ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಪಾಲ್ಗೊಳ್ಳಲು ದೊಡ್ಡ ತಾರೆಯರು ಗುಜರಾತ್‌ನ ಜಾಮ್‌ನಗರದಲ್ಲಿ ಜಮಾಯಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶ ಮತ್ತು ವಿಶ್ವದ ಹಲವು ಪ್ರಮುಖ ಉದ್ಯಮಿಗಳು ಜಾಮ್‌ನಗರ ತಲುಪುತ್ತಿದ್ದಾರೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕೂಡ ಶುಕ್ರವಾರ ತಮ್ಮ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರೊಂದಿಗೆ ಜಾಮ್‌ನಗರ ತಲುಪಿದ್ದು, ಇವರಿಗೆ ವಿಮಾನ ನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.

ಮಾರ್ಕ್ ಜುಕರ್‌ಬರ್ಗ್ ಅವರಲ್ಲದೆ, ಎಮಿರಾಟಿ ಉದ್ಯಮಿ ಮೊಹಮ್ಮದ್ ಅಲಿ ಅಲಬ್ಬರ್ ಕೂಡ ಜಾಮ್‌ನಗರ ತಲುಪಿದ್ದಾರೆ. ಮೊಹಮ್ಮದ್ ಅಲಬ್ಬರ್ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಎಮಾರ್ ಪ್ರಾಪರ್ಟೀಸ್ ಮಾಲೀಕರಾಗಿದ್ದಾರೆ. ಈ ಕಂಪನಿಯು ಬುರ್ಜ್ ಖಲೀಫಾವನ್ನು ನಿರ್ಮಿಸಿದೆ. ಈ ಕಂಪನಿಯು ವಿಶ್ವದ 80 ದೇಶಗಳಲ್ಲಿ ವ್ಯವಹಾರವನ್ನು ಹೊಂದಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಮಾರ್ಚ್ 1 ಮತ್ತು 3 ರ ನಡುವೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿದೆ. ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವ ಅತಿಥಿಗಳಿಗಾಗಿ ವಿಶೇಷ ಐಷಾರಾಮಿ ಕಾರುಗಳ ವ್ಯವಸ್ಥೆ ಮಾಡಲಾಗಿದೆ.

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಫೆಬ್ರವರಿ 29 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಭಾಗವಹಿಸಲು ತಮ್ಮ ಪತ್ನಿಯೊಂದಿಗೆ ಜಾಮ್‌ನಗರ ತಲುಪಿದರು. ವಿಮಾನ ನಿಲ್ದಾಣದಲ್ಲಿ ಭಾರತೀಯ ಸಂಪ್ರದಾಯದಂತೆ ಹಾರ ಹಾಕಿ ಸ್ವಾಗತಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾರ್ಕ್ ಜುಕರ್‌ಬರ್ಗ್, ಮೊಹಮ್ಮದ್ ಅಲಿ ಅಲಬ್ಬರ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಸಹ ಭಾರತಕ್ಕೆ ಬಂದಿದ್ದಾರೆ. ಇದಲ್ಲದೆ, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನ ಮಾಜಿ ಡೀನ್ ನಿತಿನ್ ನೊಹ್ರಿಯಾ, ಕೆಕೆಆರ್ ಮತ್ತು ಕಂಪನಿಯ ಸಿಇಒ ಜೋ ಬೇ, ಬ್ರೂಕ್‌ಫೀಲ್ಡ್ ಅಸೆಟ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಮಾರ್ಕ್ ಕಾರ್ನಿ, ಸೋನಿಯ ಸಿಇಒ ಕೆನಿಚಿರೊ ಯೋಶಿಡಾ, ಸೌದಿ ಅರಾಮ್‌ಕೋ ಅಧ್ಯಕ್ಷ ಯಾಸಿರ್ ಅಲ್ ರುಮಯ್ಯನ್ ಅವರಂತಹ ಅನೇಕ ಉದ್ಯಮಿಗಳು. ಎನ್ ವಿ ಇನ್ವೆಸ್ಟ್ ಮೆಂಟ್ ನ ವಿವಿ ನೇವೋ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


Click it and Unblock the Notifications