For Quick Alerts
ALLOW NOTIFICATIONS  
For Daily Alerts

ಮುಕೇಶ್ ಅಂಬಾನಿ ಈಗ ವಿಶ್ವದ 4ನೇ ಅತಿದೊಡ್ಡ ಶ್ರೀಮಂತ

|

ನವದೆಹಲಿ, ಆಗಸ್ಟ್‌ 08: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದೀಗ ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಕೇಶ್‌ ಯೂರೋಪಿನ ಶ್ರೀಮಂತ ವ್ಯಕ್ತಿ ಬರ್ನಾಲ್ಡ್‌ ಅರ್ನಾಲ್ಟ್‌ರನ್ನೇ ಹಿಂದಿಕ್ಕಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ ಅಂಬಾನಿ ಸಂಪತ್ತು ಈಗ 80.6 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ. ಬರ್ನಾಲ್ಡ್‌ರ ಎಲ್‌ವಿಎಂಹೆಚ್ ಮೊಯೆಟ್ ಹೆನ್ನೆಸ್ಸಿ ಲೂಯಿ ವಿಟಾನ್ ಎಸ್‌ಇ ಗ್ರಾಹಕರು ಉನ್ನತ-ಮಟ್ಟದ ಫ್ಯಾಷನ್ ಖರೀದಿಯಲ್ಲಿ ತೊಡಗಿಲ್ಲ. ಇದರಿಂದ ಕಂಪನಿಯ ನಷ್ಟದ ಜೊತೆಗೆ ವೆಚ್ಚ ಕಡಿತಕ್ಕೆ ಮುಂದಾಗಿದೆ.

ಮುಕೇಶ್ ಅಂಬಾನಿ ಈಗ ವಿಶ್ವದ 4ನೇ ಅತಿದೊಡ್ಡ ಶ್ರೀಮಂತ

ಮುಕೇಶ್ ಅಂಬಾನಿ ಈ ಹಿಂದೆ ವಿಶ್ವದ ಖ್ಯಾತ ಹೂಡಿಕೆದಾರ ಅಮೆರಿಕಾದ ವಾರೆನ್ ಬಫೆಟ್, ಗೂಗಲ್‌ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಮುಖ್ಯಸ್ಥ ಎಲೋನ್ ಮಸ್ಕ್‌ ಸೇರಿದಂತೆ ಘಟಾನುಘಟಿ ಶ್ರೀಮಂತರನ್ನೇ ಹಿಂದಿಕ್ಕಿ ಮೇಲೆ ಸಾಗಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಮೆಜಾನ್ ಸಿಇಒ ಜೆಫ್ ಬೇಜೋಸ್ ಇದ್ದಾರೆ.

ಆರ್‌ಐಎಲ್‌ನ ಜಿಯೋ ಪ್ಲಾಟ್‌ಫಾರ್ಮ್‌ಗಳು ಫೇಸ್‌ಬುಕ್ ಇಂಕ್ ಮತ್ತು ಸಿಲ್ವರ್ ಲೇಕ್ ಸೇರಿದಂತೆ ಕಂಪನಿಗಳಿಂದ 15 ಶತಕೋಟಿಗಿಂತ ಹೆಚ್ಚಿನ ಹೂಡಿಕೆಗಳನ್ನು ಪಡೆದ ನಂತರ ಮುಕೇಶ್ ಅಂಬಾನಿಯ ಸಂಪತ್ತು ದ್ವಿಗುಣಗೊಂಡಿದೆ. ಕಳೆದ ಮೂರು ತಿಂಗಳಲ್ಲಿ ಅನೇಕ ವಿದೇಶಿ ಕಂಪನಿಗಳು ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಿವೆ.

ಫೇಸ್‌ಬುಕ್, ಸಿಲ್ವರ್ ಲೇಕ್ ಪಾರ್ಟ್‌ನರ್ಸ್, ವಿಸ್ಟಾ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಸಿಲ್ವರ್ ಲೇಕ್, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್, ಪಿಐಎಫ್ ಜಿಯೋದಲ್ಲಿ ಹೂಡಿಕೆ ಮಾಡಿವೆ. ಜಿಯೋ ಪ್ಲಾಟ್‌ಫಾರ್ಮ್‌ಗಳ ಷೇರು ಮಾರಾಟದಿಂದ ರಿಲಯನ್ಸ್ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಆರ್ಐಎಲ್ ಇದುವರೆಗೆ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇಕಡಾ 25.09 ರಷ್ಟು ಪಾಲನ್ನು ಹೂಡಿಕೆ ಮಾಡಿದೆ.

English summary

Mukesh Ambani Become 4th Richest Person In The World

Reliance Industries Limited (RIL) Chairman and Managing Director Mukesh Ambani becoming the world's 4th richest person.
Story first published: Saturday, August 8, 2020, 18:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X