Mukesh Ambani: ದೇಶದ ಹಾಗೂ ವಿಶ್ವದ ಅಗ್ರ ಶ್ರೀಮಂತರಲ್ಲಿ ಒಬ್ಬರಾದ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರಾದ ಮುಖೇಶ್ ಅಂಬಾನಿ ಈ ವಾರದಲ್ಲಿ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿದ್ದಾರೆ. ರಿಲಯನ್ಸ್ ಉದ್ಯಮ ಸಮೂಹಗಳಲ್ಲಿ ಪ್ರಮುಖ ಕಂಪನಿಯಾದ, ಭಾರತದ ಅತ್ಯಂತ ಮೌಲ್ಯಯುತ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರು ಬೆಲೆಯಲ್ಲಿ ತೀವ್ರ ಕುಸಿತವನ್ನು ಕಂಡಿದ್ದು, ಇದರ ಪರಿಣಾಮವಾಗಿ ಮಾರುಕಟ್ಟೆ ಬಂಡವಾಳೀಕರಣದ ಗಣನೀಯ ನಷ್ಟವಾಗಿದೆ.
ಸೆನ್ಸೆಕ್ಸ್ 703.95 ಪಾಯಿಂಟ್‌ಗಳಿಗೆ ಅಥವಾ ಶೇಕಡಾ 0.85 ಕ್ಕೆ ಕುಸಿದು 81,793.16ನಲ್ಲಿ ನೆಲೆಸಿದಾಗ ಭಾರತೀಯ ಷೇರು ಮಾರುಕಟ್ಟೆಯು ಈ ವಾರ ಪ್ರಕ್ಷುಬ್ಧತೆಯನ್ನು ಗಮನಿಸಿದರೆ, ನಿಫ್ಟಿ 200.25 ಪಾಯಿಂಟ್‌ಗಳು ಅಥವಾ ಶೇಕಡಾ 0.79 ರಷ್ಟು ಕುಸಿದು ಶುಕ್ರವಾರ 25,049.85ಕ್ಕೆ ಕೊನೆಗೊಂಡಿತು. ಕೇವಲ ನಾಲ್ಕು ವಹಿವಾಟಿನ ದಿನಗಳಲ್ಲಿ, ಮುಖೇಶ್ ಅಂಬಾನಿ ಅವರ ಕಂಪನಿಯು 13,20,00,00,00,000 ರೂ. ಕಳೆದುಕೊಂಡ ನಂತರ ಮುಖೇಶ್ ಅಂಬಾನಿ ಅವರಿಗೆ ಇದು ದೊಡ್ಡ ಆರ್ಥಿಕ ಹಿನ್ನಡೆಯಾಗಿದೆ.

132,000 ಕೋಟಿ ರೂ. ಬೃಹತ್ ಕುಸಿತದಿಂದ ಅಕ್ಟೋಬರ್ 4ರ ಹೊತ್ತಿಗೆ ಕಂಪನಿಯ ಮಾರುಕಟ್ಟೆ ಬಂಡವಾಳವು 18.76 ಲಕ್ಷ ಕೋಟಿ ರೂಪಾಯಿಗೆ ಇಳಿಯುವಂತೆ ಮಾಡಿದೆ. ಅಂದರೆ ರಿಲಯನ್ಸ್‌ನ ಮೌಲ್ಯವು ಕೆಲವೇ ದಿನಗಳ ಹಿಂದೆ ಇದ್ದ 20 ಲಕ್ಷ ಕೋಟಿ ರೂಪಾಯಿಗಿಂತ ಕಡಿಮೆಯಾಗಿದೆ . ಶುಕ್ರವಾರವಷ್ಟೇ ಕಂಪನಿಯ ಷೇರಿನ ಬೆಲೆ ರೂ.42.45ರಷ್ಟು (ಶೇ.1.51) ಕುಸಿದಿದೆ. ಈ ವಾರ, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಗಮನಾರ್ಹ ಕುಸಿತವನ್ನು ಅನುಭವಿಸಿದೆ.
