ಮುಸ್ಲಿಂ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮೊಹರಂ ಹಬ್ಬ ಕೂಡ ಒಂದಾಗಿದೆ. ಈ ವರ್ಷ ಭಾರತದಲ್ಲಿ ಜುಲೈ 6, 7, 2025 ರಂದು ಬಂದಿದೆ. ಆದರೆ ಮೊಹರಂ ಹಬ್ಬ ಶುರುವಾಗುವುದೇ ಅರ್ಧ ಚಂದ್ರ ದರ್ಶನವಾದ್ದಾಗ ಮಾತ್ರ.
ಹೌದು,ಭಾರತದಲ್ಲಿ ಮುಸ್ಲಿಂ ಸೋಹದರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾದ ಆಶುರಾ ಎಂದು ಕರೆಯಲ್ಪಡುವ 10ನೇ ಮುಹರಂನ್ನು ಪ್ರತಿವರ್ಷ ಆಚರಣೆಯನ್ನು ಮಾಡುತ್ತಾರೆ. ಮುಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು. ಪ್ರಪಂಚದಾದ್ಯಂತದ ಮುಸ್ಲಿಮರು ಮುಹರಂನ ಮೊದಲ 10 ದಿನಗಳನ್ನು ಆಚರಿಸುತ್ತಾರೆ. ಸನ್ನಿ ಮುಸ್ಲಿಮರು ಉಪವಾಸವನ್ನು ಮಾಡುವ ಮೂಲಕ ಆಚರಣೆಯನ್ನು ಮಾಡುತ್ತಾರೆ. ಮತ್ತು ಶಿಯಾ ಮುಸ್ಲಿಮರು ಸಾರ್ವಜನಿಕವಾಗಿ ಶೋಕಾಚರಣೆ ಮಾಡುತ್ತಾರೆ. ಮುಹರಂ ತಿಂಗಳಿಗೆ ತನ್ನದೇ ಆದ ಮಹತ್ವವಿದೆ.

ಆಶುರಾ ದಿನದ ಸಂದೇಶಗಳು
ವಿಶ್‌ವರ್ಡ್ಜ್ ವೆಬ್‌ಸೈಟ್ ಪ್ರಕಾರ, ಆಶುರಾ ಹಬ್ಬದ ಶುಭಾಶಯಗಳು ಕೋರುವ ಸಂದೇಶಗಳು ಇಲ್ಲಿವೆ:
- ಮೊಹರಂನ ಈ ಪವಿತ್ರ ದಿನದಂದು ನಿಮ್ಮೆಲ್ಲರಿಗೂ ಶುಭಾಶಯಗಳು. ಇಮಾಮ್ ಹುಸೇನ್ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸೋಣ ಮೊಹರಂ ಹಬ್ಬದ ಶುಭಾಶಯಗಳು.
- ಮೊಹರಂ ಪವಿತ್ರ ದಿನದಂದು ನಮ್ಮೆಲ್ಲರ ಕುಟುಂಬಕ್ಕೆ ಪ್ರೀತಿ ಮತ್ತು ಧೈರ್ಯದ ಜೊತೆಗೆ ಆಶುರಾದ ಆಶೀರ್ವಾದವು ನಿಮ್ಮ ಮನೆಗೆ ಶಾಂತಿ ತರಲಿ.
- ಇಮಾಮ್ ಹುಸೇನ್ ಅವರ ಧೈರ್ಯವು ನಮ್ಮ ಬದುಕಿನಲ್ಲಿ ನಮಗೆ ದಯೆ ಮತ್ತು ಧೈರ್ಯದಿಂದಿರಲು ಸ್ಫೂರ್ತಿಯನ್ನು ಹೊತ್ತುತರಬೇಕು.
