For Quick Alerts
ALLOW NOTIFICATIONS  
For Daily Alerts

ಮುಹೂರ್ತ ಟ್ರೇಡಿಂಗ್ ಅಂತ್ಯ: ಷೇರುಪೇಟೆಯಲ್ಲಿ ಗೂಳಿಯಾಟ

|

ಮುಹೂರ್ತ ಟ್ರೇಡಿಂಗ್ ಅಂತ್ಯವಾಗಿದ್ದು ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡುಬಂದಿದೆ. ಸೆನ್ಸೆಕ್ಸ್ ನಿಫ್ಟಿ ಎರಡು ಕೂಡಾ ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಪ್ರತಿ ವರ್ಷವೂ ದೀಪಾವಳಿಯ ಮುಹೂರ್ತ ಟ್ರೇಡಿಂಗ್ ವೇಳೆ ಷೇರುಪೇಟೆಯಲ್ಲಿ ಕರಡಿ ಕುಣಿತಕ್ಕೆ ಯಾವುದೇ ಚಾನ್ಸ್ ಇರಲ್ಲ.

30 ಷೇರುಗಳ ಬಿಎಸ್‌ಇ ಸೂಚ್ಯಂಕ 663.73 ಅಂಕ ಅಥವಾ ಶೇಕಡ 1.12ರಷ್ಟು ಏರಿಕೆಯಾಗಿ 59970.88ಕ್ಕೆ ಮುಹೂರ್ತ ವಹಿವಾಟು ಆರಂಭ ಮಾಡಿತ್ತು. ಇನ್ನು ನಿಫ್ಟಿ 192.50 ಅಂಕ ಅಥವಾ ಶೇಕಡ 1.10ರಷ್ಟು ಇಳಿಕೆಯಾಗಿ 17768.80ಕ್ಕೆ ವಹಿವಾಟಿಗೆ ಇಳಿದಿತ್ತು. ಇನ್ನು 1748 ಷೇರುಗಳು ಏರಿಕೆಯಾಗಿದ್ದರೆ, 452 ಸ್ಟಾಕ್‌ಗಳು ಇಳಿಕೆಯಾಗಿತ್ತು. ಇನ್ನು 119 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

 ಮುಹೂರ್ತ ಟ್ರೇಡಿಂಗ್ ಆರಂಭ: ಷೇರುಪೇಟೆ ಹೇಗಿದೆ? ಮುಹೂರ್ತ ಟ್ರೇಡಿಂಗ್ ಆರಂಭ: ಷೇರುಪೇಟೆ ಹೇಗಿದೆ?

ಇನ್ನು 30 ಷೇರುಗಳ ಬಿಎಸ್‌ಇ ಸೂಚ್ಯಂಕ 524.51 ಅಂಕ ಅಥವಾ ಶೇಕಡ 0.88ರಷ್ಟು ಏರಿಕೆಯಾಗಿ 59831.66ಕ್ಕೆ ಮುಹೂರ್ತ ವಹಿವಾಟು ಅಂತ್ಯ ಮಾಡಿದೆ. ಇನ್ನು ನಿಫ್ಟಿ 154.50 ಅಂಕ ಅಥವಾ ಶೇಕಡ 0.88ರಷ್ಟು ಹೆಚ್ಚಳವಾಗಿ 17730.80ಕ್ಕೆ ವಹಿವಾಟು ಕೊನೆಮಾಡಿದೆ. ಇನ್ನು 2602 ಷೇರುಗಳು ಏರಿಕೆಯಾಗಿದ್ದರೆ, 727 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 153 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

 ಮುಹೂರ್ತ ಟ್ರೇಡಿಂಗ್ ಅಂತ್ಯ: ಷೇರುಪೇಟೆಯಲ್ಲಿ ಗೂಳಿಯಾಟ

ಯಾವೆಲ್ಲ ಷೇರುಗಳು ಏರಿಕೆ, ಇಳಿಕೆ?

