ಹೊಸ ವರ್ಷದ ಸಂಭ್ರಮಾಚರಣೆಗೆ ಇನ್ನು ಕೆಲವು ದಿನಗಳಷ್ಟೇ ಮಾತ್ರ ಬಾಕಿ ಇದೆ. ಜನರು 2024ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳುಲು ಜನರು ಸಜ್ಜಾಗಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನ್ಯೂ ಇಯರ್ ಸಂಭ್ರಮ ರಂಗೇರಲಿದ್ದು, ಜನದಟ್ಟಣೆ ಹೆಚ್ಚಿರುತ್ತದೆ. ಹಾಗಾಗಿ ನಮ್ಮ ಮೆಟ್ರೋ ಡಿಸೆಂಬರ್ 31 ರ ಮಧ್ಯರಾತ್ರಿಯಿಂದ ಮಧ್ಯರಾತ್ರಿ 2:15 ರವರೆಗೆ ಮೆಟ್ರೋ ಸೇವೆ ಅವಧಿ ವಿಸ್ತರಣೆ ಮಾಡಿ ಬೆಂಗಳೂರಿಗರಿಗೆ ಸಿಹಿ ಸುದ್ದಿ ಕೊಟ್ಟಿದೆ.
ಹೌದು,ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 31 ರ ಮಧ್ಯರಾತ್ರಿಯಿಂದ ಮಧ್ಯರಾತ್ರಿ 2:15 ರವರೆಗೆ ಮೆಟ್ರೋ ಸೇವೆ ಅವಧಿ ವಿಸ್ತರಿಸಲಾಗಿದೆ. ನೇರಳೆ, ಹಸಿರು ಮಾರ್ಗ ಮೆಟ್ರೋ ರೈಲು ಸೇವೆಗಳ ಸಮಯ ವಿಸ್ತರಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಮಾಹಿತಿ ತಿಳಿಸಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಸೇವೆ ಅವಧಿ ವಿಸ್ತರಣೆ
ಜನರು ಹೊಸ ವರ್ಷದಂದು ಜಾಲಿ ಮೋಡ್‌ನಲ್ಲಿ ರಾತ್ರಿ ಇಡೀ ಪಾರ್ಟಿ ಮಾಡುತ್ತಾರೆ. ಈ ಸಂದರ್ಬದಲ್ಲಿ ಅವರು ಸುರಕ್ಷಿತವಾಗಿ ಮನೆ ಸೇರಿಕೊಳ್ಳಲು ಪ್ರಯಾಣಿಕರ ಅನುಕೂಲವಾಗಲಿ ಎಂದು ಬೆಂಗಳೂರು ಮೆಟ್ರೋ ತನ್ನ ಸೇವೆಯನ್ನು ವಿಸ್ತರಣೆ ಮಾಡಿದೆ.
10 ನಿಮಿಷಕ್ಕೊಂದು ರೈಲು
ಡಿಸೆಂಬರ್ 31ರ ರಾತ್ರಿ 11ರಿಂದ 10 ನಿಮಿಷಕ್ಕೊಂದು ರೈಲು ಸೇವೆ ಇರಲಿದ್ದು, ಜನವರಿ 1ರಂದು ಮುಂಜಾನೆ 2 ಗಂಟೆಗೆ ಎಲ್ಲ ಮೆಟ್ರೋ ಟರ್ಮಿನಲ್ನಿಂದ ಕೊನೆ ರೈಲು ಹೊರಡಲಿದೆ. ಆದ್ರೆ, ಮೆಜೆಸ್ಟಿಕ್ನಿಂದ ಮುಂಜಾನೆ 2.40ಕ್ಕೆ ಕೊನೆ ರೈಲು ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
MG ರಸ್ತೆಯಲ್ಲಿ ನಿರೀಕ್ಷಿತ ಜನಸಂದಣಿಯ ದೃಷ್ಟಿಯಿಂದ, MG ರಸ್ತೆಯ ಮೆಟ್ರೋ ನಿಲ್ದಾಣವು ಪ್ರವೇಶ ಮತ್ತು ನಿರ್ಗಮನಕ್ಕಾಗಿ ಮುಚ್ಚಲ್ಪಡುತ್ತದೆ. ಡಿಸೆಂಬರ್ 31, 2024 ರಂದು ರಾತ್ರಿ 11:00 ರಿಂದ. ರೈಲುಗಳು ಹತ್ತಿರದ ನಿಲ್ದಾಣಗಳಲ್ಲಿ ನಿಲ್ಲುತ್ತವೆ-ಟ್ರಿನಿಟಿ ಮತ್ತು ಪ್ರಯಾಣಿಕರ ಬಳಕೆಗೆ ಕಬ್ಬನ್ ಪಾರ್ಕ್ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ,ನಿರ್ಗಮನ ದ್ವಾರ ಬಂದ್