- ನಾವು ನಮ್ಮ ಕುಟುಂಬದಲ್ಲಿ ಇಂದು ತ್ಯಾಗವನ್ನು ಪ್ರೀತಿಯಿಂದ ಗೌರವಿಸುತ್ತೇವೆ. ಈ ದಿನವು ನಮಗೆ ಭಯಕ್ಕಿಂತ ಸತ್ಯವನ್ನು ಆಯ್ಕೆ ಮಾಡವಂತೆ ಆಗಲಿ ಎಂದು ನೆನಪಿಸಿಕೊಳ್ಳೋಣ.
ಮುಹರಂ ಹಬ್ಬದ ಶುಭಾಶಯಗಳು
10 ನೇ ಮುಹರಂ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಕೆಲವು ಶುಭಾಶಯಗಳು ಇಲ್ಲಿವೆ:
- ಈ ಮುಹರಂನಲ್ಲಿ ಅಲ್ಲಾಹನ ಆಶೀರ್ವಾದವು ನಿಮಗೆ ಶಾಂತಿ, ಮಾರ್ಗದರ್ಶನ ಮತ್ತು ದೃಢವಾದ ನಂಬಿಕೆಯನ್ನು ನಿಮ್ಮ ಬಾಳಲ್ಲಿ ತರಲಿ.
- ನೀವು ಪವಿತ್ರ ತಿಂಗಳನ್ನು ಆಚರಿಸುತ್ತಿರುವಾಗ ಮುಸ್ಲಿಂ ಸಹೋದರ ನಿಮ್ಮ ಹೃದಯವು ತಾಳ್ಮೆಯಿಂದ ತುಂಬಿರಲಿ ನಿಮ್ಮ ಆತ್ಮವು ಶಾಂತವಾಗಿರಲಿ ಮತ್ತು ಸರಿಯಾದ ದಾರಿಯಲ್ಲಿ ನಡೆಯಲು ನಿಮ್ಮ ಜೀವನವು ವಿವೇಕದಿಂದ ಕೊಡಿರಬೇಕುತ್ತದೆ.
- ಕರ್ಬಲಾದ ತ್ಯಾಗದ ನೆನಪು ದಯೆ, ನ್ಯಾಯ ಮತ್ತು ಅಚಲ ಭಕ್ತಿಯ ಮೌಲ್ಯಗಳನ್ನು ಎತ್ತಿಹಿಡಿಯಲು ನಿಮಗೆ ಸ್ಫೂರ್ತಿ ನೀಡಲಿ.ಈ ಪವಿತ್ರ ತಿಂಗಳಲ್ಲಿ, ನೀವು ಅಲ್ಲಾಹನಿಂದ ಸಮಾಧಾನ, ಶಕ್ತಿ ಮತ್ತು ಅಪಾರ ಆಶೀರ್ವಾದವನ್ನು ಕಂಡುಕೊಳ್ಳಿ.
- ಈ ಮೊಹರಂನಲ್ಲಿ ಇಮಾನ್ ಹುಸೈನ್ ತ್ಯಾಗವನ್ನು ಸ್ಮರಿಸೋಣ ಆತನ ತಿಳಿಸಿದ ಮೌಲ್ಯಗಳನ್ನು ಕಲಿಯೋಣ.
ಆಶುರಾ 2025 ಸ್ಪೂರ್ತಿದಾಯಕ ಸಂದೇಶಗಳು
ವಿಶ್‌ವರ್ಡ್ಜ್ ವೆಬ್‌ಸೈಟ್ ಪ್ರಕಾರ ಜುಲೈ 6 ರಂದು ಹಂಚಿಕೊಳ್ಳಲು ಕೆಲವು ಸ್ಪೂರ್ತಿದಾಯಕ ಸಂದೇಶಗಳು.
- ಆಶುರಾ ನಮಗೆ ಭಯಕ್ಕಿಂತ ನಂಬಿಕೆ ದೊಡ್ಡದು ಎಂದು ನಮ್ಮಗೆ ಮನವರಿಕೆಯನ್ನು ಮಾಡುತ್ತದೆ.