ಪ್ರಮುಖವಾಗಿ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಲಾರೆನ್ಸ್ ಆಂಡ್ ಟೌಂಬ್ರೋ, ಎಸ್‌ಬಿಐ ಷೇರುಗಳು ಏರಿಕೆಯಾಗಿದ್ದಾರೆ, ಎಚ್‌ಯುಎಲ್, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್‌ಡಿಎಫ್‌ಸಿ ಲೈಫ್, ಅದಾನಿ ಎಂಟರ್‌ಪ್ರೈಸಸ್ ನಷ್ಟವನ್ನು ಅನುಭವಿಸಿದೆ. ಎಲ್ಲ ಸೆಕ್ಟರ್‌ಗಳು ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಬ್ಯಾಂಕ್ ಹಾಗೂ ಕ್ಯಾಪಿಟಲ್ ಗೂಡ್ಸ್ ಕ್ರಮವಾಗಿ ಶೇಕಡ 1ರಷ್ಟು ಹೆಚ್ಚಳ ದಾಖಲಿಸಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಶೇಕಡ 0.5-1ರಷ್ಟು ಹೆಚ್ಚಳವಾಗಿದೆ.

ಯಾವ ಸ್ಟಾಕ್ ಟಾಪ್?

ನೆಸ್ಲೆ ಸ್ಟಾಕ್ ಆರಂಭಿಕ ವಹಿವಾಟಿನಲ್ಲಿ ಟಾಪ್ ಸ್ಟಾಕ್ ಆಗಿದ್ದು, ವಹಿವಾಟಿನ ಅಂತ್ಯವಾಗುವವರೆಗೂ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಸ್ಟಾಕ್ ಶೇಕಡ 2.86ರಷ್ಟು ಏರಿಕೆಯಾಗಿ ರೂಪಾಯಿ 20,875.05ಕ್ಕೆ ಸ್ಥಿರವಾಗಿದೆ. ಇನ್ನು ಆರಂಭಿಕ ವಹಿವಾಟಿನಲ್ಲಿ ನಷ್ಟವನ್ನು ಕಂಡು ಟಾಪ್ ಲೂಸರ್ ಆಗಿದ್ದ ಎಚ್‌ಯುಎಲ್ ಸ್ಟಾಕ್ ವಹಿವಾಟಿನ ಅಂತ್ಯದ ವೇಳೆಯು ಭಾರೀ ನಷ್ಟವನ್ನು ಕಂಡಿದೆ. ಸ್ಟಾಕ್ ಶೇಕಡ 1.28ರಷ್ಟು ಕುಸಿದು, ರೂಪಾಯಿ 2,573.10ಕ್ಕೆ ವಹಿವಾಟು ಸ್ಥಿರ ಮಾಡಿದೆ.

ಆರಂಭಿಕ ವಹಿವಾಟಿನಲ್ಲಿ ನೆಸ್ಲೆ ಇಂಡಿಯಾ ಸ್ಟಾಕ್ ಭಾರೀ ಏರಿಕೆಯಾಗಿತ್ತು. ಇನ್ನು ಈ ಮುಹೂರ್ತ ಟ್ರೇಡಿಂಗ್ ವೇಳೆ ಎಚ್‌ಯುಎಲ್ ಸ್ಟಾಕ್ ಭಾರೀ ಕುಸಿತ ಕಂಡ ಸ್ಟಾಕ್ ಆಗಿತ್ತು. ನಿಫ್ಟಿ ಪಿಎಸ್‌ಯು ಬ್ಯಾಂಕ್ ಟಾಪ್ ಸೆಕ್ಟರ್ ಆಗಿದ್ದರೆ, ನಿಫ್ಟಿ ಎಫ್‌ಎಂಸಿಜಿ ಸ್ಟಾಕ್ ಭಾರೀ ಇಳಿಕೆಯಾಗಿತ್ತು. ಆದರೆ ವಹಿವಾಟಿನ ಅಂತ್ಯದ ವೇಳೆಯು ಇದೇ ಸ್ಥಿತಿ ಮುಂದುವರಿದಿದೆ.

English summary

Muhurat Trading Closing bell: Sensex, Nifty Rises in Trade

Muhurat Trading Closing bell on october 24, 2022: Sensex Rises Over 500 Points, Nifty Trades Above 17,700.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X