ನಮ್ಮ ಮೊಟ್ರೋ ತನ್ನ ಪ್ರಯಾಣಿಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಪರಿಸರ ಸ್ನೇಹಿ ಕ್ರಮಕ್ಕೆ ಬೆಂಗಳೂರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ತನ್ನ ಪಾರ್ಕಿಂಗ್ ನೀತಿಯನ್ನು ಅಂತಿಮಗೊಳಿಸಿದೆ. ಶೀಘ್ರದಲ್ಲೇ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗುತ್ತದೆ. ದಿನಕ್ಕೆ ಕೇವಲ 10 ರೂ. ಮಾತ್ರ ಪಾವತಿಸಬೇಕಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ
ಹೌದು, ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು, ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ ಮತ್ತು ಅಂಗವಿಕಲರಿಗೆ ವಿಶೇಷ ಸ್ಥಳವನ್ನು ಒದಗಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.

ಈ ಬಗ್ಗೆ 2024 ರಲ್ಲಿ 2.0 ನಿಯಮವನ್ನು ಅಕ್ಟೋಬರ್ ತಿಂಗಳಲ್ಲಿ ಸಿದ್ದಪಡಿಸಲಾಗಿತು. ಇದರ ಜೊತೆಗೆ ಸಾರ್ವಜನಿಕ ಪ್ರತಿಕ್ರಿಯೆಗೆ ಸಹ ಅವಕಾಶ ಮಾಡಿಕೊಳ್ಳಲಾಗಿತು.ಮೆಟ್ರೋ ರೈಲು ನಿಗಮ ಲಿಮಿಟೆಡ್ ನಾವು ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಪ್ರತಿಕ್ರಿಯೆಯನ್ನು ಸಹ ಪಡೆದುಕೊಳ್ಳಲಾಗಿತು.ಸೈಕ್ಲಿಸ್ಟ್‌ಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆ ಇದೆ. ಹೀಗಾಗಿ ನಾವು ಅದನ್ನು ಸೇರಿಸಿದ್ದೇವೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ದಿನಕ್ಕೆ ಜಸ್ಟ್ 10 ರೂ.!
ಮೆಟ್ರೋ ನಿಲ್ದಾಣದಲ್ಲಿ ಸೈಕಲ್ ಪ್ಯಾಕಿಂಗ್‌ಗೆ ಒಂದು ಗಂಟೆಗೆ 1 ರೂ ಮತ್ತು ಇಡೀ ದಿನಕ್ಕೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಮುಂದಿನ ದಿನಮಾನಗಳಲ್ಲಿ BMRCL ನೆಟ್‌ವರ್ಕ್‌ನಲ್ಲಿರುವ ಪ್ರತಿ ಮೆಟ್ರೋ ನಿಲ್ದಾಣ ಮತ್ತು ಮುಂಬರುವ ನಿಲ್ದಾಣಗಳಲ್ಲಿ ಸೈಕ್ಲಿಸ್ಟ್‌ಗಳಿಗೆ ಸ್ಥಳವನ್ನು ಮೀಸಲು ಇಡುತ್ತೇವೆ ಎಂದು ಅಧಿಕಾರಿ ತಿಳಿಸಿದ್ದರು.
ಅಂಗವಿಕಲರಿಗಾಗಿ ವಿಶೇಷ ಸ್ಥಳ ಮೀಸಲು
ಅಂಗವಿಕಲರು ಮೆಟ್ರೋದಲ್ಲಿ ಪ್ರಯಾಣಿಸಲು ಪ್ರೋತ್ಸಾಹಿಸಲು, ಪ್ರತಿ ನಿಲ್ದಾಣವು ಅವರಿಗಾಗಿ ವಿಶೇಷ ಸ್ಥಳವನ್ನು ಮೀಸಲು ಇಟ್ಟಿದ್ದೇವೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ. ಹಾಗೂ ಮೆಟ್ರೋ ನಿಲ್ದಾಣದಲ್ಲಿ ನಿಗದಿತ ಸ್ಥಳದಲ್ಲಿ ಕನಿಷ್ಠ ಎರಡು ವಾಹನಗಳನ್ನು ನಿಲ್ಲಿಸಲು ಸ್ಥಳವಿರುತ್ತದೆ. ದೊಡ್ಡ ನಿಲ್ದಾಣಗಳಲ್ಲಿ ಹೆಚ್ಚಿನ ಸ್ಥಳವಿರುತ್ತದೆ ಎಂದು ಮಾಹಿತಿಯನ್ನು ಅವರು ತಿಳಿಸಿದ್ದರು.
ಮೆಟ್ರೋ ಪ್ರಯಾಣಿಕರಲ್ಲದವರಿಗೆ ಶಾಕ್
ಮೆಟ್ರೋ ಪ್ರಯಾಣಿಕರಲ್ಲದವರು ಪಾರ್ಕಿಂಗ್ ಸ್ಥಳವನ್ನು ಬಳಸುವುದನ್ನು ತಡೆಯಲು, ಬಿಎಂಆರ್‌ಸಿಎಲ್ ಪಾರ್ಕಿಂಗ್ ಶುಲ್ಕ ಪಾವತಿಯನ್ನು ಮೆಟ್ರೋ ನಿಲ್ದಾಣಗಳಲ್ಲಿ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಪ್ಲಾನ್ ಮಾಡಿದೆ.
ಮೆಟ್ರೋ ನಿಲ್ದಾಣದಲ್ಲಿ ನಗದು, ಪಾವತಿ ಸ್ವೀಕರಿಸುವುದಿಲ್ಲ
ಬಿಎಂಟಿಸಿ ನೆಟ್‌ವರ್ಕ್‌ನೊಂದಿಗೆ ಸಂಯೋಜಿಸಲ್ಪಟ್ಟು ಜನಪ್ರಿಯತೆ ಗಳಿಸಿದ ನಂತರ, ಮುಂದಿನ ದಿನಮಾನಗಳಲ್ಲಿ ಪಾರ್ಕಿಂಗ್ ಶುಲ್ಕಕ್ಕಾಗಿ ನಗದು ಅಥವಾ ಯಾವುದೇ ಇತರ ಪಾವತಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.
ಬಹುಮಹಡಿ ಪಾರ್ಕಿಂಗ್ ಸ್ಥಳ ಅವಕಾಶ
ರಾಜ್ಯ ಸರ್ಕಾರದ ಸಾರಿಗೆ ಆಧಾರಿತ ಅಭಿವೃದ್ಧಿ ನೀತಿಯು ಅದನ್ನು ಅನುಮತಿಸದ ಕಾರಣ ನಾವು ಸ್ವತಂತ್ರ ಬಹುಮಹಡಿ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ.ಆದರೆ ನಾವು ಸಾಧ್ಯವಾದಷ್ಟು ಜಾಗವನ್ನು ಒದಗಿಸಲು ಯೋಚನೆ ಮಾಡಿದ್ದೇವೆ ಎಂದರು.
ಹೆಚ್ಚಿನ ಪ್ರಯಾಣಿಕರನ್ನು ಗಮನ ಸಳೆಯಲು
ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಆಕರ್ಷಿಸಲು ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದರು.
ಸದ್ಯಕ್ಕೆ ಮೆಟ್ರೋ ಟಿಕೆಟ್ ದರ ಹೆಚ್ಚಾಗಲ್ಲ
ಹಲವು ದಿನಗಳಿಂದ ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇತ್ತು.ಇದಕೆಲ್ಲಾ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು,ಬೆಂಗಳೂರು ಮಂದಿಗೆ ನಿರಾಳವಾಗಿದೆ.ಹೌದು, ಸದ್ಯಕ್ಕೆ ಮೆಟ್ರೋ ರೈಲು ಟಿಕೆಟ್ ದರ ಏರಿಕೆ ಮಾಡಲ್ಲ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿವೆ.
ಈಗಲೇ ನಮ್ಮ ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದ್ದ ಬಿಎಂಆರ್ಸಿಎಲ್ ಇದೀಗ ಆ ವಿಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಟಿಕೆಟ್ ದರ ಟೆನ್ಷನ್ ದರ ಕಡಿಮೆ ಮಾಡಿದೆ. ಮೆಟ್ರೋ ಟಿಕೆಟ್ ದರ ಹೆಚ್ಚಳ ಸಂಬಂಧ ಕೇಂದ್ರ ಸರ್ಕಾರ ವರದಿ ಕೇಳಲಾಗಿತು.ಅಂದ್ರೆ ಅದಕ್ಕೆ ಅನುಮತಿ ಕೊಟ್ಟಿಲ್ಲ ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಈ ವರ್ಷ ಏರಿಕೆಯಾಗುವ ಅನುಮಾನವಿದೆ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿವೆ.


Click it and Unblock the Notifications