- ಹುಸೇನ್ ಮಾಡಿದಂತೆ ಕಷ್ಟ ಬಂದಾಗಲೂ ಸತ್ಯದ ಪರವಾಗಿ ನೀನು ನಿಲ್ಲು.
- ನಿಮ್ಮ ಒಂದು ಸಣ್ಣ ಒಳ್ಳೆಯ ಕೆಲಸವೂ ನಿಮ್ಮನ್ನು ಬೆಳಕಿನ ಹತ್ತಿರ ತರುತ್ತದೆ. ಸರಿಗಾಗಿ ನಿಂತಾಗ ಶಕ್ತಿಯ ಹಾದಿ ಕಾಡುತ್ತದೆ. ಸತ್ಯದ ಜ್ವಾಲೆಯನ್ನು ಇಂದು ಪ್ರಕಾಶಮಾನವಾಗಿ ಇರಿಸಿ.
- ಆಶುರಾ 2025 : ವಾಟ್ಸಾಪ್ , ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾದ ಸಂದೇಶಗಳು
- ಆಶುರಾ ದಿನದಂದು ನಿಮ್ಮಗೆ ತೋರಿಸಿದ ಧೈರ್ಯವನ್ನು ನಾವು ಎಂದಿಗೂ ಮರೆಯಬಾರದು. ನಾವು ಮುಹರಂನ ಸಂದೇಶವನ್ನು ನಮ್ಮ ಕಾರ್ಯಗಳಲ್ಲಿ ತೋರಿಸೋಣ.
- ಕರ್ಬಲಾದ ಸಂದೇಶವು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಿಸುತ್ತದೆ.
- ಒಬ್ಬ ವ್ಯಕ್ತಿಯ ತ್ಯಾಗ ಜಗತ್ತನ್ನು ಬೆಳಗಿಸಿತು.
ಮುಹರಂ ಆಶುರಾ ಮಹತ್ವ
ಪ್ರತಿವರ್ಷವು ಇಸ್ಲಾಂ ಸಮೂದಾಯದವರು ಚಂದ್ರನ ಕ್ಯಾಲೆಂಡರ್‌ನ ಆರಂಭದಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ಮೊದಲ ಹತ್ತು ದಿನಗಳನ್ನು ದುರಂತ ಘಟನೆಯ ತ್ಯಾಗವನ್ನು ಸ್ಮರಣೆಯನ್ನು ಮಾಡುತ್ತಾರೆ. ಪ್ರಪಂಚದಾದ್ಯಂತದ ಶಿಯಾ ಮತ್ತು ಸುನ್ನಿಗಳಿಗೆ ಆಶುರಾ ಆಚರಣೆಯು ವಿಭಿನ್ನವಾಗಿದೆ. ಶಿಯಾ ಮುಸ್ಲಿಮರು ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಮತ್ತು ಮೂರನೇ ಶಿಯಾ ಇಮಾಮ್ ಹುಸೇನ್ ಇಬ್ನ್ ಅಲಿ ಅವರ ಮರಣವನ್ನು ಸ್ಮರಿಸುವ ಆಶುರಾ ಸೇರಿದಂತೆ ಮುಹರಂನ ಮೊದಲ ಹತ್ತು ದಿನಗಳನ್ನು ಶೋಕ ಆಚರಣೆಯನ್ನು ಮಾಡುತ್ತಾರೆ. ಇನ್ನೂ ಸುನ್ನಿ ಮುಸ್ಲಿಮರು ಈ ದಿನಗಳನ್ನು ಮದುವೆ ಇತ್ಯಾದಿಗಳಂತಹ ಸಂತೋಷದಿಂದ ದಿನವನ್ನಾಗಿ ಆಚರಣೆಯನ್ನು ಮಾಡುತ್ತಾರೆ. ಮುಹರಂ ಹಬ್ಬವು ತ್ಯಾಗ, ಬಲಿದಾನದ ಸಂಕೇತವಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications