ನಮ್ಮ ಮೆಟ್ರೋ ತುಮಕೂರಿನವರೆಗೂ ಬರಬೇಕೆಂಬುವುದು ಸಾರ್ವಜನಿಕ ಆಸೆ. ಯಾಕೆಂದರೆ ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ, ಓದುವುದಕ್ಕೆ ಅಥವಾ ವ್ಯಾಪಾರ ಮಾಡುವುದಕ್ಕೆ ಇತರೆ ಕೆಲಸಗಳಿಗೆ ಬೆಂಗಳೂರನ್ನು ಅವಲಂಭಿಸಿಕೊಂಡು ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚು,ಬೆಂಗಳೂರು ತುಮಕೂರಿಗೆ ತೀರ ಸಮೀಪವಿರುವುದರಿಂದ ಹೆಚ್ಚಿನ ಜನ ಓಡಾಟ ಮಾಡುತ್ತಾರೆ ಆದ್ದರಿಂದ ಈ ಮಾರ್ಗದಲ್ಲಿ ಜನದಟ್ಟಣೆ ಜಾಸ್ತಿ ಇದ್ದೇ ಇರುತ್ತದೆ. ಇದನ್ನು ಕಡಿಮೆ ಮಾಡಲು ನಮ್ಮ ಮೆಟ್ರೋ ಬೇಕೇ ಬೇಕು. ಹಾಗಿದ್ರೆ ಬೆಂಗಳೂರಿನಿಂದ ತುಮಕೂರುವರೆಗೂ ವಿಸ್ತರಣೆ ಯಾವಾಗ ? ಎಲ್ಲೆಲ್ಲಿ ನಿಲ್ದಾಣಗಳು ಆರಂಭವಾಗುತ್ತಾವೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು,ನಮ್ಮ ಮೆಟ್ರೋ ಜಾಲ ತುಮಕೂರುವರೆಗೂ ವಿಸ್ತರಣೆ ಸಜ್ಜಾಗಿದೆ. ಈಗಲೇ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು,ಫೆಬ್ರವರಿಯಲ್ಲಿ ಮಾರ್ಗ ನಿರ್ಮಾಣ ಕಾರ್ಯ ಸಾಧ್ಯತಾ ವರದಿಯು ಕರ್ನಾಟಕ ಸರ್ಕಾರಕ್ಕೆ ತಲುಪಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ (ಸಿಲ್ಕ್ ಇನ್ಸ್ಟಿಟ್ಯೂಟ್) ಮಾದಾವರದವರೆಗೂ ಈಗ ರೈಲು ಸಂಚಾರ ನಡೆಸುತ್ತಿದೆ.ಈ ಹಸಿರು ಮಾರ್ಗವನ್ನೇ ಮಾದಾವರದಿಂದ ತುಮಕೂರಿಗೆ ವಿಸ್ತರಣೆ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿ ಈ ಬಗ್ಗೆ 2024 25 ಬಜೆಟ್‌ನಲ್ಲಿಯೂ ಘೋಷಣೆಯನ್ನು ಸಹ ಮಾಡಿದೆ. ಸದ್ಯ ನಮ್ಮ ಮೆಟ್ರೋ ರೈಲುಗಳು ಬೆಂಗಳೂರಿನ ದಕ್ಷಿಣದಿಂದ ಉತ್ತರಕ್ಕೆ 33 ಕಿ.ಮೀ ವಿಸ್ತರವನ್ನು ಹೊಂದಿದೆ.
ಕೇಂದ್ರ ಸರ್ಕಾರದ ಅನುಮತಿ ಬಾಕಿ ಮಾತ್ರ
ನಮ್ಮ ಮೆಟ್ರೋ ಜಾಲ ವಿಸ್ತರಣೆಯ ಬಗ್ಗೆ ಕೆಲ ತಿಂಗಳ ಹಿಂದೆ ಮಾದಾವರದಿಂದ ತುಮಕೂರು ಮಾರ್ಗ ನಿರ್ಮಾಣ ಕಾರ್ಯ ಸಾಧ್ಯತಾ ವರದಿ ನೀಡಲು ಖಾಸಗಿ ಸಂಸ್ಥೆಗೆ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ಗೆ ಟೆಂಡರ್ ನೀಡಿತ್ತು. ಆ ವರದಿ ಸಿದ್ಧವಾಗುತ್ತಿದೆ.ಫೆಬ್ರವರಿ ಅಂತ್ಯದೊಳಗೆ ಸರ್ಕಾರದ ಕೈ ಸೇರಲಿದೆ.ಸರ್ಕಾರವು ಯೋಜನೆಗೆ ಅನುಮತಿ ನೀಡಿ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡರೇ ತುಮಕೂರಿನ ಮೆಟ್ರೋ ಮಾರ್ಗ ನಿರ್ಮಾಣವಾಗಲು ಅಂತಿಮ ಒಪ್ಪಿಗೆ ಸಿಗುತ್ತದೆ.
ತುಮಕೂರು ಮಾರ್ಗ ಯಾವಾಗ ಆರಂಭ?
ನಮ್ಮ ಮೆಟ್ರೋ ಈಗಾಗಲೇ ಹಳದಿ ಮಾರ್ಗ, ಗುಲಾಬಿ ಮಾರ್ಗ, ನೀಲಿ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಮೊದಲು ಈ ಎಲ್ಲಾ ಕಾಮಗಾರಿಗಳು ಮುಗಿಯಬೇಕು.ತದನಂತರ ನಮ್ಮ ಮೆಟ್ರೋದ ಕೆಂಪುಮಾರ್ಗ,ಕಿತ್ತಳೆ ಮಾರ್ಗಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದ್ದು ಆ ಯೋಜನೆ ಮಾರ್ಗ ಸಮೀಕ್ಷೆ ಅಂತಿಮ ಹಂತದಲ್ಲಿವೆ.ಇವುಗಳ ಕಾಮಗಾರಿಯೂ ನಡೆಯಬೇಕಿದೆ. ಆ ಬಳಿಕ ಮಾದಾವರ ದಿಂದ ತುಮಕೂರು ಮಾರ್ಗದ ಬಗ್ಗೆ ಕಾಮಗಾರಿ ಆರಂಭವಾಗಲಿದೆ.2035 ವೇಳೆಗೆ ವೇಳೆಗೆ ತುಮಕೂರು ಮಾರ್ಗದ ಕಾಮಗಾರಿಯನ್ನು ಆರಂಭ ಮಾಡಬಹುದು.
ಎಷ್ಟು ದೂರ?
ಮಾದಾವಾದ ಮೆಟ್ರೋ ನಿಲ್ದಾಣದಿಂದ ತುಮಕೂರಿಗೆ 52.41 ಕಿ.ಮೀ ದೂರವಿದೆ. ಹಾಗೂ ನಮ್ಮ ಮೆಟ್ರೋವನ್ನು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೇ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲಿದೆ.
ಮೆಟ್ರೋ ನಿಲ್ದಾಣಗಳು ಯಾವುವು?
ಮಾದಾವರ,ಮಾಕಳಿ, ದಾಸನಪುರ,ನೆಲಮಂಗಲ,ನೆಲಮಂಗಲ ಬಸ್ ನಿಲ್ದಾಣ,ನೆಲಮಂಗಲ ರಾ.ಹೆ.,ಬೂದಿಹಾಳ,ಟಿ.ಬೇಗೂರು, ಕುಲುವನಹಳ್ಳಿ,ಸೋಂಪುರ ಕೈಗಾರಿಕಾ ಪ್ರದೇಶ,ಡಾಬಸ್‌ಪೇಟೆ,ನಲ್ಲಯ್ಯನಪಾಳ್ಯ,ಚಿಕ್ಕಹಳ್ಳಿ,ಹಿರೇಹಳ್ಳಿ,ಪಂಡಿತನಹಳ್ಳಿ,ಕ್ಯಾತ್ಸಂದ್ರ,ಬಟವಾಡಿ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು ಬಸ್ ನಿಲ್ದಾಣ ಇಷ್ಟು ಸ್ಥಳಗಳು ನಿರೀಕ್ಷಿತ ಮೆಟ್ರೋ ನಿಲ್ದಾಣಗಳಾಗುತ್ತವೆ.
ಮೆಟ್ರೊ ನಿಲ್ದಾಣ ಈ ಮಾರ್ಗದಲ್ಲಿ ಆಗುವುದರಿಂದ ಏನೆಲ್ಲಾ ಅನುಕೂಲ?
*ಬೆಂಗಳೂರು ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.
*ತುಮಕೂರು ನಗರ ಬೆಂಗಳೂರಿಗೆ ಸಮವಾಗಿ ಅಭಿವೃದ್ಧಿಯಾಗಲಿದೆ.
*ಮೆಟ್ರೋ ಮಾರ್ಗದ ಸುತ್ತ ಕಂಪನಿಗಳು ಹೆಚ್ಚಳವಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗಲಿದೆ.
*ಉತ್ತರ ಕರ್ನಾಟಕ ಅಥವಾ ಕರಾವಳಿ ಭಾಗದಿಂದ ಜನರು ಬೆಂಗಳೂರನ್ನು ಬೇಗ ತಲುಪಲು ಸಹಾಯವಾಗುತ್ತದೆ.
*ಮೆಟ್ರೊ ನಿಲ್ದಾಣ ನಿರ್ಮಾಟವಾಗುವುದರಿಂದ ಟ್ರಾಪಿಂಗ್ ಸಮಸ್ಸೆಗೆ ಪರಿಹಾರ ಸಿಗುತ್ತದೆ.


Click it and Unblock the Notifications