ಬಸ್ ಟಿಕೆ ದರ ಏರಿಕೆ ಆಯ್ತು, ಮೆಟ್ರೋ ಟಿಕೆಟ್ ದರ ಆಯ್ತು ಆದರೆ ಇದೀಗ ಮೆಟ್ರೋ ಒನ್ ಡೇ, 3 ಡೇ,5ಡೇ ಪಾಸ್ ದರ ಏರಿಕೆ ಮಾಡಲಾಗಿದ್ದು, ಬೆಂಗಳೂರಿಗರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿಯಿಂದಾಗಿ ಬಹಳಷ್ಟು ಜನರು ಮೆಟ್ರೋವನ್ನೇ ಅವಲಂಭಿಸಿಕೊಂಡಿದ್ದರು.ಆದರೆ ಬೆಲೆ ಏರಿಕೆಯಿಂದ ಜನರು ಆಗ್ರೋಶ ವ್ಯಕ್ತಪಡಿಸಿದ್ದರು ಬೆಲೆ ಏರಿಕೆ ಮಾತ್ರ ಕಡಿಮೆಯಾಗಿಲ್ಲ.
ಹೌದು, ಮೆಟ್ರೋ ದರ ಏರಿಕೆಯ ಬೆನ್ನಲ್ಲೇಯೇ ಬಿಎಂಆರ್ಸಿಎಲ್, ಒನ್ ಡೇ, 3 ಡೇ,5ಡೇ ಪಾಸ್ ದರ ಹೆಚ್ಚಳವನ್ನು ಮಾಡಿದೆ.

ಮೆಟ್ರೋ ಪಾಸ್ ದರ ಏರಿಕೆಯ ವಿವರ
1 ದಿನದ ಪಾಸ್ ದರ 150ರಿಂದ 300 ರೂ.ಗೆ ಏರಿಕೆ
3 ದಿನದ ಪಾಸ್ 350ರಿಂದ 600 ರೂಪಾಯಿಗೆ ಏರಿಕೆ
ಐದು ದಿನಗಳ ಪಾಸ್ 550 ರೂ.ನಿಂದ 800 ರೂಪಾಯಿವರೆಗೆ ಏರಿಕೆ
ಈ ಮೊದಲು ನಮ್ಮ ಮೆಟ್ರೋ ದಿನದ ಪಾಸ್ 150 ರೂ ಇತ್ತು. 3 ದಿನದ ಪಾಸ್ 350 ರೂ. ಹಾಗೂ 5 ದಿನದ ಪಾಸ್ ಗೆ 550 ಇತ್ತು. ಆದ್ರೆ, ಇದೀಗ ಈ ಪಾಸ್ಗಳ ಡಬಲ್ ಆಗಿದೆ. ಕೇವಲ 4 ಮಾರ್ಗದಲ್ಲಿ ಮಾತ್ರ ಸಂಚಾರಿಸುವ ಮೆಟ್ರೋ ಪಾಸ್ ದರಗಳು ಬಲು ದುಬಾರಿಯಾಗಿವೆ.
ಪ್ರಯಾಣಿಕರ ಸಂಖ್ಯೆ ಕುಸಿತ
ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಪರಿಷ್ಕೃತ ದರವನ್ನು ನೋಡಿದ ಜನರು, ಮೆಟ್ರೋಗಿಂತ ಬಿಎಂಟಿಸಿ ಬಸ್, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ.ಮೆಟ್ರೋದಲ್ಲಿ ಖಾಲಿ ಖಾಲಿ ಸೀಟುಗಳು ಇದೇ ಮೊದಲ ಭಾರೀ ಕಂಡು ಬರುತ್ತಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ. ಮೆಟ್ರೋ ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದೆ.
ಫೆಬ್ರವರಿ 3ರಂದು ದರ ಏರಿಕೆಗೂ ಮೊದಲು ಮೆಟ್ರೋ ಪ್ರಯಾಣಿಕರ ಸಂಖ್ಯೆ 8.7 ಲಕ್ಷವಾಗಿತ್ತು. ಆದರೆ ಫೆಬ್ರವರಿ 10ರಂದು ದರ ಏರಿಕೆ ಬಳಿಕ ಇದು 8.2 ಲಕ್ಷಕ್ಕೆ ಇಳಿಕೆಯಾಗಿದೆ. ಮಾಹಿತಿಗಳ ಪ್ರಕಾರ ಶೇ 4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಪರಿಷ್ಕೃತ ದರ ಪಟ್ಟಿ ಫೆಬ್ರುವರಿ 9ರಿಂದ ಜಾರಿಗೆ ಬಂದಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಫೆಬ್ರುವರಿ 10ರಂದು (ಸೋಮವಾರ) 8,28,149 ಜನರು ಹಾಗೂ ಫೆಬ್ರುವರಿ 11ರಂದು (ಮಂಗಳವಾರ) 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ.
ಇಂದು ಮಧ್ಯಾಹ್ನ ಮಹತ್ವದ ತೀರ್ಮಾನ
ಬಿಎಂಆರ್ಸಿಎಲ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದು, ಈ ದರ ಏರಿಕೆ ಸಂಬಂಧ ಸಂಪೂರ್ಣ ವಿವರವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನೀಡಲಿದ್ದಾರೆ. ಇಂದು (ಫೆಬ್ರವರಿ 13) ಮಧ್ಯಾಹ್ನ 2.30ಕ್ಕೆ ಬಿಎಂಆರ್ಸಿಎಲ್ ಎಂಡಿ ಮಹೇಶ್ವರ ರಾವ್ ಸುದ್ದಿಗೋಷ್ಠಿ ನಡೆಸಲಿದ್ದು, ದರ ಏರಿಕೆಗೆ ಸ್ಪಷ್ಟನೆ ನೀಡಲಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಿಸಿದ ಪಟ್ಟಿ
ಕಿ.ಮೀ ನೂತನ ಬೆಲೆ 0 ನಿಂದ 2 ಕಿ.ಮೀ 10 ರೂ.
2 ರಿಂದ 4 ಕಿ.ಮೀ 20 ರೂ.
4 ರಿಂದ 6 ಕಿ.ಮೀ 30 ರೂ
6 ರಿಂದ 8 ಕಿ.ಮೀ 40 ರೂ.
8 ರಿಂದ 10 ಕಿ.ಮೀ 50 ರೂ.
10 ರಿಂದ 15 ಕಿ.ಮೀ 60 ರೂ.
15 ರಿಂದ 20 ಕಿ.ಮೀ 70 ರೂ.
20 ರಿಂದ 25 ಕಿ.ಮೀ 80 ರೂ.


Click it and Unblock the Notifications