ಬ್ಯಾಕ್ ಟ್ಯಾಕ್ಸಿ ಬ್ಯಾನ್ ಆದ ನಂತರ ಆ್ಯಪ್ ಆಧಾರಿತ ಓಲಾ, ಉಬರ್, ರಾಪಿಡೋ ಟ್ಯಾಕ್ಸಿ ಸೇವೆಗಳು ದುಪ್ಪಟ್ಟು ಹಣವನ್ನುವಸೂಲಿ ಮಾಡುವವ ಮೂಲಕ ಹಗಲು ದರೋಡೆ ಮಾಡುತ್ತಿವೆ ಎಂದು ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರ ಅನುಮೋದಿತ, ಮೀಟರ್ ಆಧಾರಿತ ಟ್ಯಾಕ್ಸಿ ಸೇವೆಗಳು ಬೆಂಗಳೂರಿನಲ್ಲಿ ಹೆಚ್ಚಾಗಬೇಕು ಎಂದು ಹೇಳಿದ್ದರು.
ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಆ್ಯಪ್ ಆಧಾರಿತ ಆಟೋ ಸೇವೆಗಳ ಬೆಲೆ ಏರಿಕೆಯ ಬಗ್ಗೆ ತೀವ್ರ ಕ್ರಮ ತಗೆದುಕೊಳ್ಳಬೇಕು.ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಸೂಚನೆಯನ್ನು ನೀಡಿದ್ದರು. ಹೀಗಾಗಿ ಬೆಂಗಳೂರಿನಲ್ಲ'ನಗರ ಆ್ಯಪ್' (Nagara: Meter Auto & Taxi) ಎಂಬ ದೇಶಿಯ ಆಟೋ ಸೇವೆ ಮತ್ತೆ ಪುನರ್ ಆರಂಭವಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಿದೆ.
ಬೆಂಗಳೂರಿನಲ್ಲಿ ಆಟೋ ಚಾಲಕರು ಮಳೆಗಾಲ,ಪೀಕ್ ಸಂದರ್ಭದಲ್ಲಿ ಓಲಾ, ಉಬರ್,ರಾಪಿಡೋದಂತಹ ಆ್ಯಪ್ ಆಧಾರಿತ ಸೇವೆಗಳ ದರ ಹೆಚ್ಚಳವಾಗುತ್ತದೆ.ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಗಳು ಆಗುತ್ತಲ್ಲೇ ಇವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲ'ನಗರ ಆ್ಯಪ್' (Nagara: Meter Auto & Taxi) ಎಂಬ ದೇಶಿಯ ಆಟೋ ಸೇವೆ ಜನಪ್ರಿಯವಾಗುತ್ತಿದೆ. ಇದು ಮೀಟರ್ ಆಧಾರಿತ ದರಗಳನ್ನು ಹೊಂದಿದೆ, ಹೆಚ್ಚುವರಿ ಬೆಲೆ ಇಲ್ಲದೆ ಕಾರ್ಯವನ್ನು ನಿರ್ವಹಿಸುತ್ತಿದೆ.

ನಗರ ಟ್ಯಾಕ್ಸಿ
2024 ರಲ್ಲಿ 11,000 ಚಾಲಕರೊಂದಿಗೆ 'ನಗರ' ಎಂಬ ಹೊಸ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಬೆಂಗಳೂರಿನಲ್ಲಿ ಪ್ರಾರಂಭವನ್ನು ಮಾಡಲಾಗಿತ್ತು.ತದನಂತರ ಕಳೆದ ತಿಂಗಳು ಮರುಪ್ರಾರಂಭಿಸಲಾಗಿದೆ. ಈ ಆ್ಯಪ್ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದರ.ಈ ನಗರ' ಆ್ಯಪ್ ಸೇವೆಯು ಹೆಚ್ಚುತ್ತಿರುವ ದರಗಳ ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಗುರಿಯನ್ನು ಸಹ ಹೊಂದಿದೆ. ಇದಕ್ಕೆ ಸರ್ಕಾರ ಅನುಮೋದನೆ ಕೂಡ ಸಿಕ್ಕಿದೆ. ಯಾವುದೇ ಕಮಿಷನ್ ಇಲ್ಲದೆ ಚಾಲಕರಿಗೆ ಸಂಪೂರ್ಣ ಹಣವನ್ನು ನೀಡುವ ಭರವಸೆಯನ್ನು ಇದು ನೀಡುತ್ತಿದೆ.