ಹೊಸ ವರ್ಷದ ಪಾರ್ಟಿಗಳು ಹೆಚ್ಚಾಗಿ ಬಿಗ್ರೇಡ್ ರೋಡ್ನಲ್ಲಿ ನಡೆಯುತ್ತದೆ. ಆ ದಿನ ಕಾಲಿಡುವುದಕ್ಕೂ ಸ್ಥಳವಿಲ್ಲದಷ್ಟು ಜನಜಂಗುಳಿ ಇರುತ್ತದೆ. ಇನ್ನೂ ಜನರು ಪಾರ್ಟಿ ಮುಗಿಸಿಕೊಂಡು ಎಲ್ಲರೂ ತಮ್ಮ ವಾಸಸ್ಥಳಕ್ಕೆ ತೆರವಾಗ ಅವರೆಲ್ಲರೂ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಾರೆ. ಹೀಗಾಗಿ ಅಲ್ಲಿ ಹೆಚ್ಚಿನ ಜನಸಂಖ್ಯೆ ಇರುತ್ತದೆ. ಇದನ್ನು ಕಡಿಮೆ ಮಾಡಲು ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಪ್ರವೇಶ ಹಾಗೂ ನಿರ್ಗಮನ ದ್ವಾರ ಬಂದ್ ಆಗಲಿವೆ. ಪ್ರಯಾಣಿಕರಿಗೆ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಮೆಟ್ರೋ ಸೇವೆ ಇರುತ್ತದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸುಲಭ ಪ್ರಯಾಣಕ್ಕಾಗಿ ಪೇಪರ್ ಟಿಕೆಟ್ ಸೌಲಭ್ಯ
ಹೊಸ ವರ್ಷದ ಪಾರ್ಟಿ ಬ್ರಿಗೇಡ್ ರಸ್ತೆಯಲ್ಲಿ ಮುಗಿಸಿಕೊಂಡು ಮೆಟ್ರೋ ಮೂಲಕ ಹೋಗಬೇಕಿರುವವರಿಗೆ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಹೋಗುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ನೀವು ಬೇರೆ ಸ್ಥಳಕ್ಕೆ ಹೋಗೇಕಾದರೆ ಮೆಜೆಸ್ಟಿಕ್ನಲ್ಲಿ ಮೆಟ್ರೋ ಬದಲಾವಣೆ ಮಾಡಿಕೊಳ್ಳಬಹುದು. ಇದಕ್ಕೆ ನಿಮಗೆ ಮುಂಗಡವಾಗಿ ಅಂದು ರಿಟರ್ನ್ ಹೋಗಲು ಐವತ್ತು ರುಪಾಯಿ ಪೇಪರ್ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ತಿಳಿಸಿದೆ.
ಟಿಕೆಟ್ ಪಡೆದುಕೊಳ್ಳಲು ನೂಕುನುಗ್ಗಲು ಆಗುವುದರಿಂದ ಈ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ ಬೇಗ ಬೇಗ ಹರಿದು ಹಾಕಬಹುದು.ಇದರಿಂದ ಯಾವುದೇ ಸ್ಕ್ಯಾನ್ ಮಾಡುವ ಅಗತ್ಯವಿರುವುದಿಲ್ಲ.ಇದರಿಂದ ಜನಸಂದಣೆಯೂ ಸಹ ಕಡಿಮೆಯಾಗುತ್ತದೆ ಎಂಬ ಉದ್ದೇಶದಿಂದ ಈ ಕ್ರಮವನ್ನು ಕೈಗೊಂಡಿದೆ.
ಹೊಸ ವರ್ಷದ ಪಾರ್ಟಿಗೆ ಬರುವವರು ಸಾಮಾನ್ಯವಾಗಿ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣಕ್ಕೆ ಬರುತ್ತಾರೆ. ಇಲ್ಲಿಂದ ಪಕ್ಕದ ಬ್ರಿಗೇಡ್ ರಸ್ತೆ, ಚರ್ಚ್‌ಸ್ಟೀಟ್‌ಗಳಿಗೆ ಹೆಚ್ಚಿನ ಜನರು ತೆರಳಿ ಪಾರ್ಟಿಗಳನ್ನು ಮಾಡುತ್ತಾರೆ. ರಾತ್ರಿ ಹೊಸ ವರ್ಷಾಚರಣೆ ಮುಗಿದ ನಂತರವೂ ಈ ನಿಲ್ದಾಣದಲ್ಲಿ ದಟ್ಟಣೆ ಹೆಚ್ಚಾಗುವ ಕಾರಣ, ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ಅಲರ್ಟ್ ಆಗಿದೆ. ಬಹುತೇಕ ಬೆಂಗಳೂರಿನ ಎಲ್ಲ ಕಡೆಯಿಂದ ಎಂ.ಜಿ.ರಸ್ತೆಗೆ ಜನ ಬರುವುದರಿಂದ ಜನಸಂಖ್ಯೆಯ ದಟ್ಟಣೆ ಕಡಿಮೆ ಮಾಡಲು ಈ ಪ್ಲ್ಯಾನ್ ಮಾಡಿದೆ. ಸಾರ್ವಜನಿಕರು ಕೂಡ ಅಂದು ಸುತ್ತಾಡಲು ಇಲ್ಲಿಗೆ ಮೆಟ್ರೋದಲ್ಲೇ ಹೆಚ್ಚಾಗಿ ಬರುತ್ತಾರೆ.


Click it and Unblock the Notifications