ಸಾಮಾನ್ಯವಾಗಿಯೇ ಎಲ್ಲ ಪ್ರಾಪರ್ಟಿಗಳ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗುತ್ತಿದೆ. ಈ ನಡುವೆ ಐಷಾರಾಮಿ ಪ್ರಾಪರ್ಟಿಗಳ ಬೆಲೆ ಹೆಚ್ಚಳವಾಗದೆ ಇರುತ್ತದೆಯೇ?. ಐಷಾರಾಮಿ ಪ್ರಾಪರ್ಟಿ ಬೆಲೆ ಏರಿಕೆಯ ಜಾಗತಿಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ನಮ್ಮ ದೇಶದ ಮುಂಬೈ ಕಾಣಿಸಿಕೊಂಡಿದೆ.
ನೈಟ್ ಫ್ರಾಂಕ್ ಪ್ರಕಾರ ಐಷಾರಾಮಿ ವಸತಿ ಪ್ರಾಪರ್ಟಿಗಳ ಬೆಲೆ ಏರಿಕೆಯ ವಿಷಯದಲ್ಲಿ ಮುಂಬೈ ಜಾಗತಿಕವಾಗಿ 46 ನಗರಗಳಲ್ಲಿ 4 ನೇ ಸ್ಥಾನದಲ್ಲಿದೆ. ರಿಯಲ್ ಎಸ್ಟೇಟ್ ಸಲಹೆಗಾರ ಸಂಸ್ಥೆಯಾದ ನೈಟ್ ಫ್ರಾಂಕ್ ಇಂಡಿಯಾ ಬುಧವಾರ 'ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ಕ್ಯೂ3 2023' ಅನ್ನು ಬಿಡುಗಡೆ ಮಾಡಿದೆ.

ಬೆಂಗಳೂರು ಕೂಡಾ ಇದೆ ಪಟ್ಟಿಯಲ್ಲಿ
ನೈಟ್ ಫ್ರಾಂಕ್ ಇಂಡಿಯಾದ ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ಕ್ಯೂ3 2023 ಪಟ್ಟಿಯಲ್ಲಿ ಒಟ್ಟಾಗಿ 46 ನಗರಗಳು ಇದೆ. ಇದರಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂಬೈ ಇದ್ದರೆ, ಪಟ್ಟಿಯಲ್ಲಿ ಬೆಂಗಳೂರು ಮತ್ತು ನವದೆಹಲಿ ಕೂಡಾ ಕಾಣಿಸಿಕೊಂಡಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಪ್ರಧಾನ ವಸತಿ ಅಥವಾ ಐಷಾರಾಮಿ ಮನೆಗಳ ಸರಾಸರಿ ವಾರ್ಷಿಕ ಬೆಲೆಗಳಲ್ಲಿ ಈ ಮೂರು ನಗರಗಳಲ್ಲಿ ಏರಿಕೆ ದಾಖಲಾಗಿದೆ ಎಂದು ವರದಿ ಹೇಳಿದೆ.
"2023 ರ ಮೂರನೇ ತ್ರೈಮಾಸಿಕದಲ್ಲಿ ಮುಂಬೈ ಪ್ರೈಮ್ ರೆಸಿಡೆನ್ಶಿಯಲ್ ಬೆಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ನಾಲ್ಕನೇ ಅತೀ ಅಧಿಕ ಬೆಳವಣಿಗೆಯನ್ನು ದಾಖಲಿಸಿದೆ. ಪ್ರೈಮ್ ರೆಸಿಡೆನ್ಶಿಯಲ್ ಬೆಲೆಗಳಲ್ಲಿ ಶೇಕಡ 6.5 ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ 2022ರ ಮೂರನೇ ತ್ರೈಮಾಸಿದಲ್ಲಿದ್ದ 22 ನೇ ಶ್ರೇಯಾಂಕದಿಂದ 18 ಸ್ಥಾನಕ್ಕೆ ಏರಿದೆ," ಎಂದು ನೈಟ್ ಫ್ರಾಂಕ್ ಹೇಳಿದೆ.
ನವದೆಹಲಿ ಮತ್ತು ಬೆಂಗಳೂರು ಕೂಡಾ ಶ್ರೇಯಾಂಕದಲ್ಲಿ ಬೆಳವಣಿಗೆಯನ್ನು ದಾಖಲಿಸಿದೆ. ಎನ್‌ಸಿಆರ್ 2023 ರ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) 10 ನೇ ಸ್ಥಾನಕ್ಕೆ ಸರಿದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 4.1 ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಅವಧಿಯಲ್ಲಿ 36 ನೇ ಶ್ರೇಯಾಂಕವನ್ನು ಹೊಂದಿತ್ತು.
2022 ರ ಮೂರನೇ ತ್ರೈಮಾಸಿಕದಲ್ಲಿ 27 ನೇ ಶ್ರೇಯಾಂಕದಲ್ಲಿದ್ದ ಬೆಂಗಳೂರು 2023ರ ಮೂರನೇ ತ್ರೈಮಾಸಿಕದಲ್ಲಿ 17ನೇ ಶ್ರೇಯಾಂಕಕ್ಕೆ ಏರಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡ 2.2 ರಷ್ಟು ಬೆಳವಣಿಗೆಯನ್ನು ಕಂಡಿದೆ.


Click it and Unblock the Notifications