ವರ್ಷಗಳು ಕಳೆಯುತ್ತಿದ್ದಂತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ಭಾರತದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಅದರ ಜೊತೆಗೆ ತನ್ನ ಉದ್ಯಮವನ್ನು ಕೂಡಾ ಅಂಬಾನಿ ವಿಸ್ತರಣೆ ಮಾಡುತ್ತಿದ್ದಾರೆ. ಹಣಕಾಸು ವಲಯಕ್ಕೂ ಸಂಸ್ಥೆ ಎಂಟ್ರಿ ನೀಡಿದೆ. ಈಗ ಮ್ಯೂಚುವಲ್ ಫಂಡ್ ಲೋಕಕ್ಕೂ ಎಂಟ್ರಿ ನೀಡಲಿದ್ದಾರೆ.
ಮುಕೇಶ್ ಅಂಬಾನಿಯವರ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಬ್ಲ್ಯಾಕ್‌ರಾಕ್ ಪಾಲುದಾರಿಕೆಯಲ್ಲಿ ಮ್ಯೂಚುಯಲ್ ಫಂಡ್ ಪರವಾನಗಿಗಾಗಿ ಅರ್ಜಿ ಸಲ್ಲಿಸಿದೆ. ಪಿಟಿಐ ವರದಿಯ ಪ್ರಕಾರ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಮತ್ತು ಬ್ಲ್ಯಾಕ್‌ರಾಕ್‌ನ ಮ್ಯೂಚುಯಲ್ ಫಂಡ್ ಪರವಾನಗಿ ಅರ್ಜಿಯು ಪ್ರಸ್ತುತ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅನುಮೋದನೆಗಾಗಿ ಬಾಕಿ ಉಳಿದಿದೆ.

ಮುಕೇಶ್ ಅಂಬಾನಿ ಭಾರತದ ಅತ್ಯಮೂಲ್ಯ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು 1759000 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಕೂಡಾ ಇದರ ಭಾಗವಾಗಿದೆ. ಈ ಸಂಸ್ಥೆಯನ್ನು ಈ ವರ್ಷದ ಆಗಸ್ಟ್‌ನಲ್ಲಿ ಲೀಸ್ಟ್ ಮಾಡಲಾಗಿದೆ. ಮುಕೇಶ್ ಅಂಬಾನಿಯವರ ಹೊಸ ಅಂಗಸಂಸ್ಥೆಯು ಕಳೆದ ವರ್ಷ ಬ್ಲ್ಯಾಕ್‌ರಾಕ್‌ನೊಂದಿಗೆ 50:50 ಜಂಟಿ ಉದ್ಯಮವಾಗಿ ಪ್ರವೇಶಿಸಿದೆ. ಇದಕ್ಕಾಗಿ 1200 ಕೋಟಿ ರೂಪಾಯಿ ಹೂಡಿಕೆಯ ಒಪ್ಪಂದ ಇದಾಗಿದೆ.
ಮುಕೇಶ್ ಅಂಬಾನಿ ಬೆಂಬಲಿತ ಮ್ಯೂಚುವಲ್ ಫಂಡ್ 50 ಲಕ್ಷ ಕೋಟಿ ರೂಪಾಯಿಗಳ ಮ್ಯೂಚುವಲ್ ಫಂಡ್ ಉದ್ಯಮವನ್ನು ಡಿಜಿಟಲ್ ರೂಪದಲ್ಲಿ ಆರಂಭಿಸಬಹುದು ಎಂದು ಪಿಟಿಐ ವರದಿ ಮಾಡಿದೆ. 2022 ರ ಹೊತ್ತಿಗೆ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ ಬ್ಲ್ಯಾಕ್‌ರಾಕ್ ಒಟ್ಟು 8.2 ಟ್ರಿಲಿಯನ್ ಡಾಲರ್‌ಗಳ ಆಸ್ತಿಯನ್ನು ಹೊಂದಿದೆ.
ಇದಲ್ಲದೇ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ತನ್ನ ಕ್ರೆಡಿಟ್ ರೇಟಿಂಗ್ ಮತ್ತು ಇತರ ಅಗತ್ಯ ಅನುಮೋದನೆಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ. ಇತ್ತೀಚೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಂಪನಿಯ ನಿರ್ದೇಶಕರಾಗಿ ಇಶಾ ಮುಖೇಶ್ ಅಂಬಾನಿ, ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಕುಮಾರ್ ಸೇಥಿಯಾ ಅವರಿಗೆ ಅನುಮೋದನೆ ನೀಡಿದೆ.
ಎಜಿಎಂ ಸಮಯದಲ್ಲಿ, ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಅನ್ನು 1,20,000 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಬಂಡವಾಳ ಮಾಡಿಕೊಂಡಿದೆ ಎಂದು ಹೇಳಿದರು.
ಬೀದಿ ಬೀದಿಯಲ್ಲಿ ಅಂಗಡಿ
ಮುಕೇಶ್ ಅಂಬಾನಿ ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳ ಎಲ್ಲ ವ್ಯಾಪಾರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಮುಂದಾಗಿದೆ. ಮುಕೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಫ್ಯಾಶನ್ ವರ್ಲ್ಡ್ ಬೈ ಟ್ರೆಂಡ್ಸ್ ಬ್ಯಾನರ್ ಅಡಿಯಲ್ಲಿ 500 ಉಡುಪುಗಳ ರಿಟೇಲ್ ಮಳಿಗೆಯನ್ನು ಈಗಾಗಲೇ ತೆರೆಯಲು ಸಿದ್ಧವಾಗಿದೆ. ಈಗ ಬೀದಿ ಬೀದಿಯಲ್ಲಿಯೂ ತನ್ನ ವ್ಯಾಪಾರವನ್ನು ನಡೆಸಲು ಮುಂದಾಗಿದೆ.


Click it and Unblock the Notifications