ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ..ಆಪರೇಷನ್ ಸಿಂದೂರ್ ಬಳಿಕ ಮೈಸೂರ್ ಪಾಕ್ ಸಖತ್ ಟ್ರೆಂಡಿಂಗ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ. ಜೈಪುರದ ಸಿಹಿತಿಂಡಿ ಅಂಗಡಿಯಲ್ಲಿ ಕಂಡ ಹೆಸರು ಬದಲಿಸಿದ, ಈ ಮೈಸೂರ್ ಪಾಕ್ ಎಲ್ಲೆಡೆ ಸದ್ದು ಮಾಡುತ್ತಿದೆ.

ಹೌದು, ಮೈಸೂರು ಅರಮನೆಯ ಅಡುಗೆಮನೆಯಲ್ಲಿ ಜನ್ಮ ಪಡೆದ ಈ ಪ್ರಸಿದ್ಧ, ಸಿಹಿತಿಂಡಿ ಕರ್ನಾಟಕದ ಹೆಮ್ಮೆ. ಇದು ಕೇವಲ ಸಿಹಿತಿಂಡಿ ಅಲ್ಲ, ನಾಡಿನ ಹೆಮ್ಮೆ. ಆದರೆ ಇತ್ತೀಚೆಗೆ ಕೆಲವೆಡೆ ಈ ಶಬ್ದ "ಪಾಕ್" ಪಾಕಿಸ್ತಾನವನ್ನು ಸೂಚಿಸುತ್ತಿದೆ ಎಂಬ ಕಾರಣಕ್ಕಾಗಿ ಮೈಸೂರು ಪಾಕ್ ಅನ್ನು ಮೈಸೂರು ಶ್ರೀ ಎಂದು ಮರುನಾಮಕರಣ ಮಾಡಲಾಗಿದೆ.
ಜೈಪುರದ ತ್ಯೋಹಾರ್ ಸ್ವೀಟ್ಸ್, ಬಾಂಬೆ ಮಿಸ್ತಾನ್ ಭಂಡಾರ್ ಮತ್ತು ಅಗರ್ವಾಲ್ ಕ್ಯಾಟರರ್ಸ್ ಮುಂತಾದ ಖ್ಯಾತ ಮಿಠಾಯಿ ಅಂಗಡಿಗಳು ಈ ಬದಲಾವಣೆಯನ್ನು ಮಾಡಿರುವುದು ಸುದ್ದಿ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರು "ಆಮ್ ಪಾಕ್" ಅನ್ನು "ಆಮ್ ಶ್ರೀ", "ಗೊಂಡ್ ಪಾಕ್" ಅನ್ನು "ಗೊಂಡ್ ಶ್ರೀ" ಆಗಿ ಪರಿವರ್ತಿಸಿದ್ದಾರೆ.
'ಪಾಕ್' ಎಂಬ ಪದವು ಕನ್ನಡದ 'ಪಾಕ' ಎಂಬ ಪದದಿಂದ ಬಂದಿದ್ದು, ಅಂದರೆ ಸಕ್ಕರೆಯ ಪಾಕದಿಂದ ತಯಾರಿಸಿದ ತಿನಿಸು. ಹೀಗಾಗಿ ಇದು ತಾಂತ್ರಿಕವಾಗಿ ಸರಿಯಾದ ಪದವಾಗಿದೆ. ಮೈಸೂರಿನಲ್ಲಿ ಜನಿಸಿದ ಈ ಸಿಹಿತಿಂಡಿ ಹೀಗಾಗಿ 'ಮೈಸೂರು ಪಾಕ್' ಎಂಬ ಹೆಸರನ್ನು ಪಡೆದಿದೆ.
ಹೆಸರಿನ ಬದಲಾವಣೆಯ ಹಿಂದೆ ಇರುವ ಕಾರಣ:
ಈ ಬದಲಾವಣೆಗಳು ಯಾದೃಚ್ಛಿಕವಾಗಿಲ್ಲ. ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿ ಮತ್ತು ನಂತರ ನಡೆದ ಆಪರೇಷನ್ ಸಿಂಧೂರ್ ಎಂಬ ಮಿಲಿಟರಿ ಕಾರ್ಯಾಚರಣೆಯ ನಂತರ, ದೇಶದ ಕೆಲವು ಭಾಗಗಳಲ್ಲಿ 'ಪಾಕ್' ಪದವನ್ನು ಪಾಕಿಸ್ತಾನಕ್ಕೆ ಸಂಬಂಧಿತ ಪದವೆಂದು ಪರಿಗಣಿಸಿ ಅದನ್ನು ಸಂಪೂರ್ಣವಾಗಿ ತಳ್ಳಿಹಾಕಲು ಪ್ರಯತ್ನ ನಡೆಸಲಾಗುತ್ತಿದೆ. ಈ ಹೆಸರಿನ ಬದಲಾವಣೆಗಳನ್ನು ಕೆಲವೊಂದು ಮಿಠಾಯಿ ಅಂಗಡಿಗಳು ದೇಶಭಕ್ತಿಯ ಸಂಕೇತ ಎಂದು ಬಣ್ಣಿಸುತ್ತಿದ್ದರೂ, ಇತರರು ಇದನ್ನು ಐತಿಹಾಸಿಕ ಪರಂಪರೆಗೂ ಮತ್ತು ಭಾಷಾ ಸಂಸ್ಕೃತಿಗೂ ಎದುರಾಗುವ ಅಪಾಯವೆಂದು ನೋಡುವರು.
ಈ ಹೆಸರಿನ ಬದಲಾವಣೆಗೆ ಹಲವಾರು ಗ್ರಾಹಕರು ಬೆಂಬಲ ವ್ಯಕ್ತಪಡಿಸಿದ್ದು, "ಇದು ಸೈನಿಕರಿಗೆ ಗೌರವ ಸಲ್ಲಿಸುವ ಒಂದು ರೂಪ" ಎಂದು ಹೇಳುತ್ತಿದ್ದಾರೆ. ಆದರೆ ಇನ್ನೊಂದು ಮುಖದಲ್ಲಿ, ಹಲವರು ಐತಿಹಾಸಿಕವಾಗಿ ಸ್ಥಾಪಿತವಾದ ಹೆಸರನ್ನು ಬದಲಾಯಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಹಜವಾಗಿ, ದೇಶಭಕ್ತಿಯ ಅಭಿವ್ಯಕ್ತಿ ಪ್ರತಿಯೊಬ್ಬರ ವೈಯಕ್ತಿಕ ಹಕ್ಕು. ಆದರೆ, ಐತಿಹಾಸಿಕವಾಗಿ ಪ್ರಮುಖವಾದ, ರಾಜವಂಶದಿಂದ ಹುಟ್ಟಿದ ಮಿಹಿತಿಂಡಿಗೆ ನಾನಾ ಕಾರಣಗಳಿಂದಾಗಿ ಹೆಸರನ್ನು ಬದಲಾಯಿಸುವುದು ಎಷ್ಟು ನ್ಯಾಯಸಮ್ಮತ? ಇದು ಕಲಾ ಪರಂಪರೆ ಮತ್ತು ಭಾಷಾ ಸಂಸ್ಕೃತಿಯ ಮೇಲಿನ ಪ್ರಶ್ನೆಯಾಗಿದೆ.ಬಮೈಸೂರು ಪಾಕ್ ಎಂದರೆ ಕೇವಲ ಒಂದು ಸಿಹಿತಿಂಡಿ ಅಲ್ಲ; ಅದು ಮೈಸೂರಿನ ಸಂಸ್ಕೃತಿಯ, ರಾಜವಂಶದ ಹಾಗೂ ಭಾರತೀಯ ಸಿಹಿತಿಂಡಿಗಳ ಐತಿಹಾಸಿಕ ಪರಂಪರೆಯ ಚಿಹ್ನೆ. ಈ ಹೆಸರಿನಲ್ಲಿ ಬದಲಾವಣೆ ಮಾಡುವ ವಿಚಾರ ದೇಶಭಕ್ತಿಯ ನಾಮದಲ್ಲಿ ನಡೆಯುತ್ತಿರುವರೂ, ಅದರ ಹಿಂದಿನ ಭಾಷಾ ಅರ್ಥ, ಇತಿಹಾಸ ಹಾಗೂ ಜನಸಾಮಾನ್ಯರ ಭಾವನೆಗಳನ್ನೂ ಪರಿಗಣಿಸಬೇಕು.
'ಮೈಸೂರು ಪಾಕ್' ಎಂಬ ಹೆಸರಿನಲ್ಲಿ ನಮ್ಮ ನಾಡಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯ ಅಡಗಿದೆ. ಸಿಹಿತಿಂಡಿಯ ರುಚಿ ಮಾತ್ರವಲ್ಲ, ಅದರ ಹಿಂದಿರುವ ಕಥೆ, ಸಂಸ್ಕೃತಿ ಮತ್ತು ನೆನಪುಗಳೇ ಇದರ ಸತ್ಯಮೂರ್ತಿಗಳು. ಹೆಸರಿನ ಹಕ್ಕು ಕೇವಲ ಶಬ್ದವಲ್ಲ. ಅದು ನಮ್ಮ ಸಂಸ್ಕೃತಿ, ನಾಡಿನ ಹೆಮ್ಮೆ, ಮತ್ತು ತಲೆಮಾರುಗಳ ನೆನೆಪುಗಳನ್ನು ಪ್ರತಿಬಿಂಬಿಸುತ್ತದೆ. ರಾಜಕೀಯ ಅಥವಾ ಭಾವನೆಗಳ ಹೊಡೆಯುವಾಟದಲ್ಲಿ ಈ ಹೆಸರನ್ನು ಬದಲಿಸುವುದು ಅಲಕ್ಷ್ಯ. ಬದಲಿಗೆ, ನಾವು ಈ ಹೆಸರು ಹಾಗೂ ಸಿಹಿತಿಂಡಿಯನ್ನು ಗೌರವಿಸಿ, ಅದರ ಸತ್ಯತೆಯನ್ನು ಪೋಷಿಸಬೇಕು. ನಾವೆಲ್ಲರೂ ಈ ಪರಂಪರೆಯ ಭಾಗವಾಗಿದ್ದೇವೆ ಮತ್ತು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ.


Click it and Unblock the Notifications