಉಳಿಸಿಕೊಳ್ಳುವುದು ಹೇಗೆ?

ಷೇರು ಮಾರುಕಟ್ಟೆ ಅಲುಗಾಡಿಸಲು ಸಜ್ಜಾದ ಪ್ರಮುಖ ಕಂಪನಿಗಳ ರಿಸಲ್ಟ್



Click it and Unblock the Notifications