ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮುಂದಿನ 'ಗೇಮ್‌' ಪ್ಲಾನ್ ಏನ್ ಗೊತ್ತಾ?

ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕಾಲಿಡದ ಕ್ಷೇತ್ರವೇ ಬಹಳ ವಿರಳವಾಗಿಬಿಟ್ಟಿವೆ. ಉದ್ಯಮ ಕ್ಷೇತ್ರದಲ್ಲಿ ದೈತ್ಯವಾಗಿ ಬೆಳೆದಿರುವ ಮುಕೇಶ್ ಮುಂದಿನ ಗೇಮ್‌ ಪ್ಲಾನ್ ಯಾವುದು ಎಂದು ಸುಳಿವು ನೀಡಿದ್ದಾರೆ.

ಮುಂಬೈನಲ್ಲಿ ನಡೆದ ಫ್ಯೂಚರ್ ಡೀಕೋಡೆಡ್ ಸಿಇಒ 2020'' ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಲ್ಲಾ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅಂಬಾನಿ ಭವಿಷ್ಯದಲ್ಲಿ ಗೇಮಿಂಗ್ ಉತ್ತುಂಗಕ್ಕೇರುತ್ತದೆ ಎಂದು ಹೇಳುವ ಮೂಲಕ ಆ ಉದ್ಯಮಕ್ಕೂ ಕಾಲಿಡುವ ಸುಳಿವು ನೀಡಿದ್ದಾರೆ.

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮುಂದಿನ 'ಗೇಮ್‌' ಪ್ಲಾನ್!

''ಮುಂದಿನ ದಶಕವು ಗೇಮಿಂಗ್​ಗೆ ಸೇರಲಿದೆ. ಬ್ರಾಡ್ ಬ್ಯಾಂಡ್ ಕನೆಕ್ಟಿವಿಟಿ ಸಮರ್ಪಕವಾಗಿ ಹೊಂದಿರುವ ಭಾರತದಲ್ಲಿ ಗೇಮಿಂಗ್ ಇನ್ನೂ ಶೈಶಾವಸ್ತೆಯಲ್ಲಿದೆ. ನಮ್ಮಂಥವರಿಗೆ ಈ ಗೇಮಿಂಗ್ ಏನು ಎಂಬುದು ಗೊತ್ತಿಲ್ಲದೇ ಇರಬಹುದು. ಆದರೆ, ಸಂಗೀತ, ಸಿನಿಮಾ ಮತ್ತು ಟಿವಿ ಶೋಗಳೆಲ್ಲವನ್ನೂ ಮೀರಿಸಿ ಗೇಮಿಂಗ್ ಬೆಳೆಯಲಿದೆ. ಇದು ನಮ್ಮ ಊಹೆಗೂ ಮೀರಿದ್ದು ಎಂದು ಅನಿಸಿದರೂ ಅಂಥದ್ದೊಂದು ಟ್ರೆಂಡ್ ಸೃಷ್ಟಿಯಾಗುತ್ತಿರುವುದನ್ನು ಕಾಣಬಹುದಾಗಿದೆ'' ಎಂದು ಮುಕೇಶ್ ಅಂಬಾನಿ ಹೇಳಿದರು.

ಉದಯೋನ್ಮುಖ ಆರ್ಥಿಕತೆಗಳಲ್ಲಿ ಗೇಮ್ ಡೌನ್‌ಲೋಡ್‌ಗಳಿಗಾಗಿ ಭಾರತವು ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಗೇಮ್‌ಗಳ ಅಭಿವೃದ್ಧಿ ಮಾರುಕಟ್ಟೆಯನ್ನು ತೀವ್ರವಾಗಿ ಬೆಳೆಯಲು ಸಜ್ಜಾಗಿದೆ. ಉದ್ಯಮದ ಮಾಹಿತಿಯ ಪ್ರಕಾರ, ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ಗೇಮಿಂಗ್ ವಿಷಯಕ್ಕಾಗಿ ಸರಾಸರಿ ಒಂದು ಗಂಟೆ ಕಳೆಯುತ್ತಾರೆ. ಇದು ಭಾರತದಲ್ಲಿ ಈಗ ಜಾಗತಿಕ ಗೇಮಿಂಗ್ ಉತ್ಪನ್ನಗಳೊಂದಿಗೆ ದೊಡ್ಡ ಗೇಮಿಂಗ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+