ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಗೆ ಮತ್ತೆ ಹೊಸದಾಗಿ ಜೀವ ಬೆದರಿಕೆ ಇಮೇಲ್‌ಗಳು ಬಂದಿದೆ. ಈ ಹಿಂದೆ 20 ಕೋಟಿ ರೂಪಾಯಿ ಕೊಡಿ ಎಂದು ಇಲ್ಲವಾದರೆ ಕೊಲ್ಲಲಾಗುವುದು ಎಂದು ಇಮೇಲ್ ಮಾಡಲಾಗಿತ್ತು, ಅದಾದ ಬಳಿಕ 400 ಕೋಟಿ ರೂಪಾಯಿಯ ಬೇಡಿಕೆಯಿಟ್ಟು ಇಮೇಲ್ ಬಂದಿತ್ತು.
ಈಗ ಈ 400 ಕೋಟಿ ರೂಪಾಯಿಯ ಬೇಡಿಕೆಯನ್ನು ಮಾಡಿರುವ ಇಮೇಲ್ ಅನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇಮೇಲ್ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಅಕ್ಟೋಬರ್ 31 ಮತ್ತು ನವೆಂಬರ್ ನಡುವೆ ಎರಡು ಬೆದರಿಕೆ ಇಮೇಲ್‌ಗಳು ಬಂದಿವೆ. ಕಳುಹಿಸಿದವನು ತನ್ನನ್ನು ಶಾದಾಬ್ ಖಾನ್ ಎಂದು ಪರಿಚಯಿಸಿಕೊಂಡಿದ್ದಾನೆ. ಬೇಡಿಕೆಯ ಮೊತ್ತವನ್ನು ಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.
"ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅಕ್ಟೋಬರ್ 31 ಮತ್ತು ನವೆಂಬರ್ 1 ರ ನಡುವೆ ಮತ್ತೊಮ್ಮೆ ಎರಡು ಬೆದರಿಕೆ ಇಮೇಲ್‌ಗಳನ್ನು ಮಾಡಲಾಗಿದೆ. ಹಿಂದಿನ ಇಮೇಲ್‌ಗಳನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅದರಲ್ಲಿ ವ್ಯಕ್ತಿ (ಮೇಲ್ ಕಳುಹಿಸುವವರು) 400 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ," ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಅಂಬಾನಿಗೆ ಇಮೇಲ್ ಮೂಲಕ 20 ಕೋಟಿ ರೂಪಾಯಿ ನೀಡಲು ವಿಫಲವಾದರೆ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಪ್ರತಿ ಬಾರಿ ಹೊಸ ಇಮೇಲ್ ಕಳುಹಿಸಿದಾಗ 200 ಕೋಟಿ ರೂಪಾಯಿ ಮತ್ತು 400 ಕೋಟಿ ರೂಪಾಯಿಯ ಬೇಡಿಕೆಯನ್ನು ಇಡಲಾಗಿದೆ.
ಕಳುಹಿಸುವವರು ಹಿಂದಿನ ಇಮೇಲ್‌ಗೆ ಪ್ರತಿಕ್ರಿಯೆ ಇಲ್ಲದಿದ್ದರೆ, ಇನ್ನಷ್ಟು ಬೇಡಿಕೆ ಅಧಿಕವಾಗುತ್ತಾ ಸಾಗುತ್ತದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಅಕ್ಟೋಬರ್ 28 ರಂದು ಮೊದಲ ಬೆದರಿಕೆ ಮೇಲ್ ಕಳುಹಿಸಲಾಗಿದೆ ಎಂದು ಹೇಳಿದರು.
ಇಮೇಲ್ ಸ್ವೀಕರಿಸಿದ ನಂತರ, ಮುಕೇಶ್ ಅಂಬಾನಿ ಭದ್ರತಾ ಉಸ್ತುವಾರಿ ದೂರಿನ ಆಧಾರದ ಮೇಲೆ, ಮುಂಬೈನ ಗಾಮ್‌ದೇವಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಸೆಕ್ಷನ್ 387 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಇನ್ನು ಈ ಬೆದರಿಕೆ ಬಳಿಕ ಭದ್ರತೆಯನ್ನು ಕೂಡಾ ಹೆಚ್ಚಳ ಮಾಡಲಾಗಿದೆ. ಆಗಸ್ಟ್ 2022 ರಲ್ಲಿ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಆಭರಣ ವ್ಯಾಪಾರಿಯನ್ನು ಬಂಧಿಸಲಾಗಿತ್ತು.


Click it and Unblock the Notifications