ಮಾರುಕಟ್ಟೆಯ ಕುಸಿತವು ಪ್ರಾಥಮಿಕವಾಗಿ ಮಧ್ಯಪ್ರಾಚ್ಯದ ದೇಶದಲ್ಲಿ ನಡೆಯುತ್ತಿರುವ ಯುದ್ದ ಉದ್ನಿಗ್ವತೆಗಳು, ಏರಿಕೆಯಾಗುತ್ತಿರುವ ತೈಲ ಬೆಲೆಗಳು, ಅದರ ದರ ನೀತಿಗಳೊಂದಿಗೆ ಚೀನಾದ ಆರ್ಥಿಕತೆ ತೆರೆಯುವುದು, ನಿರಂತರ ವಿದೇಶಿ ಬಂಡವಾಳದ ಹೊರಹರಿವು ,ಭೌಗೋಳಿಕ ರಾಜಕೀಯ ಅನಿಶ್ಚಿತತೆ ಇತ್ಯಾದಿಗಳು ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚಗೆ ಸಲ್ಲಿಸಿದ ರಿಪೋರ್ಟ್ ಪ್ರಕಾರ, ಕಂಪನಿಯು 2025 ರ ಹಣಕಾಸಿನ ವರ್ಷದ ಮೊದಲ ತ್ರೈಮಾಸಿಕ(Q1 FY25 )ಕ್ಕೆ ರೂ.2,31,784 ಕೋಟಿಗಳ ನಿವ್ವಳ ಮಾರಾಟವನ್ನು ವರದಿ ಮಾಡಿದೆ, ಇದು 2024 ರ ಹಣಕಾಸಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ.2,07,559 ಕೋಟಿಗಳಿಂದ 12 ಪ್ರತಿಶತ ಹೆಚ್ಚಳವಾಗಿದೆ. ಆದರೂ ಕಂಪನಿಯ ನಿವ್ವಳ ಲಾಭವು Q1 FY25 ರಲ್ಲಿ 17,445 ಕೋಟಿ ರೂ.ಗೆ 4.5 ಶೇಕಡಾ ಕಡಿಮೆಯಾಗಿದೆ, Q1 FY24 ರಲ್ಲಿ 18,258 ಕೋಟಿ ರೂ. ಆಗಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿದ್ದು, ಪೆಟ್ರೋಕೆಮಿಕಲ್ಸ್, ರಿಫೈನಿಂಗ್, ಟೆಲಿಕಮ್ಯುನಿಕೇಶನ್ಸ್ ಮತ್ತು ರಿಟೇಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಧೀರೂಭಾಯಿ ಅಂಬಾನಿಯರ ನೇತೃತ್ವದಲ್ಲಿ 1958ರಲ್ಲಿ ಆರಂಭವಾದ ರಿಲಯನ್ಸ್ ಟೆಕ್ಸ್ ಟೈಲ್ಸ್ ಮತ್ತು ಟ್ರೇಡಿಂಗ್ ಕಂಪನಿಯಾಗಿತ್ತು. 1990ರ ದಶಕದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಕೈಗಾರಿಕಾ ಸಂಘಟನೆಯಾಯಿತು. ಕಂಪನಿಯು ಪೆಟ್ರೋಕೆಮಿಕಲ್‌ಗಳು, ಟೆಕ್ಸ್‌ಟೈಲ್‌ಗಳು, ರಿಟೇಲ್ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ವಿಸ್ತರಿಸಿತು.
2002ರಲ್ಲಿ ಧೀರೂಭಾಯಿ ಅಂಬಾನಿಯವರ ನಿಧನದ ನಂತರ, ಅವರ ಮಕ್ಕಳಾದ ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಕಂಪನಿಯನ್ನು ಎರಡು ಭಾಗಗಳಾಗಿ ವಿಭಜಿಸಿದರು. ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಮುಂದುವರೆಸಿ ಅದನ್ನು ಎತ್ತರಕ್ಕೆ ಕೊಂಡೊಯ್ದರು. ರಿಲಯನ್ಸ್ ಇಂಡಸ್ಟ್ರೀಸ್ ಇಂದು ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ.
5,00,000 ಉದ್ಯೋಗಿಗಳೊಂದಿಗೆ ಭಾರತದಲ್ಲಿ 10ಅತಿ ದೊಡ್ಡ ಉದ್ಯೋಗದಾತ ಕಂಪನಿ ಇದಾಗಿದೆ. ಇದು ಭಾರತದ ಅತಿದೊಡ್ಡ ಖಾಸಗಿ ವಲಯದ ಕಂಪನಿಯಾಗಿ ಬೆಳೆದು ನಿಂತಿದ್ದು, ಪ್ರಮುಖ ಜಾಗತಿಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಕಂಪನಿಯು ತನ್ನ ವ್ಯವಹಾರಗಳನ್ನು ವಿಸ್ತರಿಸುವ ಮತ್ತು ಭವಿಷ್ಯದಲ್ಲಿ ಹೊಸ ಕ್ಷೇತ್ರಗಳಿಗೆ ಪ್ರವೇಶಿಸುವ ಗುರಿಯನ್ನು ಹೊಂದಿದೆ.


Click it and Unblock the Notifications