ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ತಂತ್ರಜ್ಞಾನ ಆಧಾರಿತ ವಿಧಾನದ ಮೂಲಕ ದೇಶದ ಯುವಜನರನ್ನು ಸಬಲೀಕರಣಗೊಳಿಸಲು ಮೈ ಭಾರತ್ 2.0 ಅನ್ನು ಬಿಡುಗಡೆ ಮಾಡಿದೆ. ಈ ವೇದಿಕೆಯು ಯುವಕರಿಗೆ ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶಗಳು ಮತ್ತು ಮಾರ್ಗದರ್ಶನವನ್ನು ಒದಗಿಸುವಂತಹ ಗುರಿಯನ್ನು ಹೊಂದಿದೆ. ಹಾಗಿದ್ದರೆ ಮೈ ಭಾರತ್ 2.0ನ್ನು ಲಕ್ಷಣಗಳೇನು..? ಇದರಲ್ಲಿ ನೋಂದಣಿ ಮಾಡಿಕೊಳ್ಳವುದು ಹೇಗೆ ಎಂವ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಹೌದು, ಮೈ ಭಾರತ್ 2.0 ಈ ಬಾರಿ ಎಐ ವೃತ್ತಿ ಪರಿಕರಗಳು, ವಾಟ್ಸ್ ಅಪ್ ಏಕೀಕರಣದೊಂದಿಗೆ ಬಂದಿದೆ. ಇದನ್ನು ದೆಹಲಿಯ ಎಲೆಕ್ಟ್ರಾನಿಕ್ಸ್ ನಿಕೇತನದಲ್ಲಿ ಯುವ ವ್ಯವಹಾರಗಳ ಇಲಾಖೆ (MoYAS) ಮತ್ತು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (MeitY) ನಡುವೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕುವ ಮೂಲಕ ಈ ಉಪಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಹಭಾಗಿತ್ವವು ಯುವಕರಿಗೆ ಡಿಜಿಟಲ್ ಅವಕಾಶಗಳನ್ನು ಒಳಸಿಕೊಳ್ಳಲು ನೆರವು ಆಗುತ್ತದೆ.

ಮೈ ಭಾರತ್ 2.0 ಪ್ಲಾಟ್‌ಫಾರ್ಮ್ ಎಂದರೇನು?
ಮೈ ಭಾರತ್ (ಮೇರಾ ಯುವ ಭಾರತ್) ಭಾರತದ ಯುವಸಮುದಾಯದ ಡಿಜಿಟಲ್ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ವೇದಿಕೆಯಾಗಿದೆ. ಈ ವೇದಿಕೆಯ ಯುವಕರು ಮತ್ತು ಸರ್ಕಾರಗಳ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಈಗಾಗಲೇ ಸರ್ಕಾರ ಯುವಕರಿಗಾಗಿ ಆರಂಭದಲ್ಲಿ ಮೈ ಭಾರತ್ 1.0 ಸೇವೆಯನ್ನು ಆರಂಭಿಸಿತ್ತು.ಇದರ ಮೂಲಕ ಸ್ವಯಂಸೇವೆ, ಸಮುದಾಯದ ಚಟುವಟಿಕೆಗಳಲ್ಲಿ ಭಾಗಿತ್ವ ಮತ್ತು ಕೌಶಲ್ಯ ಅಭಿವೃದ್ಧಿಗೆ ಮೈ ಭಾರತ್ 1.0 ಯುವಕ ಸಮುದಾಯಕ್ಕೆ ಸಹಾಯವನ್ನು ಮಾಡಿತ್ತು. ಇದನ್ನು ಮತ್ತಷ್ಟು ಸೌಲ್ಯಭ್ಯಗಳನ್ನು ಮತ್ತು ತಂತ್ರಜ್ಞಾನ ಹೆಚ್ಚು ಮಾಡಲು ಮೈ ಭಾರತ್ 2.0 ವೇದಿಕೆಯನ್ನು ಆರಂಭವನ್ನು ಸರ್ಕಾರ ಮಾಡಿದೆ.
ಮೈ ಭಾರತ್ 2.0 ನ ಪ್ರಮುಖ ಲಕ್ಷಣಗಳು
- ಮೈ ಭಾರತ್ 2.0 ನಲ್ಲಿ AI ಚಾಲಿತ ವೃತ್ತಿ ಸೇವೆಗಳಂತಹ ಸೌಲಭ್ಯವನ್ನುಹೊಂದಿದೆ.
