ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಇಂದು ಷೇರುಪೇಟೆ ಎಂದಿನ ವಹಿವಾಟನ್ನು ನಡೆಸಿಲ್ಲ. ಆದರೆ ಸಂಜೆ ಆರು ಗಂಟೆ ಬಳಿಕ ಮುಹೂರ್ತ ಟ್ರೇಡಿಂಗ್‌ಗಾಗಿ ಷೇರು ಮಾರುಕಟ್ಟೆಯು ತೆರೆದುಕೊಂಡಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕ 663.73 ಅಂಕ ಅಥವಾ ಶೇಕಡ 1.12ರಷ್ಟು ಏರಿಕೆಯಾಗಿ 59970.88ಕ್ಕೆ ಮುಹೂರ್ತ ವಹಿವಾಟು ಆರಂಭ ಮಾಡಿದೆ. ಇನ್ನು ನಿಫ್ಟಿ 192.50 ಅಂಕ ಅಥವಾ ಶೇಕಡ 1.10ರಷ್ಟು ಹೆಚ್ಚಳವಾಗಿ 17768.80ಕ್ಕೆ ವಹಿವಾಟಿಗೆ ಇಳಿದಿದೆ. ಇನ್ನು 1748 ಷೇರುಗಳು ಏರಿಕೆಯಾಗಿದ್ದರೆ, 452 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 119 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.
ಸಾಮಾನ್ಯವಾಗಿ ಮೂಹೂರ್ತ ಟ್ರೇಡಿಂಗ್ ವೇಳೆ ಷೇರು ಮಾರುಕಟ್ಟೆಯು ಏರುಗತಿಯಲ್ಲಿ ಸಾಗುತ್ತದೆ. ಈ ವರ್ಷವೂ ಕೂಡಾ ಷೇರುಪೇಟೆ ಜಿಗಿದಿದೆ. ಹೂಡಿಕೆದಾರರಿಗೆ ಈ ವಹಿವಾಟು ಹೆಚ್ಚಿನ ಲಾಭವನ್ನು ತರುವ ಸಾಧ್ಯತೆ ಇದೆ.

ಏನಿದು ಮುಹೂರ್ತ ಟ್ರೇಡಿಂಗ್?
ಪ್ರತಿ ವರ್ಷದವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ಗಂಟೆಗಳ ಕಾಲ ಮುಹೂರ್ತ ಟ್ರೇಡಿಂಗ್ ಸೆಷನ್ ನಡೆಯುತ್ತದೆ. ಕಳೆದ ವರ್ಷ ನವೆಂಬರ್ 4ರಂದು ಸೆಷನ್ ನಡೆದಿತ್ತು. ಈ ಬಾರಿ ಅಕ್ಟೋಬರ್ 24ರಂದು ಸೆಷನ್ ನಡೆಯಲಿದೆ. ದೀಪಾವಳಿಯ ಈ ಸಂದರ್ಭದಲ್ಲಿ ಹೂಡಿಕೆಯಿಂದಾಗಿ ಯಶಸ್ಸು ಹಾಗೂ ಲಾಭ ಲಭಿಸುತ್ತದೆ ಎಂಬ ನಂಬಿಕೆಯಿದ್ದು ಈ ಹಿನ್ನೆಲೆ ಪೂಜೆಯನ್ನು ನಡೆಸಿ ವಹಿವಾಟು ಆರಂಭಿಸಲಾಗುತ್ತದೆ.
ಈ ಸಮಯಕ್ಕೆ ನೆಸ್ಲೆ ಇಂಡಿಯಾ ಸ್ಟಾಕ್ ಭಾರೀ ಏರಿಕೆಯಾಗಿದೆ. ಶೇಕಡ 3.23ರಷ್ಟು ಹೆಚ್ಚಳವಾಗಿದ್ದು ರೂಪಾಯಿ 20,950.20ಕ್ಕೆ ತಲುಪಿದೆ. ಇನ್ನು ಈ ಮುಹೂರ್ತ ಟ್ರೇಡಿಂಗ್ ವೇಳೆ ಎಚ್‌ಯುಎಲ್ ಸ್ಟಾಕ್ ಭಾರೀ ಕುಸಿತ ಕಂಡ ಸ್ಟಾಕ್ ಆಗಿದೆ. ಷೇರು ಶೇಕಡ 3.22ರಷ್ಟು ಏರಿಕೆಯಾಗಿದ್ದು, 2,568.45 ರೂಪಾಯಿಗೆ ತಲುಪಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಟಾಪ್ ಸೆಕ್ಟರ್ ಆಗಿದ್ದರೆ, ನಿಫ್ಟಿ ಎಫ್‌ಎಂಸಿಜಿ ಸ್ಟಾಕ್ ಭಾರೀ ಇಳಿಕೆಯಾಗಿದೆ.
More From GoodReturns

Stock Market Crash: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ..ಸೆನ್ಸೆಕ್ಸ್ 1000 ಪಾಯಿಂಟ್, ನಿಫ್ಟಿಯಲ್ಲಿ 300 ಅಂಕ ಪತನ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications