ಮುಕೇಶ್ ಅಂಬಾನಿ ವಿಶ್ವದ 6ನೇ ಅತ್ಯಂತ ಸಿರಿವಂತ: ಆಸ್ತಿ ಮೌಲ್ಯ 7240 ಕೋಟಿ USD

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷ ಮುಕೇಶ್ ಅಂಬಾನಿ ಈಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿದ್ದಾರೆ. ಈ ವರೆಗೆ ಆ ಸ್ಥಾನವನ್ನು ಗಿಟ್ಟಿಸಿದ್ದವರು ಗೂಗಲ್ ಕಂಪೆನಿ ಸಹ ಸಂಸ್ಥಾಪಕ ಲ್ಯಾರಿ ಪೇಜ್. ಬ್ಲೂಮ್ ಬರ್ಗ್ ಶತ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ, ಮುಕೇಶ್ ಅಂಬಾನಿ ಅವರ ನಿವ್ವಳ ಆಸ್ತಿ ಮೌಲ್ಯ 7240 ಕೋಟಿ ಅಮೆರಿಕನ್ ಡಾಲರ್.

ಕಳೆದ ತಿಂಗಳಷ್ಟೇ ಅಂಬಾನಿ ವಿಶ್ವದ ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಒಂದೇ ದಿನದಲ್ಲಿ ಮುಕೇಶ್ ನಿವ್ವಳ ಆಸ್ತಿ ಮೌಲ್ಯ 217 ಕೋಟಿ ಡಾಲರ್ ಹೆಚ್ಚಾಗಿದೆ. ಆ ಕಾರಣಕ್ಕೆ ಈಗ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿನ ಆರನೇ ಸ್ಥಾನದಲ್ಲಿ ಅವರು ನಿಂತಿದ್ದಾರೆ. ಕಳೆದ ಇಪ್ಪತ್ತೆರಡು ದಿನದಲ್ಲಿ ಅಂಬಾನಿ ಆಸ್ತಿ 790 ಕೋಟಿ ಹೆಚ್ಚಾಗಿದೆ.

ಮುಕೇಶ್ ಅಂಬಾನಿ ವಿಶ್ವದ 6ನೇ ಅತ್ಯಂತ ಸಿರಿವಂತ: ಆಸ್ತಿ 7240 ಕೋಟಿ USD

ವಿಶ್ವದ ಶತಕೋಟ್ಯಧಿಪತಿಗಳ ಟಾಪ್ ಟೆನ್ ಪಟ್ಟಿಯಲ್ಲಿ ಇರುವ ಏಷ್ಯಾದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ. ಮೊದಲ ಸ್ಥಾನದಲ್ಲಿ ಜೆಫ್ ಬೆಜೋಸ್ (18,400 ಕೋಟಿ USD), ಎರಡನೇ ಸ್ಥಾನದಲ್ಲಿ ಬಿಲ್ ಗೇಟ್ಸ್ (11,500 ಕೋಟಿ USD), ಮೂರರಲ್ಲಿ ಬರ್ನಾರ್ಡ್ ಅನಾಲ್ಟ್ (9450 ಕೋಟಿ USD), ನಾಲ್ಕನೇ ಸ್ಥಾನದಲ್ಲಿ ಮಾರ್ಕ್ ಝುಕರ್ ಬರ್ಗ್ (9080 ಕೋಟಿ USD) ಮತ್ತು ಐದರಲ್ಲಿ ಸ್ಟೇಲ್ ಬಾಲಿಮರ್ (7460 ಕೋಟಿ USD) ಇದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+