- ಮೈ ಭಾರತ್ 2.0 ಮೂಲಕ ಯುವಕರಿಗೆ ಸೂಕ್ತವಾದ ಉದ್ಯೋಗ ಮತ್ತು ಕೌಶ್ಯಲ್ಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಒದಗಿಸಲು ಅವಕಾಶವನ್ನು ಒದಗಿಸಲಾಗುತ್ತದೆ.
- ಯುವಕರಿಗೆ ಡಿಜಿಟಲ್ ಕಲಿಕೆಯನ್ನು ಹೆಚ್ಚು ಮಾಡುವ ಸಲುವಾಗಿ ಗ್ಯಾಮಿಫೈಡ್ ಕಲಿಕೆಗಳು ಇವೆ.
- ಹೊಸ ನವೀಕರಣಗಳಿಗಾಗಿ ಲೈವ್ ಸಂವಹನವನ್ನು ಸಹ ಅವಕಾಶವನ್ನು ಮಾಡಿಕೊಂಡಲಾಗಿದೆ.
- ಕೌಶಲ್ಯ ಹೆಚ್ಚಿಸಲು ತಜ್ಞರ ಮಾರ್ಗದರ್ಶನ ಮತ್ತು ರಸಪ್ರಶ್ನೆಗಳಂತಹ ಸೌಲಭ್ಯಗಳು ಒಂದೇ ಕಡಯಲ್ಲಿ ಸಿಗುತ್ತದೆ.
- ಮೈ ಭಾರತ್ 2.0 ಮೂಲಕ ಯುವಸಮುದಾಯದವರು ಸುಲಭವಾಗಿ ಬೇಟಿ ನೀಡಲಿ ಎಂದು ಬಹುಭಾಷಾ ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್ ಸೇವೆಗಳಿಗೆ ಪ್ರವೇಶಕ್ಕಾಗಿ ವಾಟ್ಸಾಪ್ ಏಕೀಕರಣವನ್ನು ಮಾಡಿದೆ. ಡಿಜಿಟಲ್ ಯುಗಕ್ಕೆ ಯುವಕರನ್ನು ಸಜ್ಜುಗೊಳಿಸಲು ಸರ್ಕಾರ ಈ ಮೇಲಿನ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.
ಮೈ ಭಾರತ್ 2.0 ನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ..?
ಮೈ ಭಾರತ್ 2.0 ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಳ್ಳಲು ಈ ಕೆಳಗಿನ ನೀಡಿರುವ ಹಂತಗಳನ್ನು ಅನುಸರಿಸುವ ಮೂಕಲಕ ನೀವು ನೋಂದಣಿಯನ್ನು ಮಾಡಿಕೊಳ್ಳಬಹುದು.
- ಮೋದಲು ನೀವು ಅಧಿಕೃತ ವವ್ ಸೈಟ್ ಆದ ಮೈ ಭಾರತ್ 2.0ಗೆ ಭೇಟಿ ನೀಡಿ.
- ತದನಂತರ ಮುಖಪುಟದಲ್ಲಿರುವ "ರಿಜಿಸ್ಟರ್" ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ನಿಮ್ಮ ಇಮೇಲ್ ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರಿಯಬೇಕಾಗುತ್ತದೆ.
- ನಂತರ ಅಗತ್ಯವಿರುವ ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಕು.
- ನೋಂದಣಿಯನ್ನು ಪೂರ್ಣಗೊಳಿಸಲು ವಿವರಗಳ ಮೇಲೆ ಕ್ಲಿಕ್ ಮಾಬೇಕಾಗುತ್ತದೆ.ನೋಂದಾಯಿಸಿದ ನಂತರ, ಬಳಕೆದಾರರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಮತ್ತು ಕಲಿಕೆಯ ಅವಕಾಶಗಳನ್ನು ಸಹ ಪಡೆದುಕೊಳ್ಳಬಹುದು.
ಡಿಜಿಟಲ್ ಇಂಡಿಯಾವು ಭಾರತ ಸರ್ಕಾರವು ಪ್ರಾರಂಭಿಸಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯು ದೇಶದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ನಾಗರಿಕರಿಗೆ ಡಿಜಿಟಲ್ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ.
ಮೈ ಭಾರತ್ 2.0 ರಂತಹ ಉಪಕ್ರಮಗಳು ಯುವಕರನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖವಾದ ಪಾತ್ರವನ್ನುವಹಿಸಲು ಸಹಾಯಕ


Click it and Unblock the Notifications