ಟಾಟಾ ಗ್ರೂಪ್ ಮಾಲೀಕತ್ವದ ಏರ್‌ಇಂಡಿಯಾ ಇತ್ತೀಚೆಗೆ ಮಲ್ಟಿ ಬಿಲಿಯನ್ ಡಾಲರ್ ಡೀಲ್ ಅನ್ನು ಮಾಡಿದೆ. ಇದಾದ ಬಳಿಕ ಶುಕ್ರವಾರ ಹೊಸ ನೇಮಕಾತಿಯನ್ನು ಏರ್‌ಇಂಡಿಯಾ ಘೋಷಣೆ ಮಾಡಿದೆ. ತಮ್ಮ ಡೀಲ್‌ನ ವಿಸ್ತರಣೆಗಾಗಿ ಏರ್‌ಇಂಡಿಯಾವು 4,200 ಸಿಬ್ಬಂದಿಗಳನ್ನು ಮತ್ತು 900 ಪೈಲಟ್‌ಗಳನ್ನು ನೇಮಿಸುವ ನಿರ್ಧಾರ ಮಾಡಿದೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸೇವೆಯನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಹೊಸ ವಿಮಾನಗಳನ್ನು ಖರೀದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ ಏರ್‌ಇಂಡಿಯಾ ಒಟ್ಟಾಗಿ 470 ವಿಮಾನಗಳನ್ನು ಖರೀದಿ ಮಾಡುವ ನಿರ್ಧಾರವನ್ನು ಮಾಡಿದೆ. ಫ್ರಾನ್ಸ್‌ನ ಏರ್‌ಬಸ್ ಮತ್ತು ಅಮೆರಿಕಾದ ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ಜೊತೆ ಒಟ್ಟು 470 ಪ್ರಯಾಣಿಕ ವಿಮಾನ ಖರೀದಿಯ ಡೀಲ್ ಅನ್ನು ಮಾಡಿದೆ. ಇದಾದ ಬಳಿಕ ಇತ್ತೀಚೆಗೆ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯು 36 ವಿಮಾನಗಳನ್ನು ಲೀಸ್‌ಗೆ ಪಡೆಯುವ ಯೋಜನೆಯನ್ನು ಮಾಡುತ್ತಿದೆ ಎಂದು ತಿಳಿಸಿದೆ. ಈ ಪೈಕಿ ಎರಡು ವಿಮಾನ B777-200 LR ಈಗಾಗಲೇ ಲಭ್ಯವಾಗಿದೆ.

"ದೇಶದಲ್ಲಿರುವ ಅರ್ಹರನ್ನು ಸಿಬ್ಬಂದಿಗಳಾಗಿ ನೇಮಕಾತಿ ಮಾಡಲಾಗುವುದು. ನೇಮಕಾತಿಯಾಗುವವರಿಗೆ ಸುರಕ್ಷತೆ ಮತ್ತು ಸೇವಾ ವಿಚಾರದಲ್ಲಿ ಸುಮಾರು 15 ವಾರಗಳ ತರಬೇತಿಯನ್ನು ನೀಡಲಾಗುತ್ತದೆ. ಭಾರತದಲ್ಲಿ ವಿಮಾನ ಸಂಸ್ಥೆಗಳಲ್ಲಿ ಹಾಸ್ಪಟಲಿಟಿ ಮತ್ತು ಟಾಟಾ ಗ್ರೂಪ್ ಕಲ್ಚರ್ ನಿರ್ವಹಣೆಗೆ ನಾವು ತರಬೇತಿ ನಿಡುತ್ತೇವೆ. ತರಬೇತಿ ಯೋಜನೆಯಲ್ಲಿ ಕ್ಲಾಸ್‌ರೂಮ್ ಮತ್ತು ವಿಮಾನದಲ್ಲಿನ ತರಬೇತಿ ಸೇರ್ಪಡೆಯಾಗಿರುತ್ತದೆ. ಮುಂಬೈ ಹಾಗೂ ಇತರೆ ಕಡೆ ತರಬೇತಿ ನೀಡಲಾಗುತ್ತದೆ," ಎಂದು ಏರ್‌ಇಂಡಿಯಾ ಹೇಳಿದೆ.
ಈ ಹಿಂದೆ ಮಾಡಿದ ನೇಮಕಾತಿ
ಮೇ 2022ರಲ್ಲಿ ಮತ್ತು ಫೆಬ್ರವರಿ 2023ರ ನಡುವೆ ಏರ್‌ಇಂಡಿಯಾ 1,900 ಸಿಬ್ಬಂದಿಗಳನ್ನು ನೇಮಕಾತಿ ಮಾಡಿದೆ. ಕಳೆದ ಏಳು ತಿಂಗಳುಗಳಲ್ಲಿ (ಜುಲೈ 2022-ಜನವರಿ 2023ರ ನಡುವೆ) 1,100 ಕ್ಕೂ ಅಧಿಕ ಮಂದಿಗೆ ಏರ್‌ಇಂಡಿಯಾ ತರಬೇತಿಯನ್ನು ನೀಡಿದೆ. ಕಳೆದ ಮೂರು ತಿಂಗಳುಗಳಿಂದ ಏರ್‌ಇಂಡಿಯಾ 500ಕ್ಕೂ ಅಧಿಕ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಿದೆ ಎಂದು ಟಾಟಾ ಗ್ರೂಪ್‌ನ ಮಾಲೀಕತ್ವದ ಏರ್‌ಇಂಡಿಯಾವು ಮಾಹಿತಿ ನೀಡಿದೆ.
ಅರ್ಜಿ ಸಲ್ಲಿಕೆ ಮಾಡಿ
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಏರ್‌ಇಂಡಿಯಾದ ಮುಖ್ಯಸ್ಥ (inflight services) ಸಂದೀಪ್ ವರ್ಮಾ, "ತಿಂಗಳ ಆರಂಭದಲ್ಲಿ ನಾವು ಗಣನೀಯ ಪ್ರಮಾಣದಲ್ಲಿ ವಿಮಾನವನ್ನು ಆರ್ಡರ್ ಮಾಡಿದ್ದೇವೆ. ಇದರ ನಿರ್ವಹಣೆಗಾಗಿ ನಾವು ಹೊಸ ನೇಮಕಾತಿ ಮಾಡುತ್ತೇವೆ," ಎಂದು ತಿಳಿಸಿದ್ದಾರೆ. "ಯಾರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುತ್ತಾರೋ ಅವರು [email protected] ಅಥವಾ [email protected] ಮೂಲಕ ಅರ್ಜಿಸಲ್ಲಿಸಬಹುದಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications