ಮೆಟ್ರೋ ಪ್ರಯಾಣ ದರ ಫೆಬ್ರವರಿ 9 ರಂದು ಏರಿಕೆಯ ನಂತರ ಪ್ರಯಾಣಿಕರು ತ್ರೀವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇಶದ ಅತ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಮಾರ್ಪಟ್ಟ ಬೆಂಗಳೂರು ಮೆಟ್ರೋದ ಶುಲ್ಕ ಪರಿಷ್ಕರಣೆಯಿಂದ ಹಲವಾರು ಟೀಕೆಗಳನ್ನು ಎದುರಿಸುತ್ತಿದೆ.
ಹೌದು,ಬಸವನಗುಡಿ ಶಾಸಕ ಎಲ್.ಎ.ರವಿ ಸುಬ್ರಹ್ಮಣ್ಯ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮತ್ತು ದಾಸರಹಳ್ಳಿ ಶಾಸಕ ಎಸ್.ಮುನಿರಾಜು ನೇತೃತ್ವದ ಬಿಜೆಪಿ ನಾಯಕರ ನಿಯೋಗ ಫೆಬ್ರವರಿ 10 ರಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್ ಅವರನ್ನು ಭೇಟಿ ಮಾಡಿ ಹೆಚ್ಚಳವನ್ನು ವಿರೋಧಿಸಿ ಮನವಿ ಪತ್ರವನ್ನು ಸಹ ಸಲ್ಲಿಕೆ ಮಾಡಿದ್ದಾರೆ.

ಜಯನಗರ,ವಿಜಯನಗರ, ದಾಸರಹಳ್ಳಿ, ಮಾದಾವರ, ಹಲಸೂರು ಮತ್ತು ಕೆಂಗೇರಿ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೊ ದರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ನಡಿಸಿದ್ದಾರೆ.
ಪ್ರಯಾಣಿಕರ ಮೇಲೆ ಹೊರೆಯಾಗುವ ಬದಲು ಸಾಮೂಹಿಕ ಸಾರಿಗೆಯನ್ನು ಪ್ರೋತ್ಸಾಹಿಸುವಂತೆ ನಿಗಮವನ್ನು ಒತ್ತಾಯಿಸಿದ್ದು, ದರಗಳು ಬಹುತೇಕವಾಗಿ ದ್ವಿಗುಣಗೊಂಡಿವೆ ಎಂದು ಬಿಜೆಪಿ ಪಕ್ಷವು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು-ಹಾಸನ ನಡುವೆ ಇಂಟರ್‌ಸಿಟಿ ರೈಲು ಆರಂಭ?
ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿನ ಮೆಟ್ರೋ ವ್ಯವಸ್ಥೆಗಳಿಗೆ ಹೋಲಿಸಿದರೆ,ಬೆಂಗಳೂರಿನ ಪ್ರಯಾಣಿಕರು ಈಗ ಶೇ.60 ರಷ್ಟು ಹೆಚ್ಚು ಪಾವತಿಸುತ್ತಾರೆ.ಈ ಹೆಚ್ಚಳವನ್ನು 'ಅವೈಜ್ಞಾನಿಕ' ಎಂದು ಖಂಡಿಸಿದ ಪಕ್ಷ, ಪ್ರಯಾಣಿಕರ ಮೇಲೆ ಆರ್ಥಿಕ ಹೊರೆಯನ್ನು ವರ್ಗಾಯಿಸುವ ಬದಲು ಅದಕ್ಷತೆ ಮತ್ತು ಆದಾಯ ಸೋರಿಕೆಯನ್ನು ಸರಿಪಡಿಸಬೇಕು ಎಂದು ವಾದಿಸಿತು. ಶುಲ್ಕ ಹೆಚ್ಚಳವನ್ನು ಹಿಂತೆಗೆದುಕೊಳ್ಳದಿದ್ದರೆ ನಿರಂತರ ಪ್ರತಿಭಟನೆಗಳ ಬಗ್ಗೆ ಎಚ್ಚರಿಕೆ ನೀಡಿತು.
ಕಾಂಗ್ರೆಸ್ ನೇತೃತ್ವದ ಸರ್ಕಾರವು ಜನವಿರೋಧಿ ನೀತಿಗಳು ಮತ್ತು ಆರ್ಥಿಕ ದುರುಪಯೋಗವನ್ನು ಹೊಂದಿದೆ ಎಂದು ಆರೋಪ ಸಹ ಕೇಳಿ ಬರುತ್ತಿದೆ.
ಬಿಜೆಪಿ ಮೆಟ್ರೋ ಯೋಜನೆಗಳಲ್ಲಿನ ವಿಳಂಬವನ್ನು ಎತ್ತಿ ತೋರಿಸಿತು,ನಿರ್ದಿಷ್ಟವಾಗಿ18 ಕಿಮೀ ಹಳದಿ ಮಾರ್ಗವು ರೈಲು ಬೋಗಿಗಳ ಕೊರತೆಯಿಂದಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ಬಾದಾರೆ.ಇರುವ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಮತ್ತು ಪರಿಣಾಮಕಾರಿ ಸೇವೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಶೇ.50 ರಷ್ಟು ರಿಯಾಯಿತಿ: ರಿಯಾಯಿತಿಗೆ ಎಐಡಿಎಸ್‌ಒ ಒತ್ತಾಯ
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಬಿಎಂಆರ್‌ಸಿಎಲ್ ವಿದ್ಯಾರ್ಥಿಗಳಿಗೆ ಮೆಟ್ರೋ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಬೇಕೆಂದು ಒತ್ತಾಯಿಸಿದೆ. ಪ್ರತಿದಿನ 7 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಬಳಸುತ್ತಾರೆ. ಅವರಲ್ಲಿ ಸುಮಾರು ಶೇ. 30 ರಷ್ಟು ವಿದ್ಯಾರ್ಥಿಗಳು. ಈ ಶುಲ್ಕ ಹೆಚ್ಚಳವು ವಿದ್ಯಾರ್ಥಿಗಳ ದೈನಂದಿನ ಪ್ರಯಾಣವನ್ನು ನಿಭಾಯಿಸುವ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಎಐಡಿಎಸ್ಒ ಹೇಳಿದೆ.
DCM DK Shivakumar: ಬೆಂಗಳೂರು ಹೊರತಾಗಿ ಇತರೆಡೆ ಕೈಗಾರಿಕೆ ಸ್ಥಾಪನೆಗೆ ಆದ್ಯತೆ: ಡಿ ಕೆ ಶಿವಕುಮಾರ್
ಫೆಬ್ರವರಿ 9, 2025 ರಿಂದ ಜಾರಿಗೆ ಬರುವಂತೆ ಶೇ. 45 ರಷ್ಟು ಪ್ರಯಾಣ ದರ ಹೆಚ್ಚಳವನ್ನು ಸಂಘಟನೆ ಟೀಕಿಸಿದೆ. ಮೂಲತಃ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದ್ದ ಮೆಟ್ರೋ ರೈಲು ಯೋಜನೆಯು ಈಗ ಹಠಾತ್ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಮತ್ತು ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆಯಾಗಿದೆ ಎಂದು ಮಾಹಿತಿಯನ್ನು ತಿಳಿಸಿದೆ.
ದರ ವೈಪರೀತ್ಯಗಳನ್ನು ಪರಿಶೀಲಿಸುತ್ತಿರುವ ಬಿಎಂಆರ್‌ಸಿಎಲ್
ಫೆಬ್ರವರಿ 10 ರ ಪ್ರಯಾಣಿಕರ ಅಂಕಿಅಂಶಗಳನ್ನು ಬಿಎಂಆರ್‌ಸಿಎಲ್ ಇನ್ನೂ ಬಿಡುಗಡೆ ಮಾಡದಿದ್ದರೂ, ಅನೇಕ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ರೈಲುಗಳ ಒಳಗೆ ಸಾಮಾನ್ಯಕ್ಕಿಂತ ಕಡಿಮೆ ಜನಸಂದಣಿಯನ್ನು ವರದಿ ಮಾಡಿದ್ದಾರೆ.
ಸಾಮಾನ್ಯ ಸೋಮವಾರಕ್ಕೆ ಹೋಲಿಸಿದರೆ. ಹಲವಾರು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಹ ಮಾತನಾಡುತ್ತಾ, ದರ ಏರಿಕೆಯಿಂದಾಗಿ ಖಾಸಗಿ ವಾಹನಗಳಿಗೆ ಬದಲಾಯಿಸಿರುವುದಾಗಿ ಹೇಳಿದ್ದಾರೆ.
ಕೆಲವು ಮಾರ್ಗಗಳಲ್ಲಿ ಅಸಮಾನ ದರ ಏರಿಕೆಯ ಬಗ್ಗೆ ಪ್ರಯಾಣಿಕರಿಂದ ಹಲವಾರು ದೂರುಗಳು ಬಂದ ನಂತರ, ಪ್ರಯಾಣ ದರ ವೈಪರೀತ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಪರಿಷ್ಕೃತ ದರಗಳಲ್ಲಿನ ನಮಗೆ ಪ್ರತಿಕ್ರಿಯೆ ಬಂದಿದೆ ಮತ್ತು ನಾವು ಅವುಗಳನ್ನು ಪರಿಶೀಲಿಸುತ್ತಿದ್ದೇವೆ. ಕೆಲವು ಪ್ರಯಾಣಿಕರು ಕೆಲವು ಹಂತದ ದರ ಹೆಚ್ಚಳಗಳು ಅಸಹಜವಾಗಿ ಹೆಚ್ಚಿವೆ ಎಂದು ವರದಿ ಮಾಡಿರುವುದರಿಂದ ನಾವು ಪ್ರಯಾಣಿಕರ ಡೇಟಾವನ್ನು ಸಹ ವಿಶ್ಲೇಷಿಸುತ್ತಿದ್ದೇವೆ.
ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಕಾಂಗ್ರೆಸ್, ಶುಲ್ಕ ಏರಿಕೆಗೆ ಕೇಂದ್ರ ಸರ್ಕಾರವನ್ನು ದೂಷಿಸಿದೆ. ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು "@BJP4Karnataka ಸಂಸದರ ಅಭಿಪ್ರಾಯ #ModiSarkar ಗೆ ಮುಖ್ಯವಲ್ಲ. ಕರ್ನಾಟಕ ಕೇಂದ್ರ ಸರ್ಕಾರಕ್ಕೆ 'ಕಾಮಧೇನು' - ನಾವು ಬಿಜೆಪಿ ಸರ್ಕಾರಕ್ಕೆ ತೆರಿಗೆಗಳನ್ನು ತುಂಬಲು ಮಾತ್ರ ಅಸ್ತಿತ್ವದಲ್ಲಿದ್ದೇವೆ, ನಂತರ ಅವುಗಳನ್ನು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಇತರ ಬಿಜೆಪಿ ಆಡಳಿತದ ರಾಜ್ಯಗಳಿಗೆ ಮರುಹಂಚಿಕೆ ಮಾಡಲಾಗುತ್ತದೆ. ವಿರೋಧ ಪಕ್ಷದ ನಾಯಕರು ನಾಳೆ ಮೆಟ್ರೋ ನಿಲ್ದಾಣಗಳಿಗೆ ಭೇಟಿ ನೀಡಿ ಜನರಿಗೆ ಗುಲಾಬಿಗಳನ್ನು ನೀಡುವ ಮೂಲಕ ಕ್ಷಮೆಯಾಚಿಸುವವರೆಗೆ ಕಾಯುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
More From GoodReturns

Bengaluru LPG Cylinder: ಬೆಂಗಳೂರಿನಲ್ಲಿ ಗೃಹಬಳಕೆ LPG ಸಿಲಿಂಡರ್ ಬುಕ್ಕಿಂಗ್ ಏರಿಕೆ: ಪೂರೈಕೆ ಸುರಕ್ಷಿತ, ಆತಂಕ ಬೇಡ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ



Click it and Unblock the Notifications