ಕ್ಯೂಆರ್ ಮೋಡ್ ಟಿಕೆಟಿಂಗ್ ಮತ್ತು ಸಂಪರ್ಕವಿಲ್ಲದ ಸ್ಮಾರ್ಟ್ ಕಾರ್ಡ್‌ಗಳು ಪ್ರಯಾಣ ದರದಲ್ಲಿ ಶೇಕಡ 5 ರಷ್ಟು ಕಡಿತವನ್ನು ನೀಡಲಾಗುತ್ತದೆ. ಆದರೂ ಬೆಂಗಳೂರು ಮೆಟ್ರೋ ಪ್ರಯಾಣಿಕರ ಗಣನೀಯ ಭಾಗವು ಇನ್ನೂ ಡಿಜಿಟಲ್ ಆಯ್ಕೆಗಳಿಗಿಂತ ಟೋಕನ್ ಖರೀದಿಸಿಯೇ ಪ್ರಯಾಣ ಮಾಡುತ್ತಿದ್ದಾರೆ ಎಂದು ಟೈಮ್ಸ್‌ನೌ ವರದಿ ಮಾಡಿದೆ.
ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಕ್ಯೂಆರ್ ಕೋಡ್‌ಗಿಂತ ಅಧಿಕವಾಗಿ ಟೋಕನ್ ಬಳಕೆ ಮಾಡುವ ಬಗ್ಗೆ ತಿಳಿಸಿದ್ದಾರೆ.

"ನಾವು ಲಭ್ಯವಿರುವ ಹೊಸ ಪ್ರಯಾಣ ಸೌಲಭ್ಯಗಳನ್ನು ನಿಯಮಿತವಾಗಿ ಜನಪ್ರಿಯಗೊಳಿಸುತ್ತೇವೆ. ಅದು ವೇಗವಾಗಿದೆ ಮತ್ತು ಚಲನೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೂ ಇನ್ನೂ ಕೂಡಾ ಹೆಚ್ಚಿನ ಜನರು ಸರತಿ ಸಾಲಿನಲ್ಲಿ ನಿಲ್ಲಲು ಬಯಸುತ್ತಾರೆ. ಮೆಟ್ರೋ ನಿಲ್ದಾಣಗಳಿಗೆ ಟೋಕನ್ ಪಡೆಯಲು ಬಯಸುತ್ತಾರೆ," ಎಂದು ಹೇಳಿದರು.
ಕ್ಯೂಆರ್ ಕೋಡ್ ಬಳಸುವವರೆಷ್ಟು?
ನವೆಂಬರ್‌ನ ಡೇಟಾವನ್ನು ಹಂಚಿಕೊಂಡ ಶಂಕರ್, ಮೆಟ್ರೋ ಒಟ್ಟು 1,60,66,040 ಪ್ರಯಾಣಿಕರನ್ನು ಹೊಂದಿದೆ ಎಂದು ಹೇಳಿದರು. ಅಂಕಿಯ ಪ್ರಕಾರ, 55,54,647 ಪ್ರಯಾಣಿಕರು ಟೋಕನ್ ಖರೀದಿಸಿದ್ದಾರೆ. ಇದು ಕ್ಯೂಆರ್ ಟಿಕೆಟ್‌ಗಳ್ನು ಬಳಸಿದ 18,76,894 ಮಂದಿಗಿಂತ ಮೂರು ಪಟ್ಟು ಅಧಿಕವಾಗಿದೆ. ಇನ್ನು ಸ್ಮಾರ್ಟ್ ಕಾರ್ಡ್ ಬಳಕೆದಾರರ ಸಂಖ್ಯೆ 86,34,499 ಆಗಿದೆ.
ಬಿಎಂಆರ್‌ಸಿಎಲ್ ಇತ್ತೀಚೆಗೆ ಗರಿಷ್ಠ ಆರು ಪ್ರಯಾಣಿಕರಿಗೆ ಒಂದೇ ಕ್ಯೂಆರ್ ಟಿಕೆಟ್ ಅನ್ನು ಬಿಡುಗಡೆ ಮಾಡಿದೆ. ಕೋವಿಡ್ ನಂತರದ ಅವಧಿಯಲ್ಲಿ ಕಾರ್ಡ್ ಬಳಕೆದಾರರು ಅನೇಕ ತೊಂದರೆಗಳನ್ನು ಎದುರಿಸಿದಾಗ, ಅನೇಕರು ಅವುಗಳನ್ನು ಬ್ಯಾಕಪ್ ಆಗಿ ಇಟ್ಟುಕೊಂಡು ಟೋಕನ್‌ಗಳನ್ನು ಖರೀದಿಸಲು ಪ್ರಾರಂಭಿಸಿದರು. ಆದರೆ ಆ ಸಮಸ್ಯೆ ಈಗ ಪರಿಹಾರವಾಗಿದೆ.
ಟೋಕನ್‌ಗಳನ್ನು ಏಕೆ ಬಳಸಲಾಗುತ್ತಿದೆ?
ಟೋಕನ್‌ಗಳನ್ನು ಇನ್ನೂ ಏಕೆ ಬಳಸಲಾಗುತ್ತಿದೆ ಎಂದು ಕೇಳಿದಾಗ ಮೆಟ್ರೋ ಪ್ರಯಾಣಿಕರೊಬ್ಬರು ಟೈಮ್ಸ್‌ಗೆ, "ನಾವು ಪ್ರತಿನಿತ್ಯ ಪ್ರಯಾಣ ಮಾಡುವುದಾದರೆ ಕಾರ್ಡ್ ಖರೀದಿ ಮಾಡುವುದು ಅತೀ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳುತ್ತಾರೆ.
"ನಾನು ಅಪರೂಪಕ್ಕೆ ಮೆಟ್ರೋದಲ್ಲಿ ಪ್ರಯಾಣ ಮಾಡುವುದಾದರೆ ನಾವು ಅದನ್ನು ಏಕಾಗಿ ಬಳಸಬೇಕು?. ಅದನ್ನು ಏಕಾಗಿ ಖರೀದಿ ಮಾಡಬೇಕು?. ಅದನ್ನು ಏಕೆ ಪ್ರತಿದಿನ ಒಯ್ಯಬೇಕು?. ನಾನು ಪ್ರಯಾಣಿಸುವಾಗಲೇ ಟೋಕನ್ ಖರೀಸುವುದು ಆ ಸಂದರ್ಭದಲ್ಲಿ ಉತ್ತಮವಾಗಿದೆ," ಎಂದು ಅಭಿಪ್ರಾಯಿಸಿದ್ದಾರೆ.
ಇನ್ನೋರ್ವ ಪ್ರಯಾಣಿಕ, "ಮೆಟ್ರೋವನ್ನು ಆಗಾಗ್ಗೆ ಬಳಸದ ಬಳಕೆದಾರರು ಕಾರ್ಡ್ ಖರೀದಿಸುವಾಗ ಅನಗತ್ಯವಾಗಿ 50 ರೂಪಾಯಿಗಳನ್ನು ಕಾರ್ಡ್‌ನಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಹೆಚ್ಚು ಕಾರ್ಡ್ ಬಳಕೆದಾರರು ಎಂದರೆ ಬಿಎಂಆರ್‌ಸಿಎಲ್‌ಗೆ ಹೆಚ್ಚಿನ ಆದಾಯ. ಕಾರ್ಡ್‌ನಲ್ಲಿ ವಿಧಿಸಲಾದ ಶುಲ್ಕವನ್ನು ಮನ್ನಾ ಮಾಡಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದರು.


Click it and Unblock the Notifications