ನಗರ ಟ್ಯಾಕ್ಸಿಯ ಮೊದಲಿನಿಂದಲೂ ಜನರಿಗೆ ಉತ್ತಮ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಆ್ಯಪ್‌ನಲ್ಲಿ ಆರ್‌ಟಿಒ ನಿಗದಿಪಡಿಸಿದ ದರಗಳ ಪ್ರಕಾರ ಕೇವಲ 50 ರೂಪಾಯಿಯಿಂದ ಪ್ರಯಾಣ ಆರಂಭವಾಗುತ್ತದೆ. ಇದರಿಂದ ಚಾಲಕರಿಗೂ ಮತ್ತು ಪ್ರಯಾಣಿಕರಿಗೂ ಅನುಕೂಲವಾಗುವ ದರಗಳನ್ನು ನಿಗದಿಪಡಿಸಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಆ್ಯಪ್‌ನ ಗೌಡ ಅವರು, "ಬೆಂಗಳೂರಿನ ಆಟೋ ಪ್ರಯಾಣಿಕರಿಗೆ ನ್ಯಾಯಯುತ ಬೆಲೆ ಸೇವೆ ನೀಡುವುದು ನಮ್ಮ ಗುರಿ. ಇತರ ಆ್ಯಪ್‌ಗಳಲ್ಲಿರುವಂತೆ ಇಲ್ಲಿ ಯಾವುದೇ ಕಮಿಷನ್‌ಗಳಿಲ್ಲ. ಚಾಲಕರು ತಮ್ಮ ಸಂಪೂರ್ಣ ಆದಾಯ ಸಿಗುತ್ತದೆ ಎಂದು ಹೇಳಿದ್ದಾರೆ. ಇದರಿಂದಾಗಿ ನಮ್ಮ ನಗರ ಟ್ಯಾಕ್ಸಿ ಸೇವೆಯು ಚಾಲಕರಿಗೆ ಸಮತೋಲನವನ್ನು ಕಾಯ್ದುಕೊಳ್ಳಲು ಹೆಚ್ಚಿನ ಸಹಾಯವನ್ನು ಮಾಡಲು ಸಹಾಕಾರಿಯಾಗುತ್ತದೆ.
ಬೈಕ್ ಟ್ಯಾಕ್ಸಿ ಓಡಾಟಕ್ಕೆ ಕೇಂದ್ರ ಸರ್ಕಾರ ಅನುಮತಿ
ರಾಪಿಡೊ, ಉಬರ್ ಮತ್ತು ಓಲಾದಂತಹ ಬೈಕ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಯ ಪ್ರಕಾರ ಪ್ರಯಾಣಿಕರ ಸವಾರಿಗಳಿಗೆ ಸಾರಿಗೆಯೇತರ (ಖಾಸಗಿ) ಮೋಟಾರ್ ಸೈಕಲ್‌ಗಳ ಬಳಕೆಯನ್ನು ಅನುಮತಿ ನೀಡಲಾಗಿದೆ. ಇದಕ್ಕೆ ರಾಜ್ಯಗಳು ಹೊಸ ಚೌಕಟ್ಟನ್ನು ರೂಪಿಸುವಂತೆ ಹೇಳಿದ್ದು, ಬೈಕ್ ಟ್ಯಾಕ್ಸಿ ಸೇವೆ ಈಗ ರಾಜ್ಯ ಸರ್ಕಾರದ ಕೈಯಲ್ಲಿ ಇದೆ. ಇದರ ಜೊತೆಗೆ ಕೈಗೆಟುಕುವ ಪ್ರಯಾಣಿಕರ ಚಲನಶೀಲತೆ, ಹೈಪರ್‌ಲೋಕಲ್ ವಿತರಣೆ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೂಡ ಹೇಳಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಓಲಾ, ಉಬರ್‌ನಂತಹ ಆ್ಯಪ್ ಆಧಾರಿತ ಸೇವೆಗಳ ದರ ಏರಿಕೆಯಿಂದ ಬೇಸತ್ತಿರುವ ಪ್ರಯಾಣಿಕರಿಗೆ ನಗರ ಆ್ಯಪ್ ಒಂದು ಬೆಸ್ಟ್ ಆಯ್ಕೆ ಎಮದು ಹೇಳಬಹುದು. ನಗರ ಆ್ಯಪ್ ಸರ್ಕಾರದ ಬೆಂಬಲ ಮತ್ತು ಸಾರ್ವಜನಿಕರ ಸ್ಪಂದನೆ ಎರಡು ಕೂಡ ನಗರ ಆ್ಯಪ್ ಮೇಲೆ ಇದೆ.


Click it and Unblock the Notifications